12 ದಾಖಲೆ ತೋರಿಸಿ ಮತ ಚಲಾಯಿಸಿ

Published : May 01, 2018, 11:22 AM IST
12 ದಾಖಲೆ ತೋರಿಸಿ ಮತ ಚಲಾಯಿಸಿ

ಸಾರಾಂಶ

ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಕೇಂದ್ರ ಅಥವಾ ರಾಜ್ಯ ಸರಕಾರ, ಖಾಸಗಿ ಕಂಪನಿಗಳು ನೀಡುವ ಫೋಟೋ ಗುರುತಿನ ಚೀಟಿ, ಬ್ಯಾಂಕ್ ಅಥವಾ ಅಂಚೆ ಕಚೇರಿ ನೀಡುವ ಪಾಸ್ ಬುಕ್, ಪ್ಯಾನ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಕಾರ್ಮಿಕರ ಸಚಿವಾಲಯ ನೀಡಿರುವ ಆರೋಗ್ಯ ವಿಮೆಯ ಸ್ಮಾಟ್‌ಕಾರ್ಡ್, ಎನ್ ಪಿಆರ್ ಸ್ಮಾರ್ಟ್‌ಕಾರ್ಡ್, ಭಾವಚಿತ್ರವುಳ್ಳ ಪಿಂಚಣಿ ದಾಖಲೆ

ಬೆಂಗಳೂರು(ಮೇ.01): ಹೊಸದಾಗಿ ಮತಪಟ್ಟಿಗೆ ಸೇರ್ಪಡೆ ಯಾಗಿರುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲು ಕ್ರಮ ವಹಿಸಲಾಗಿದೆ. ಗುರುತಿನ ಚೀಟಿ ದೊರೆತವರು ಅದನ್ನು ತೋರಿಸಿ
ಮತದಾನ ಮಾಡಬಹುದು. ಒಂದು ವೇಳೆ ಗುರುತಿನ ಚೀಟಿ ದೊರೆಯದವರು ಅಥವಾ ಕಳೆದುಹೋಗಿದ್ದರೆ 12 ಪರ್ಯಾಯ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು ಎಂದು ಮಂಜುನಾಥ ಪ್ರಸಾದ್ ತಿಳಿಸಿದರು.
ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಕೇಂದ್ರ ಅಥವಾ ರಾಜ್ಯ ಸರಕಾರ, ಖಾಸಗಿ ಕಂಪನಿಗಳು ನೀಡುವ ಫೋಟೋ ಗುರುತಿನ ಚೀಟಿ, ಬ್ಯಾಂಕ್ ಅಥವಾ ಅಂಚೆ ಕಚೇರಿ ನೀಡುವ ಪಾಸ್ ಬುಕ್, ಪ್ಯಾನ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಕಾರ್ಮಿಕರ ಸಚಿವಾಲಯ ನೀಡಿರುವ ಆರೋಗ್ಯ ವಿಮೆಯ ಸ್ಮಾಟ್‌ಕಾರ್ಡ್, ಎನ್ ಪಿಆರ್ ಸ್ಮಾರ್ಟ್‌ಕಾರ್ಡ್, ಭಾವಚಿತ್ರವುಳ್ಳ ಪಿಂಚಣಿ ದಾಖಲೆ, ಚುನಾವಣಾ ಆಯೋಗವು ನೀಡುವ ದೃಢೀಕೃತ ಫೋಟೋ ವೋಟರ್ ಸ್ಲಿಪ್ಸ್, ಸಂಸದರು, ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, ಆಧಾರ್ ಕಾರ್ಡ್ ಇವುಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ಮತದಾನ ಮಾಡಬಹುದು ಎಂದರು.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ