ಜೆಡಿಎಸ್ ಶಾಸಕನ ನಾಮಪತ್ರ ತಿರಸ್ಕೃತ : ಚಾಮರಾಜಪೇಟೆ ಅಭ್ಯರ್ಥಿಗಳದು ಸಿಂಧು

Published : Apr 25, 2018, 05:51 PM IST
ಜೆಡಿಎಸ್ ಶಾಸಕನ ನಾಮಪತ್ರ ತಿರಸ್ಕೃತ : ಚಾಮರಾಜಪೇಟೆ ಅಭ್ಯರ್ಥಿಗಳದು ಸಿಂಧು

ಸಾರಾಂಶ

ಸಿ ಫಾರಂ ಪಡೆದ ನಿಸರ್ಗ ಅವರು ಜೆಡಿಎಸ್'ನ ಅಭ್ಯರ್ಥಿಯಾದರೆ ಮುನಿಶಾಮಪ್ಪ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಆದರೆ ಇವರ ಅರ್ಜಿ ವಜಾಗೊಂಡಿದೆ.

ಬೆಂಗಳೂರು(ಏ.25): ಜೆಡಿಎಸ್ ಶಾಸಕ ಪಿಳ್ಳಮುನಿಶಾಮಪ್ಪ ನಾಮಪತ್ರ ತಿರಸ್ಕೃತವಾಗಿದೆ. ನಾಮಪತ್ರ ಪರಿಶೀಲನೆಯಲ್ಲಿ ಅಧಿಕಾರಿಗಳು ವಜಾಗೊಳಿಸಿದ್ದಾರೆ.

ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ಅವರಿಗೆ ಈ ಮೊದಲು ಏ.20 ರಂದು  ಜೆಡಿಎಸ್'ನಿಂದ ಬಿ ಫಾರಂ ನೀಡಲಾಗಿತ್ತು. ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಪಕ್ಷದ ಇನ್ನೋರ್ವ ಮುಖಂಡ ನಿಸರ್ಗ ನಾರಾಯಣಸ್ವಾಮಿ ಅವರಿಗೆ ಸಿ ಫಾರಂ ನೀಡಿ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು.

ಸಿ ಫಾರಂ ಪಡೆದ ನಿಸರ್ಗ ಅವರು ಜೆಡಿಎಸ್'ನ ಅಭ್ಯರ್ಥಿಯಾದರೆ ಮುನಿಶಾಮಪ್ಪ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಆದರೆ ಇವರ ಅರ್ಜಿ ವಜಾಗೊಂಡಿದೆ. ಚಾಮರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ನಾಮಪತ್ರ ಸಿಂಧುಗೊಂಡಿದೆ. ಈ ಬಗ್ಗೆ ಚುನಾವಣಾ ಅಧಿಕಾರಿ ರೂಪ ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಜೆಡಿಎಸ್'ನಿಂದ ಬಂಡಾಯಗೊಂಡು ಕಾಂಗ್ರೆಸ್ ಸೇರಿದ್ದರು. ಪ್ರಕರಣ ಸಭಾಧ್ಯಕ್ಷರ ಅಂಗಳದಲ್ಲಿರುವದರಿಂದ ಚುನಾವಣಾ ಅಧಿಕಾರಿಗಳ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಸಿಂಧುಗೊಳಿಸಲಾಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಾಗಿದೆ.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ