ಶಾಸಕರು ಪಕ್ಷ ಬಿಟ್ಟು ಹೋಗದಂತೆ ಕಾಂಗ್ರೆಸ್ ಹೈ ಅಲರ್ಟ್

Published : May 16, 2018, 10:00 AM IST
ಶಾಸಕರು ಪಕ್ಷ  ಬಿಟ್ಟು ಹೋಗದಂತೆ ಕಾಂಗ್ರೆಸ್  ಹೈ ಅಲರ್ಟ್

ಸಾರಾಂಶ

ಚುನಾವಣಾ ಫಲಿತಾಂಶದ ನಂತರ ಕ್ಷಣ ಕ್ಷಣಕ್ಕೂ ರಾಜ್ಯ ರಾಜಕಾರಣ ತಿರುವು ಪಡೆದುಕೊಳ್ಳುತ್ತಿದೆ. ಸರ್ಕಾರ ರಚಿಸುವ ಸರ್ಕಸ್ ನಡೆಯುತ್ತಿದೆ.  ಕಾಂಗ್ರೆಸ್ ಪಕ್ಷ ತಮ್ಮ ಶಾಸಕರು ಪಕ್ಷ ಬಿಟ್ಟು ಹೋಗದಂತೆ ಹೈ ಅಲರ್ಟ್ ಆಗಿದೆ.  

ಬೀದರ್ (ಮೇ. 16): ಚುನಾವಣಾ ಫಲಿತಾಂಶದ ನಂತರ ಕ್ಷಣ ಕ್ಷಣಕ್ಕೂ ರಾಜ್ಯ ರಾಜಕಾರಣ ತಿರುವು ಪಡೆದುಕೊಳ್ಳುತ್ತಿದೆ. ಸರ್ಕಾರ ರಚಿಸುವ ಸರ್ಕಸ್ ನಡೆಯುತ್ತಿದೆ.  ಕಾಂಗ್ರೆಸ್ ಪಕ್ಷ ತಮ್ಮ ಶಾಸಕರು ಪಕ್ಷ ಬಿಟ್ಟು ಹೋಗದಂತೆ ಹೈ ಅಲರ್ಟ್ ಆಗಿದೆ.  

ಬೀದರ್ ಜಿಲ್ಲೆಯ ನಾಲ್ಕು ಜನ ಶಾಸಕರನ್ನು ಕರೆ ತರುವ ಉಸ್ತುವಾರಿಯನ್ನು ಕೈ ಹೈಕಮಾಂಡ್ ಆಯಾ ಜಿಲ್ಲೆಯ ಮುಖಂಡರಿಗೆ ಒಪ್ಪಿಸಿದೆ.  ಬೀದರ್ ಜಿಲ್ಲೆಯ ನಾಲ್ಕು ಶಾಸಕರನ್ನು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಕರೆಸಿಕೊಳ್ಳಲಿದೆ. 

ಮಧ್ಯ ರಾತ್ರಿಯೇ ಬೀದರ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನ ಬಂದಿದೆ.  ಆ ವಿಮಾನದ ಮೂಲಕ ಬೀದರ್ ಜಿಲ್ಲಾಧ್ಯಕ್ಷ ಬಸವರಾಜ್ ಜಾಬಶೆಟ್ಟಿ,  ವಿಧಾನ ಪರಿಷತ್ ಸದಸ್ಯೆ ವಿಜಯಸಿಂಗ್ , ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ, ಹುಮನಾಬಾದ ಶಾಸಕ ರಾಜಶೇಖರ ಪಾಟೀಲ್ , ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್, ಬೀದರ್ ನಗರದ ಶಾಸಕ ರಹೀಮ್ ಖಾನ್ ಸೇರಿದಂತೆ ಒಟ್ಟು 6 ಆರು ಜನ ಬೀದರ್ ನಿಂದ ಬೆಂಗಳೂರನತ್ತ ಹೊರಟ್ಟಿದ್ದಾರೆ. 
 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ