ಎಚ್‌ಡಿಕೆ ಪ್ರಮಾಣ ವಚನಕ್ಕೆ ತೆರಳದಂತೆ ಬಿಜೆಪಿ ಶಾಸಕರಿಗೆ ಸೂಚನೆ

Published : May 22, 2018, 02:19 PM ISTUpdated : May 22, 2018, 02:54 PM IST
ಎಚ್‌ಡಿಕೆ ಪ್ರಮಾಣ ವಚನಕ್ಕೆ ತೆರಳದಂತೆ ಬಿಜೆಪಿ ಶಾಸಕರಿಗೆ ಸೂಚನೆ

ಸಾರಾಂಶ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಬುಧವಾರ ಸಂಜೆ ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿದ್ದು, ಭರ್ಜರಿ ಸಿದ್ಧತೆಗಳು ನಡೆದಿವೆ. ಆದರೆ ಈ ಕಾರ್ಯಕ್ರಮಕ್ಕೆ  ಹಾಜರಾಗದಂತೆ ಬಿಜೆಪಿ ಶಾಸಕರಿಗೆ ಹೈ ಕಮಾಂಡ್ ಸೂಚನೆ ನೀಡಿದೆ.   

ಬೆಂಗಳೂರು  [ಮೇ 22]:   ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಬುಧವಾರ ಸಂಜೆ ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿದ್ದು, ಭರ್ಜರಿ ಸಿದ್ಧತೆಗಳು ನಡೆದಿವೆ.

ನಾಳೆ ಹೆಚ್.ಡಿ ಕುಮಾರಸ್ವಾಮಿ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು,  ಆದರೆ ಈ ಸಮಾರಂಭಕ್ಕೆ ಬಿಜೆಪಿ ನಾಯಕರು  ಮಾತ್ರ ಗೈರಾಗಲಿದ್ದಾರೆ. 

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋಗದಂತೆ ಬಿಜೆಪಿ ಮುಖಂಡರಿಗೆ ಹೈಕಮಾಂಡ್ ಸೂಚನೆ ನೀಡಿದೆ. ಹೈ ಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ  ಬಿಜೆಪಿ ಶಾಸಕರೆಲ್ಲರೂ ಕಾರ್ಯಕ್ರಮಕ್ಕೆ ತೆರಳದಿರಲು ನಿರ್ಧರಿಸಿದ್ದಾರೆ. 

ಯಾರೊಬ್ಬರು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೋಗಬೇಡಿ. ಸದ್ಯಕ್ಕೆ ತಟಸ್ಥವಾಗಿದ್ದುಕೊಂಡು ಎಲ್ಲವನ್ನು ನೋಡುತ್ತಿರಿ ಎಂದು ಬಿಜೆಪಿ ಹೈ ಕಮಾಂಡ್ ನಿಂದ ಸೂಚನೆ ಬಂದಿದ್ದು,  ಈ ಬಗ್ಗೆ ಬಿ.ಎಸ್. ಯಡಿಯೂರಪ್ಪ ಶಾಸಕರಿಗೆ ತಿಳಿಸಿದ್ದಾರೆ. 

"

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ