ನಾನು ವರುಣಾ ಪ್ರಚಾರಕ್ಕೆ ಹೋಗಲ್ಲ; ನಮ್ಮದು ಅಪ್ಪ-ಮಕ್ಕಳ ಪಕ್ಷ ಅಲ್ಲ ಎಂದ ಸಿಎಂ

First Published Apr 25, 2018, 12:53 PM IST
Highlights

ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿ ಸಿಎಂ ತವರಿಗೆ ವಾಪಸ್ಸಾಗಿದ್ದಾರೆ.  

ಬಾದಾಮಿಯಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.  ನಾನು ಬಾದಾಮಿಗೆ ಒಂದು ದಿನ ಪ್ರಚಾರಕ್ಕೆ ಹೋಗುತ್ತೇನೆ. ನಾಳೆ ರಾಹುಲ್ ಗಾಂಧಿ ಉತ್ತರ ಕರ್ನಾಟಕಕ್ಕೆ ಬರುತ್ತಾರೆ. ಹೊನ್ನಾವರ ಬಂಟ್ವಾಳ, ಮುರುಡೇಶ್ವರ ಸೇರಿ ಹಲವು ಕಡೆ ಪ್ರವಾಸ ಮಾಡಲಿದ್ದಾರೆ. ಚಾಮುಂಡೇಶ್ಚರಿ ಪ್ರವಾಸ ಇವತ್ತಿಗೆ ಮುಗಿಯಲಿದೆ ಎಂದು ಸಿಎಂ ಹೇಳಿದ್ದಾರೆ. 

ಮೈಸೂರು (ಏ. 25): ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿ ಸಿಎಂ ತವರಿಗೆ ವಾಪಸ್ಸಾಗಿದ್ದಾರೆ.  

ಬಾದಾಮಿಯಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.  ನಾನು ಬಾದಾಮಿಗೆ ಒಂದು ದಿನ ಪ್ರಚಾರಕ್ಕೆ ಹೋಗುತ್ತೇನೆ. ನಾಳೆ ರಾಹುಲ್ ಗಾಂಧಿ ಉತ್ತರ ಕರ್ನಾಟಕಕ್ಕೆ ಬರುತ್ತಾರೆ. ಹೊನ್ನಾವರ ಬಂಟ್ವಾಳ, ಮುರುಡೇಶ್ವರ ಸೇರಿ ಹಲವು ಕಡೆ ಪ್ರವಾಸ ಮಾಡಲಿದ್ದಾರೆ. ಚಾಮುಂಡೇಶ್ಚರಿ ಪ್ರವಾಸ ಇವತ್ತಿಗೆ ಮುಗಿಯಲಿದೆ ಎಂದು ಸಿಎಂ ಹೇಳಿದ್ದಾರೆ. 

ಕೊನೆಯ ಎರಡು ದಿನ ಮಾತ್ರ ಚಾಮುಂಡೇಶ್ಚರಿ ಪ್ರವಾಸ ಮಾಡುತ್ತೇನೆ. ಈಗಾಗಲೇ 150 ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದೇನೆ. ಎಲ್ಲಿ ಸಮಸ್ಯೆ ಇದೆ ಅಲ್ಲಿ ಹೋಗುತ್ತೇನೆ. ಕರ್ನಾಟಕದ ದಲಿತರು ನಮ್ಮ ಪರ ಇದ್ದಾರೆ. ಮೈಸೂರಿನಲ್ಲಿ ಮಾಯಾವತಿ ಸಮಾವೇಶ ಎಫೆಕ್ಟ್ ನಮಗೆ ಇಲ್ಲ ಎಂದಿದ್ದಾರೆ.   

ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆ ವಿಚಾರವಾಗಿ ಮಾತನಾಡುತ್ತಾ,  ನಾನು ಮೊದಲೇ ಹೇಳಿದ್ದೆ ಬಿಜೆಪಿಯಿಂದ ಯಾರೇ ನಿಂತಿದ್ರೂ ನಾವೇ ಗೆಲ್ಲುತ್ತಿದ್ವಿ. ಯಡಿಯೂರಪ್ಪ ನಿಂತಿದ್ರೂ ನಾವೇ ಗೆಲ್ಲುತ್ತೇವೆ ಅಂತ ಮೊದಲೇ ಹೇಳಿದ್ದೆ. ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಜೊತೆ ಬಿಜೆಪಿ ಕೈ ಜೋಡಿಸಿದೆ. ಜೆಡಿಎಸ್, ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ನಾನು ವರುಣಾದಲ್ಲಿ ಪ್ರಚಾರಕ್ಕೆ ಹೋಗಲ್ಲ. ನಮ್ಮದು ಅಪ್ಪ ಮಕ್ಕಳ ಪಕ್ಷ ಅಲ್ಲ ಎಂದು ಅಮಿತ್ ಶಾ ಟ್ವಿಟ್’ಗೆ ಸಿಎಂ ಟಾಂಗ್ ನೀಡಿದ್ದಾರೆ.  ಜನ ಬಿಜೆಪಿಯವರನ್ನು  ಸೀರಿಯಸ್ ಆಗಿ ತೆಗೆದುಕೊಂಡಿಲ್ಲ.  ನಾನು ಸಮೀಕ್ಷೆ ನಂಬಲ್ಲ. ಕರ್ನಾಟಕದ ಜನರ ನಾಡಿ ಮಿಡಿತ ಗೊತ್ತಿದೆ. ಈಗ ಟ್ರೆಂಡ್  ಕಾಂಗ್ರೆಸ್ ಕಡೆ ಇದೆ. ಈ ಬಾರಿ ನಮ್ಮ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. 
 
click me!