ಪ್ರಚಾರದ ವೇಳೆ ಎಚ್’ಡಿಕೆಗೆ ಹಣ ಸಹಾಯ ಮಾಡಿದ ರೈತ

Published : Apr 25, 2018, 04:07 PM ISTUpdated : Apr 25, 2018, 04:14 PM IST
ಪ್ರಚಾರದ ವೇಳೆ ಎಚ್’ಡಿಕೆಗೆ ಹಣ ಸಹಾಯ ಮಾಡಿದ ರೈತ

ಸಾರಾಂಶ

ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಗ್ರಾಮದ ಕೃಷ್ಣಪ್ಪ ಎಂಬ ರೈತ ಎಚ್’ಡಿಕೆ ಬೇಡವೆಂದರೂ ನೀವು ಹಣ ಪಡೆದುಕೊಳ್ಳಲೇಬೇಕೆಂದು ಹಠ ಹಿಡಿದಿದ್ದಾರೆ.  ಏಕಾಂಗಿಯಾಗಿ ರಾಜ್ಯದಾದ್ಯಾಂತ ರೈತರ ಪರವಾದ ಧ್ವನಿಯಾಗಿರುವ ಕುಮಾರಸ್ವಾಮಿಯವರಿಗೆ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ಕುಮಾರಸ್ವಾಮಿ ಬಳಿ ಹಣ ಇಲ್ಲ. ಕಾಂಗ್ರೆಸ್ ಬಿಜೆಪಿಯವರು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ನಮ್ಮೂರು ಕೂಟಗಲ್’ನಲ್ಲೇ ಕಾಂಗ್ರೆಸ್’ನವರು ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದಾರೆ. ಅದನ್ನ ನೋಡಿದ ನಾನು ದುಡಿದು ಸೇರಿಸಿಟ್ಟಿದ್ದ 2 ಲಕ್ಷ ಹಣವನ್ನ ಕುಮಾರಣ್ಣನಿಗೆ ಕೊಟ್ಟಿದ್ದೇನೆ. ನನಗೆ ಆತ್ಮ ತೃಪ್ತಿ ಇದೆ. ನಾನು ಯಾರು ಅನ್ನೋದು ಕುಮಾರಣ್ಣನಿಗೆ ಗೊತ್ತೊ ಇಲ್ವೋ ಗೊತ್ತಿಲ್ಲ. ಆದರೆ ದೇವೇಗೌಡ್ರು ಕುಮಾರಣ್ಣ ರೈತರನ್ನ ಕಾಪಾಡ್ತಾರೆ ಅನ್ನೋ ನಂಬಿಕೆ ನನಗಿದೆ. ಆದ್ದರಿಂದ ನಾನು ಎರಡು ಲಕ್ಷ ಹಣ ಕೊಟ್ಟಿದ್ದೇನೆ. ಕುಮಾರಣ್ಣರಿಂದ ನನಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲ. ಅವರು ಮುಖ್ಯಮಂತ್ರಿಯಾಗಬೇಕು ಅನ್ನೋದೊಂದೇ ಆಸೆ ಎಂದು ರೈತ ಕೃಷ್ಣಪ್ಪ ಹೇಳಿದ್ದಾರೆ. 

ಬೆಂಗಳೂರು (ಏ. 25): ಎಚ್’ಡಿಕೆಗೆ ರೈತರೊಬ್ಬರು ಹಣ ನೀಡಿದ್ದಾರೆ. 

ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಗ್ರಾಮದ ಕೃಷ್ಣಪ್ಪ ಎಂಬ ರೈತ ಎಚ್’ಡಿಕೆ ಬೇಡವೆಂದರೂ ನೀವು ಹಣ ಪಡೆದುಕೊಳ್ಳಲೇಬೇಕೆಂದು ಹಠ ಹಿಡಿದಿದ್ದಾರೆ. 

ಏಕಾಂಗಿಯಾಗಿ ರಾಜ್ಯದಾದ್ಯಾಂತ ರೈತರ ಪರವಾದ ಧ್ವನಿಯಾಗಿರುವ ಕುಮಾರಸ್ವಾಮಿಯವರಿಗೆ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ಕುಮಾರಸ್ವಾಮಿ ಬಳಿ ಹಣ ಇಲ್ಲ. ಕಾಂಗ್ರೆಸ್ ಬಿಜೆಪಿಯವರು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ನಮ್ಮೂರು ಕೂಟಗಲ್’ನಲ್ಲೇ ಕಾಂಗ್ರೆಸ್’ನವರು ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದಾರೆ. ಅದನ್ನ ನೋಡಿದ ನಾನು ದುಡಿದು ಸೇರಿಸಿಟ್ಟಿದ್ದ 2 ಲಕ್ಷ ಹಣವನ್ನ ಕುಮಾರಣ್ಣನಿಗೆ ಕೊಟ್ಟಿದ್ದೇನೆ. ನನಗೆ ಆತ್ಮ ತೃಪ್ತಿ ಇದೆ. ನಾನು ಯಾರು ಅನ್ನೋದು ಕುಮಾರಣ್ಣನಿಗೆ ಗೊತ್ತೊ ಇಲ್ವೋ ಗೊತ್ತಿಲ್ಲ. ಆದರೆ ದೇವೇಗೌಡ್ರು ಕುಮಾರಣ್ಣ ರೈತರನ್ನ ಕಾಪಾಡ್ತಾರೆ ಅನ್ನೋ ನಂಬಿಕೆ ನನಗಿದೆ. ಆದ್ದರಿಂದ ನಾನು ಎರಡು ಲಕ್ಷ ಹಣ ಕೊಟ್ಟಿದ್ದೇನೆ. ಕುಮಾರಣ್ಣರಿಂದ ನನಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲ. ಅವರು ಮುಖ್ಯಮಂತ್ರಿಯಾಗಬೇಕು ಅನ್ನೋದೊಂದೇ ಆಸೆ ಎಂದು ರೈತ ಕೃಷ್ಣಪ್ಪ ಹೇಳಿದ್ದಾರೆ. 

ಬಡವರ, ರೈತರ ನಾಯಕ ಕುಮಾರಸ್ವಾಮಿಯವರ ಕಷ್ಟ ನೋಡಿ ನಾಡಿನ ಪ್ರತಿಯೊಬ್ಬ ರೈತ ಕೂಡ ಮಿಡಿತಿದ್ದಾನೆ. ಕೂಡಗಲ್ ಕೃಷ್ಣಪ್ಪ ಕಷ್ಟದ ನಡುವೆಯೂ ಸಹಾಯ ಮಾಡಿದ್ದಾರೆ. ಅವರಿಗೆ ಭಗವಂತ ಒಳ್ಳೆಯದನ್ನ ಮಾಡಲಿ. ಇಂತಹ ಮುಗ್ಧ ನಿಷ್ಕಲ್ಮಷ ಮನಸ್ಸಿನ ರೈತರ ಆಶೀರ್ವಾದದಿಂದ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ಎಚ್’ಡಿ ದೇವೇಗೌಡ ಹೇಳಿದ್ದಾರೆ. 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ