
ಬೆಂಗಳೂರು (ಮೇ. 09): ಸತತ 15-20 ದಿನಗಳಿಂದ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೇಂದ್ರ ಸಂಪುಟದ ಮಂತ್ರಿಗಳು ಮತ್ತು ಝಡ್ ಪ್ಲಸ್ ಭದ್ರತೆಯುಳ್ಳ ಅನೇಕ ನಾಯಕರು ಕರ್ನಾಟಕಕ್ಕೆ ಸತತವಾಗಿ ಭೇಟಿ ನೀಡುತ್ತಿರುವುದರಿಂದ ದೆಹಲಿಯ ಜನರು ನಿರಾಳರಾಗಿದ್ದಾರೆ.
ದೆಹಲಿಯಲ್ಲಿ ಅತಿ ಗಣ್ಯರ ಸಂಚಾರಕ್ಕೆ ಯಾವಾಗಲೂ ಪೊಲೀಸರು ಟ್ರಾಫಿಕ್ ತಡೆಹಿಡಿದು ನಿಲ್ಲಿಸುತ್ತಿದ್ದುದರಿಂದ ದಿಲ್ಲಿವಾಲಾಗಳು ಬೇಸತ್ತು ಹೋಗಿದ್ದರು. ಕರ್ನಾಟಕದಲ್ಲಿ ಚುನಾವಣೆ ಪ್ರಚಾರ ಜೋರಾದ ನಂತರ ಎಲ್ಲ ನಾಯಕರೂ ದಕ್ಷಿಣ ಭಾರತಕ್ಕೆ ಮುಖ ಮಾಡಿರುವುದರಿಂದ ದಿಲ್ಲಿಯವರು ನಿಶ್ಚಿಂತರಾಗಿದ್ದಾರೆ. ಅವರ ಬೀಪಿ ಕೂಡ ಇಳಿಕೆಯಾಗಿದೆ ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.