’ಕನ್ನಡಿಗ’ ಮೋದಿಗೆ ಸಿದ್ದರಾಮಯ್ಯ ’ಕನ್ನಡ’ ಸವಾಲ್!

First Published May 1, 2018, 4:43 PM IST
Highlights

ಕರ್ನಾಟಕ ವಿಧಾನಸಬಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳೊಂದಿಗೆ ಕಳೆದ ವಾರ ನಡೆಸಿದ ಸಭೆಯಲ್ಲಿ, ಪ್ರಧಾನಿ ಮೋದಿ, ತಾನೂ ಕನ್ನಡಿಗ, ಕರ್ನಾಟಕ ಬಿಜೆಪಿ ಕಾರ್ಯಕರ್ತ ಎಂದಿದ್ದರು. ಇದೀಗ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. 

ಬೆಂಗಳೂರು (ಮೇ. 01): ಕರ್ನಾಟಕ ವಿಧಾನಸಬಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳೊಂದಿಗೆ ಕಳೆದ ವಾರ ನಡೆಸಿದ ಸಭೆಯಲ್ಲಿ, ಪ್ರಧಾನಿ ಮೋದಿ, ತಾನೂ ಕನ್ನಡಿಗ, ಕರ್ನಾಟಕ ಬಿಜೆಪಿ ಕಾರ್ಯಕರ್ತ ಎಂದಿದ್ದರು. ಇದೀಗ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಕನ್ನಡದ ಬದ್ಧತೆ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. 

#AnswerMadiModi ಎಂಬ ಹ್ಯಾಷ್‌ಟ್ಯಾಗ್ ಬಳಸಿ ಸಿದ್ದರಾಮಯ್ಯ ಮೋದಿಯವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಕನ್ನಡಿಗನೆಂದು ಘೋಷಿಸಿಕೊಂಡ ಪ್ರಧಾನಿ ಅವರಿಗೆ ಅಭಿನಂದನೆ.

ಕನ್ನಡಿಗನಾಗುವುದೆಂದರೆ....

ನಾಡಭಾಷೆ, ನಾಡಗೀತೆ, ನಾಡಧ್ವಜವನ್ನು ಒಪ್ಪಿಕೊಳ್ಳುವುದು.
ಕರ್ನಾಟಕದ ನಾಡಧ್ವಜಕ್ಕೆ ಅಂಗೀಕಾರ‌ ನೀಡಿ, ನಿಜವಾದ ಕನ್ನಡಿಗರಾಗುವಿರಾ?.

— Siddaramaiah (@siddaramaiah)

ಕನ್ನಡಿಗನಾಗುವುದೆಂದರೆ...

ಬಲತ್ಕಾರದ ಹಿಂದಿ ಹೇರಿಕೆಯನ್ನು ಕೈಬಿಡುವುದು, ಕನ್ನಡಕ್ಕೆ ಪ್ರಾಮುಖ್ಯ ಕೊಡುವುದು.

ಕನ್ನಡಿಗರಾಗಲು ಸಿದ್ದ ಇದ್ದೀರಾ?

— Siddaramaiah (@siddaramaiah)

ಕನ್ನಡಿಗನಾಗುವುದೆಂದರೆ...

ನೆಲ,ಜಲ,ಭಾಷೆಯ ರಕ್ಷಣೆಗೆ ಬದ್ದವಾಗಿರುವುದು.
ಮಹದಾಯಿ ನೀರು ಹಂಚಿಕೆ ವಿವಾದ ಬಗೆಹರಿಸಲು ಮೂರು ರಾಜ್ಯಗಳ ಸಭೆ ಕರೆದು ಕನ್ನಡಿಗರಾಗುವಿರಾ?

— Siddaramaiah (@siddaramaiah)

ಕನ್ನಡಿಗನಾಗುವುದೆಂದರೆ....

ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ.

ರಾಷ್ಟೀಕೃತ ಬ್ಯಾಂಕುಗಳ ಪ್ರವೇಶ‌ ಪರೀಕ್ಷೆಯನ್ನು‌ ಕನ್ನಡಿಗರಿಗೆ ಕನ್ನಡದಲ್ಲಿ ಬರೆಯಲು ಅವಕಾಶ‌ ನೀಡಿ‌ ಕನ್ನಡಿಗರಾಗುವಿರಾ?

— Siddaramaiah (@siddaramaiah)

ಕನ್ನಡಿಗನಾಗುವುದೆಂದರೆ...

ಈ ನೆಲದ ಶರಣರು, ಸಂತರು, ದಾಸರು, ಸೂಫಿಗಳು ಹುಟ್ಟುಹಾಕಿದ ಸೌಹಾರ್ದ ಪರಂಪರೆಯನ್ನು‌ ಗೌರವಿಸುವುದು.

ಒಬ್ಬನೇ ಒಬ್ಬ‌ ಮುಸ್ಲಿಮ್,‌ಕ್ರಿಶ್ಚಿಯನ್‌ಗೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ನಿಮಗೆ‌ ನಿಜವಾದ ಕನ್ನಡಿಗರಾಗಲು ಸಾಧ್ಯವೇ?

— Siddaramaiah (@siddaramaiah)
click me!