ಮೋದಿ ನಾಗಾಲೋಟಕ್ಕೆ ಕನ್ನಡದ ಕುಮಾರ ಬ್ರೇಕ್

First Published May 20, 2018, 7:20 AM IST
Highlights

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿಯ ಗೆಲುವಿನ ನಾಗಾಲೋಟಕ್ಕೆ ಇದೀಗ ತಡೆ ಬಿದ್ದಿದೆ. ಇದರ ಪಾತ್ರಧಾರಿ ಬೇರಾರೂ ಅಲ್ಲ ‘ಕನ್ನಡದ ಕುವರ’ ಕುಮಾರಸ್ವಾಮಿ. 

ಬೆಂಗಳೂರು (ಮೇ 20) : ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿಯ ಗೆಲುವಿನ ನಾಗಾಲೋಟಕ್ಕೆ ಇದೀಗ ತಡೆ ಬಿದ್ದಿದೆ. ಇದರ ಪಾತ್ರಧಾರಿ ಬೇರಾರೂ ಅಲ್ಲ ‘ಕನ್ನಡದ ಕುವರ’ ಕುಮಾರಸ್ವಾಮಿ. 

ಅದು ಹೇಗೆ ಗೊತ್ತಾ? 2014 ರಲ್ಲಿ ಕೇಂದ್ರದಲ್ಲಿ  ಅಧಿಕಾರಕ್ಕೆ ಬಂದ ನಂತರ ಚುನಾವಣೆಗಳ ಮೇಲೆ ಚುನಾವಣೆಗಳನ್ನು ಗೆದ್ದು ದೇಶದ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಧಿಪತ್ಯ ಸ್ಥಾಪಿಸಿತ್ತು ಮೋದಿ-ಶಾ ಜೋಡಿ. 

ಕರ್ನಾಟಕದಲ್ಲೂ ಅಧಿಕಾರಕ್ಕೇರಿದ್ದರೆ 22 ನೇ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೇರಿದಂತಾಗುತ್ತಿತ್ತು. ಕುಮಾರಸ್ವಾಮಿ ಸಹಕರಿಸಿದ್ದರೆ, ಬಿಜೆಪಿಗೆ ಇದು ಸುಲಲಿತವೂ ಆಗುತ್ತಿತ್ತು. ಆದರೆ, ಕುಮಾರಸ್ವಾಮಿ ಪಟ್ಟು ಬಿಡಲಿಲ್ಲ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರ ರಚಿಸಿದ ಬಿಜೆಪಿಯನ್ನು ಮುಂದೆ ಹೋಗಗೊಡಲಿಲ್ಲ. ಕಾಂಗ್ರೆಸ್ ಜತೆ ಕೈಜೋಡಿಸಿ ಬಿಜೆಪಿ ಸರ್ಕಾರಕ್ಕೆ ತಡೆ ಒಡ್ಡಿದರು.

click me!