ಕೂಲಿಯವರ ಮಗಳು ರಾಜ್ಯಕ್ಕೆ ಮೊದಲು! ಟೈಲರ್ ಮಗ ಡಿಸ್ಟಿಕ್ಷನ್

Published : May 01, 2018, 04:41 PM ISTUpdated : May 01, 2018, 04:48 PM IST
ಕೂಲಿಯವರ ಮಗಳು ರಾಜ್ಯಕ್ಕೆ ಮೊದಲು! ಟೈಲರ್ ಮಗ ಡಿಸ್ಟಿಕ್ಷನ್

ಸಾರಾಂಶ

ಕಲಬುರಗಿ: ಟೈಲರ್ ಒಬ್ಬರ ಮಗ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿ ಗಮನ ಸೆಳೆದಿದ್ದಾರೆ. ಯಾದಗಿರಿ ಜಿಲ್ಲೆ ರಂಗಂಪೇಟೆಯ ಟೈಲರ್ ಜಗದೀಶ್ ಪುತ್ರ ಕಾರ್ತಿಕ್ ಶೇ.94.16 ಅಂಕ ಪಡೆದಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲೂ ಉತ್ತಮ ಅಂಕ ಪಡೆದಿದ್ದ ಕಾರ್ತಿಕ್ ನಂತರ ತಮ್ಮ ಮುಂದಿನ ಓದಿಗೆಂದು ಸರ್ವಜ್ಞ ಕಾಲೇಜಿಗೆ ದಾಖಲಾದರು.

ಕೊಟ್ಟೂರು(ಮೇ.01): ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೇ ಪ್ರಥಮ ರ‍್ಯಾಂಕ್ ಗಳಿಸಿರುವ ಸ್ವಾತಿ ಎಸ್. ಪೋಷಕರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಬಿಡುವಿನ ವೇಳೆಯಲ್ಲಿ ಸ್ವಾತಿ ಪೋಷಕರಿಗೆ ನೆರವಾಗುತ್ತಾರೆ. ಮನೆಯಲ್ಲಿನ ಕಿತ್ತು ತಿನ್ನುವ ಬಡತನ, ಓದಿಗೆ ಪೂರಕವಲ್ಲದ ವಾತಾವರಣದ ನಡುವೆಯೂ ಸ್ವಾತಿ ರಾಜ್ಯದ ಜನರೇ ಬೆರಗಾಗುವಂತಹ ಸಾಧನೆ ಮಾಡಿದ್ದಾರೆ.

ತಾಲೂಕಿನ ರಾಂಪುರ ಎಂಬ ಸಣ್ಣ ಗ್ರಾಮದ ಸ್ವಾತಿ ಅವರು ಕೋಟೆಪ್ಪ ಮತ್ತು ರತ್ನಮ್ಮ ದಂಪತಿ ಮಗಳು. ತಂದೆ ಕೋಟೆಪ್ಪ ಇಟ್ಟಿಗೆ ಗೂಡಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೆ, ತಾಯಿ ರತ್ನಮ್ಮ ಸಹ ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಸ್ವಾತಿ ಹೂವು ಕಟ್ಟಿ ತಾಯಿಗೆ ಸಹಾಯ ಮಾಡುತ್ತಾರೆ
ಟೈಲರ್ ಮಗ ಡಿಸ್ಟಿಕ್ಷನ್ 
ಕಲಬುರಗಿ: ಟೈಲರ್ ಒಬ್ಬರ ಮಗ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿ ಗಮನ ಸೆಳೆದಿದ್ದಾರೆ. ಯಾದಗಿರಿ ಜಿಲ್ಲೆ ರಂಗಂಪೇಟೆಯ ಟೈಲರ್ ಜಗದೀಶ್ ಪುತ್ರ ಕಾರ್ತಿಕ್ ಶೇ.94.16 ಅಂಕ ಪಡೆದಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲೂ ಉತ್ತಮ ಅಂಕ ಪಡೆದಿದ್ದ ಕಾರ್ತಿಕ್ ನಂತರ ತಮ್ಮ ಮುಂದಿನ ಓದಿಗೆಂದು ಸರ್ವಜ್ಞ ಕಾಲೇಜಿಗೆ ದಾಖಲಾದರು.

ಲಿಂಗೇರಿಯ ಸರ್ಕಾರಿ ಮುರಾರ್ಜಿ ದೆಸಾಯಿ ವಸತಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ.90 ಅಂಕಗಳಿಸಿ ಆರ್ಥಿಕ ಮುಗ್ಗಟಿನಲ್ಲಿದ್ದ ಈತನಿಗೆ ಸರ್ವಜ್ಞ ವಿಜ್ಞಾನ ಕಾಲೇಜಿನಲ್ಲಿ ಸಕಲ ಸವಲತ್ತು ಒದಗಿಸಲಾಗಿತ್ತು.ಕಾಲೇಜು ಆಡಳಿತ ಮಂಡಳಿ ಇವರಿಗೆ ಹಾಸ್ಟೆಲ್, ಶುಲ್ಕ, ಪುಸ್ತಕ ಇತ್ಯಾದಿಗಳನ್ನೆಲ್ಲ ಉಚಿತವಾಗಿ ಒದಗಿಸುವ ಮೂಲಕ ಕಾಲೇಜು ಪ್ರೋತ್ಸಾಹಿಸಿತು. ಕಾಲೇಜು ಸಂಸ್ಥಾಪಕ ಪ್ರೊ.ಚೆನ್ನಾರೆಡ್ಡಿಯವರು ಒದಗಿಸಿದ ಸೌಲಭ್ಯ ಸದ್ಬಳಕೆ ಮಾಡಿಕೊಂಡ ಕಾರ್ತಿಕ ಅದ್ಭುತ ಸಾಧನೆ ಮೆರೆದಿದ್ದಾನೆ. ಮೇ ೬ರಂದು ನಡೆಯುವ ನೀಟ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಗಳಿಸಿ ಎಂಬಿಬಿಎಸ್ ಓದುವ ಗುರಿ ಹೊಂದಿದ್ದಾನೆ.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ