ಕಾವೇರಿ ಸ್ಕೀಮ್ ಸಂಕಟದಿಂದ ಕೇಂದ್ರ, ರಾಜ್ಯ ಸದ್ಯ ಪಾರು

Published : May 09, 2018, 11:15 AM IST
ಕಾವೇರಿ ಸ್ಕೀಮ್  ಸಂಕಟದಿಂದ ಕೇಂದ್ರ, ರಾಜ್ಯ ಸದ್ಯ ಪಾರು

ಸಾರಾಂಶ

ಕಾವೇರಿ ಸ್ಕೀಂನ ಕರಡನ್ನು 14 ರಂದು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಹೀಗಾಗಿ ರಾಜ್ಯ ವಿಧಾನಸಭಾ ಚುನಾವಣೆ(ಮೇ 12) ಗೆ ಮುಂಚಿತವಾಗಿ ಕರಡನ್ನು ಸಲ್ಲಿಸುವ ಸಂಕಟದಿಂದ ಕೇಂದ್ರ ಪಾರಾಗಿದೆ. ಇದೇ ವೇಳೆ ತಮಿಳುನಾಡಿಗೆ 4 ಟಿಎಂಸಿ ನೀರು ಹರಿಸುವ ಕಂಟಕದಿಂದ ಕರ್ನಾಟಕವು ಬಚಾವಾಗಿದೆ. ಆದ್ದರಿಂದ ಚುನಾವಣೆಯ ಹೊಸ್ತಿಲಲ್ಲಿ ಉಭಯ ಸರ್ಕಾರಗಳು ಭಾರಿ ಬಿಕ್ಟಟ್ಟಿನಿಂದ ಪಾರಾಗಿ ನಿಟ್ಟುಸಿರು ಬಿಡುವಂತಾಗಿದೆ.

ನವದೆಹಲಿ (ಮೇ. 09): ಕಾವೇರಿ ಸ್ಕೀಂನ ಕರಡನ್ನು 14 ರಂದು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಹೀಗಾಗಿ ರಾಜ್ಯ ವಿಧಾನಸಭಾ ಚುನಾವಣೆ(ಮೇ 12)ಗೆ ಮುಂಚಿತವಾಗಿ ಕರಡನ್ನು ಸಲ್ಲಿಸುವ ಸಂಕಟದಿಂದ ಕೇಂದ್ರ ಪಾರಾಗಿದೆ. ಇದೇ ವೇಳೆ ತಮಿಳುನಾಡಿಗೆ 4 ಟಿಎಂಸಿ ನೀರು ಹರಿಸುವ ಕಂಟಕದಿಂದ ಕರ್ನಾಟಕವು ಬಚಾವಾಗಿದೆ. ಆದ್ದರಿಂದ ಚುನಾವಣೆಯ ಹೊಸ್ತಿಲಲ್ಲಿ ಉಭಯ ಸರ್ಕಾರಗಳು ಭಾರಿ ಬಿಕ್ಟಟ್ಟಿನಿಂದ ಪಾರಾಗಿ ನಿಟ್ಟುಸಿರು ಬಿಡುವಂತಾಗಿದೆ.

ಮೇ 14 ಕ್ಕೆ ಸ್ಕೀಮ್‌ನ ಕರಡು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಗಡುವಿಗೆ ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು ಅಂದೇ ಮುಂದಿನ ವಿಚಾರಣೆ ನಡೆಯಲಿದೆ. ಅಂದೇ ಸ್ಕೀಮ್ ಅಂತಿಮಗೊಂಡು ಘೋಷಣೆಯಾಗುವ ನಿರೀಕ್ಷೆಯಿದೆ. 
ಕಳೆದೆರಡು ವಿಚಾರಣೆಗಳ ವೇಳೆ ಸ್ಕೀಮ್ ರಚನೆಯ ಬಗ್ಗೆ ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ ನೀಡಿದ್ದರೂ ಕೇಂದ್ರ ಮುಂದೂಡುತ್ತಲೇ ಹೋಗಿತ್ತು. ಕೇಂದ್ರದ ವಿಳಂಬ ನ್ಯಾಯಾಂಗ ನಿಂದನೆಯ ಸ್ವರೂಪ ಹೊಂದಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು ಕೇಂದ್ರ ಜಲ ಕಾರ್ಯದರ್ಶಿಗೆ ಹಾಜರಿರುವಂತೆ ಸೂಚಿಸಿದೆ. ಈ ನಡುವೆ, ತಮಿಳುನಾಡಿಗೆ ನೀರು ಬಿಡುವ ಪರಿಸ್ಥಿತಿ ಬರಬಹುದು ಎಂಬ ಆತಂಕ ಕರ್ನಾಟಕದಲ್ಲಿ ಮನೆ ಮಾಡಿತ್ತು. ಆದರೆ ತಮಿಳುನಾಡು ನೀರಿಗಿಂತಲೂ ಸ್ಕೀಮ್‌ಗೆ ಒತ್ತು ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕವು ತಮಿಳುನಾಡಿಗೆ ನೀರು ಬಿಡಬೇಕಾದ  ಅಪಾಯದಿಂದ ನಿರಾಳಗೊಂಡಿದೆ.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ