ಕಾಂಗ್ರೆಸ್ಸೇ ಸಿಎಂ ಹುದ್ದೆ ಬೇಡ ಎಂದಿದ್ದು : ಎಚ್.ಡಿ ದೇವೇಗೌಡ

First Published May 22, 2018, 1:13 PM IST
Highlights

ಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್ ಪಕ್ಷ ಒಲ್ಲೆ ಎಂದಿತು. ಹೀಗಾಗಿತಮ್ಮ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ನಾಮಾಂಕಿತ ಮಾಡಬೇಕಾಯಿತು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಆದರೆ ಮುಖ್ಯ ಖಾತೆಗಳು ತಮಗೆ ಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ ಎನ್ನಲಾಗಿದೆ. 

ನವದೆಹಲಿ:  ಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್ ಪಕ್ಷ ಒಲ್ಲೆ ಎಂದಿತು. ಹೀಗಾಗಿತಮ್ಮ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ನಾಮಾಂಕಿತ ಮಾಡಬೇಕಾಯಿತು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ‘ಇಂಡಿಯಾ ಟುಡೇ’ ಜತೆ ಮಾತನಾಡಿದ ಅವರು, ‘ಸಿಎಂ ಹುದ್ದೆಯನ್ನು ನೀವೇ ತೆಗೆದುಕೊಂಡು ಬಿಡಿ ಎಂದು ಮೊದಲು 
ನಾನು ಕಾಂಗ್ರೆಸ್‌ಗೆ ಹೇಳಿದೆ. ಆದರೆ ಅವರು ಒಲ್ಲೆ ಎಂದರು. ನಾನು ಹಾಗೂ ನನ್ನ ಮಗ ಅಧಿಕಾರದ ಹಿಂದೆ ಬಿದ್ದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಮುಖ ಹುದ್ದೆಗಳಿಗೆ ಪಟ್ಟು :  ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್ ಪಕ್ಷ ಉಳಿದ ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿಯಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಈ ಮೂಲಗಳ ಪ್ರಕಾರ ಕಾಂಗ್ರೆಸ್ ನಾಯಕತ್ವವು ಗೃಹ, ಕಂದಾಯ, ಗ್ರಾಮೀಣಾಭಿ ವೃದ್ಧಿ ಹಾಗೂ ಪಂಚಾಯತ್ ರಾಜ್, ಕೃಷಿ ಮತ್ತು ಇಂಧನದಂತಹ ಖಾತೆ ಗಳಿಗೆ ಪಟ್ಟು ಹಿಡಿಯಲಿದೆ. 

ಇನ್ನು ಜೆಡಿಎಸ್ ಸಿಎಂ ಹುದ್ದೆಯ ಜತೆಗೆ ಹಣಕಾಸು ಇಲಾಖೆಯನ್ನು ಸಹಜ ವಾಗಿಯೇ ಪಡೆಯಲಿದೆ. ಇದಲ್ಲದೆ,ಜೆಡಿಎಸ್‌ಗೆ ಲೋಕೋಪಯೋಗಿ, ಸಮಾಜ ಕಲ್ಯಾಣದಂತಹ ಖಾತೆಗ ಳನ್ನು ಪಡೆದುಕೊಳ್ಳುವ ಸಾಧ್ಯತೆ ಯಿದೆ. ಇವುಗಳನ್ನು ಹೊರತುಪಡಿಸಿ ಇತರ ಖಾತೆಗಳನ್ನು ಹೊಂದಾಣಿಕೆ ಮೂಲಕ ಹಂಚಿಕೊಳ್ಳಬಹುದು. ಆದರೆ, ಈ ಪ್ರಮುಖ ಖಾತೆಗಳ ಬಗ್ಗೆ ಮಾತ್ರ ಕಾಂಗ್ರೆಸ್ ಪಟ್ಟು ಹಿಡಿಯಲಿದೆ ಎನ್ನಲಾಗಿದೆ.

click me!