ಸರ್ಕಾರ ರಚಿಸುವ ಸಾಧ್ಯತೆ ಬಿಜೆಪಿಗೆಷ್ಟಿದೆ? ಏನ್ ಹೇಳುತ್ತೆ ಕಾನೂನು?

First Published May 16, 2018, 10:12 AM IST
Highlights

ಬಿಜೆಪಿಗೇ ಸರ್ಕಾರ ರಚನೆ ಮಾಡುವ ಅವಕಾಶ ದಟ್ಟವಾಗಿದೆ.  ಕಾನೂನಿನ ಪ್ರಕಾರ ರಾಜ್ಯಪಾಲರು ಬಿಜೆಪಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು  ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ವಕ್ತಾರೆ ಹಾಗೂ ವಕೀಲರಾದ ಮೀನಾಕ್ಷಿ ಲೇಖಿ  ಟ್ವೀಟ್ ಮಾಡಿದ್ದಾರೆ. 

ಬೆಂಗಳೂರು (ಮೇ. 16):  ಬಿಜೆಪಿಗೇ ಸರ್ಕಾರ ರಚನೆ ಮಾಡುವ ಅವಕಾಶ ದಟ್ಟವಾಗಿದೆ.  ಕಾನೂನಿನ ಪ್ರಕಾರ ರಾಜ್ಯಪಾಲರು ಬಿಜೆಪಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು  ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ವಕ್ತಾರೆ ಹಾಗೂ ವಕೀಲರಾದ ಮೀನಾಕ್ಷಿ ಲೇಖಿ  ಟ್ವೀಟ್ ಮಾಡಿದ್ದಾರೆ. 

ಯಾವ ಪಕ್ಷಕ್ಕೂ ಬಹುಮತ ಸಿಗದಿದ್ದಾಗ ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಆದ್ಯತೆ ನೀಡಲಾಗುತ್ತದೆ.  ರಾಮೇಶ್ವರ್ ಪ್ರಸಾದ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದ ತೀರ್ಪು ಉಲ್ಲೇಖಿಸುತ್ತಾ,  ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಜಸ್ಟೀಸ್ ಸರ್ಕಾರಿಯಾ ಕಮಿಷನ್ ಶಿಫಾರಸು ಪರಿಗಣನೆ ಮಾಡಲಾಗಿದೆ.  ಯಾವ ಪಕ್ಷಕ್ಕೂ ಬಹುಮತ ಸಿಗದಿದ್ದರೆ ರಾಜ್ಯಪಾಲರ ಮುಂದಿನ ಆಯ್ಕೆಗಳು ಹೀಗಿರುತ್ತದೆ. 

1. ನೇ ಆಯ್ಕೆ - ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಪಕ್ಷಗಳಿಗೆ ಸರ್ಕಾರ ರಚನೆ ಅವಕಾಶ 
2. ನೇ ಆಯ್ಕೆ - ಇತರರ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಕೋರುವ ಅತಿದೊಡ್ಡ ಪಕ್ಷ  
3. ನೇ ಆಯ್ಕೆ - ಚುನಾವಣೋತ್ತರ ಮೈತ್ರಿ ಮಾಡಿಕೊಂಡ ಪಕ್ಷಗಳು ಸೇರಿಕೊಂಡು ಸರ್ಕಾರ ರಚನೆಗೆ ಅವಕಾಶ ಕೋರಿಕೆ 
4. ನೇ ಆಯ್ಕೆ - ಚುನಾವಣೋತ್ತರ ಮೈತ್ರಿಯಾದ ಪಕ್ಷಗಳ ಪೈಕಿ ಕೆಲ ಪಕ್ಷಗಳಿಂದ ಸರ್ಕಾರ, ಕೆಲ ಪಕ್ಷಗಳಿಂದ ಬಾಹ್ಯ ಬೆಂಬಲ 

ಕರ್ನಾಟಕದ ಪ್ರಸ್ತುತ ಸ್ಥಿತಿಯಲ್ಲಿ ಬಿಜೆಪಿಗೆ ರಾಜ್ಯಪಾಲರು ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್-ಜೆಡಿಎಸ್  ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಆದ್ದರಿಂದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೇ ಸರ್ಕಾರ ರಚನೆ ಅವಕಾಶ ಹೆಚ್ಚಿದೆ. ಈ ನಿಯಮದ ಬಗ್ಗೆ ಟ್ವಿಟರ್ ನಲ್ಲಿ ಮೀನಾಕ್ಷಿ ಲೇಖಿ ಮಾಹಿತಿ ನೀಡಿದ್ದಾರೆ. 

 

When no single party gets an absolute majority the application of legal provisions is as under. pic.twitter.com/cZUsjNeu0e

— Meenakashi Lekhi (@M_Lekhi)

 

click me!