
ಬೆಳ್ತಂಗಡಿ : ಇಂದು ರಾಜ್ಯಾದ್ಯಂತ ಚುನಾವಣೆ ಅಬ್ಬರ ಜೋರಾಗಿದೆ. ವಿವಿಧೆಡೆ ಮತದಾರರು ಮತಗಟ್ಟಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ತಮ್ಮ ಹಕ್ಕನ್ನು ಚಲಾಯಿಸುವ ಪ್ರಜಾಪ್ರಭುತ್ವದ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮದುವೆ ಜೀವನದ ಬಹುದೊಡ್ಡ ಸಂಭ್ರಮ. ಆದರೆ ಮತದಾನ ಅದಕ್ಕಿಂತಲೂ ದೊಡ್ಡ ಸಂಭ್ರಮವಾಗಿದ್ದು ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಮದು ಮಗಳು ಮತ ಚಲಾಯಿಸಿದ್ದಾರೆ.
ಬೆಳ್ತಂಗಡಿಯ ಬೊಂದೇಲ್ ಸಂತ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮದುಮಗಳು ವಿಯೋಲಾ ಫೆರ್ನಾಂಡಿಸ್ ಮತ ಚಲಾಯಿಸಿದ್ದಾರೆ.
ತಮ್ಮ ಮದುವೆ ವಿಧಿ ವಿಧಾನಗಳಿಗೆ ತೆರಳುವ ಮುನ್ನ ಆಕೆ ತಮ್ಮ ಹಕ್ಕನ್ನು ಚಲಾಯಿಸಿಯೇ ತೆರಳಿದ್ದಾರೆ. ಈ ಮೂಲಕ ಪ್ರತಿಯೊಬ್ಬರೂ ಕೂಡ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಸಂದೇಶ ನೀಡಿದ್ದಾರೆ.