
ನವದೆಹಲಿ: ಕರ್ನಾಟಕದಲ್ಲಿ ಚುನಾವಣೆಗೆ ಬಿಜೆಪಿ 6500 ಕೋಟಿ ರು. ಖರ್ಚು ಮಾಡಿದೆ. ಇನ್ನು ಶಾಸಕರ ಖರೀದಿಗೆ 4500 ಕೋಟಿ ರು. ತೆಗೆದಿರಿಸಿದೆ ಎಂದು ಕಾಂಗ್ರೆಸ್ ಮುಖಂಡ ಆನಂದ ಶರ್ಮಾ ಆರೋಪ ಮಾಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸುದ್ದಿ ಗೋಷ್ಠಿಗೆ ಉತ್ತರ ನೀಡಲು ಎಐಸಿಸಿ ಕಚೇರಿ ಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಶರ್ಮಾ, ‘ಒಟ್ಟಾರೆ 11 ಸಾವಿರ ಕೋಟಿ ರು.ಗಳನ್ನು ಚುನಾವಣಾ ಉದ್ದೇಶಕ್ಕೆ ಬಿಜೆಪಿ ತೆಗೆದಿರಿಸಿತ್ತು.
6500 ಕೋಟಿ ರು. ಚುನಾವಣೆಗೆ ಖರ್ಚು ಮಾಡಿದರೆ, ಶಾಸಕರ ಖರೀದಿಗೆ 4500 ಕೋಟಿ ರು. ತೆಗೆದಿರಿಸಿದೆ’ ಎಂದು ಆರೋಪಿಸಿ ದರು. ‘ಅಮಿತ್ ಶಾ ಅವರು ಈ ಅಕ್ರಮಗಳಿ ಗಾಗಿ ಕರ್ನಾಟಕದ ಜನರ ಕ್ಷಮೆ ಯಾಚಿಸಬೇಕು. ಆದರೆ ಅವರಿಗೆ ದಪ್ಪ ಚರ್ಮವಿದೆ.
ಶಾಸಕರ ಖರೀದಿಯಲ್ಲಿ ಅವರದ್ದು ಎತ್ತಿದ ಕೈ. ಬಲಾಬಲ ಪರೀಕ್ಷೆ ದಿನದಂದು ಇಬ್ಬರು ಕಾಂಗ್ರೆಸ್ ಶಾಸಕರು ಪೊಲೀಸರ ರಕ್ಷಣೆಯಲ್ಲಿ ಆಗಮಿಸಬೇಕಾಯಿತು’ ಎಂದು ದೂರಿದರು. ‘ಅಮಿತ್ ಶಾಗೆ ಸಂವಿಧಾನದ ಜ್ಞಾನ ಇಲ್ಲ. ಒಂದು ವೇಳೆ ಇದ್ದರೂ ಅದಕ್ಕೆ ಅವರು ಗೌರವ ನೀಡಲ್ಲ’ ಎಂದು ಶರ್ಮಾ ಛೇಡಿಸಿದರು.