ಚುನಾವಣೆ ಕಣದಲ್ಲಿ ಲಕ್ಷ ಲಕ್ಷ ಬೆಟ್ಟಿಂಗ್ : ಯಾರಿಗೆ ಒಲಿಯುತ್ತಾಳೆ ವಿಜಯ ‘ಲಕ್ಷ್ಮೀ’

Published : May 13, 2018, 01:06 PM IST
ಚುನಾವಣೆ ಕಣದಲ್ಲಿ ಲಕ್ಷ ಲಕ್ಷ ಬೆಟ್ಟಿಂಗ್ : ಯಾರಿಗೆ ಒಲಿಯುತ್ತಾಳೆ ವಿಜಯ ‘ಲಕ್ಷ್ಮೀ’

ಸಾರಾಂಶ

ಸದ್ಯ ರಾಜ್ಯದಲ್ಲಿ ಚುನಾವಣೆ ಮುಗಿದಿದ್ದು, ಇನ್ನೇನಿದ್ದರೂ ಕೂಡ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರವಾಗಿದೆ. ಯಾರ ಪಾಲಿಗೆ ಗೆಲುವು, ಯಾರಿಗೆ ಸೋಲು ಎನ್ನುವುದೇ ಮುಂದಿನ ಕುತೂಹಲವಾಗಿದೆ. ಇದರಂತೆ ಎಲ್ಲೆಡೆಯೂ ಕೂಡ ಗೆಲ್ಲುವ, ಸೋಲುವವರ ಮೇಲೆ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ.

ರಾಮನಗರ : ಸದ್ಯ ರಾಜ್ಯದಲ್ಲಿ ಚುನಾವಣೆ ಮುಗಿದಿದ್ದು, ಇನ್ನೇನಿದ್ದರೂ ಕೂಡ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರವಾಗಿದೆ. ಯಾರ ಪಾಲಿಗೆ ಗೆಲುವು, ಯಾರಿಗೆ ಸೋಲು ಎನ್ನುವುದೇ ಮುಂದಿನ ಕುತೂಹಲವಾಗಿದೆ. 

ಇದರಂತೆ ಎಲ್ಲೆಡೆಯೂ ಕೂಡ ಗೆಲ್ಲುವ, ಸೋಲುವವರ ಮೇಲೆ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ.  ರಾಮನಗರ ಜಿಲ್ಲೆಯಲ್ಲಿ ಚನ್ನಪಟ್ಟಣ, ಮಾಗಡಿ. ಚನ್ನಪಟ್ಟಣಗಳು ಜಿದ್ದಾಜಿದ್ದಿ ಕಣಗಳಾಗಿದ್ದು,  ಈ ಕ್ಷೇತ್ರಗಳಲ್ಲಿ ವಿಜಯಲಕ್ಷ್ಮೀ ಯಾರ ಪಾಲಿಗಿದ್ದಾಳೆ ಅನ್ನುವಂತಹ ಬಹುದೊಡ್ಡ ಚರ್ಚೆ ನಡೆಯುತ್ತಿದೆ.  

ಇದೇ ವಿಚಾರದಲ್ಲಿ  ಇಲ್ಲಿ ಬೆಟ್ಟಿಂಗ್ ದಂಧೆಯೂ ಕೂಡ ಬಲು ಜೋರಾಗಿದೆ.  ಚನ್ನಪಟ್ಟಣ‌, ಮಾಗಡಿಯಲ್ಲಿ ಲಕ್ಷ ಲಕ್ಷ ಮೊತ್ತದಲ್ಲಿ ಕಾರ್ಯಕರ್ತರು ಬೆಟ್ಟಿಂಗ್ ನಡೆಸುತ್ತಿದ್ದಾರೆ.  ಚನ್ನಪಟ್ಟಣದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳ ಮೇಲೆ ಬೆಟ್ಟಿಂಗ್ ಮಾಡಿದರೆ ಮಾಗಡಿಯಲ್ಲಿ ಜೆಡಿಎಸ್  ಹಾಗೂ ಕಾಂಗ್ರೆಸ್ ಮೇಲೆ ಬೆಟ್ಟಿಂಗ್ ಮಾಡುತ್ತಿದ್ದಾರೆ. 

ರಾಮನಗರ, ಕನಕಪುರದಲ್ಲಿ ಯಾವ ಪಕ್ಷ ಎಷ್ಟು ಪ್ರಮಾಣದಲ್ಲಿ ಲೀಡ್ ನಲ್ಲಿ ಇರಲಿದೆ ಎನ್ನುವ ವಿಚಾರದ ಮೇಲೆಯೂ ಕೂಡ ಬೆಟ್ಟಿಂಗ್ ಶುರುವಾಗಿದೆ.  ರಾಮನಗರದಲ್ಲಿ ಕುಮಾರಸ್ವಾಮಿ. ಕನಕಪುರದಲ್ಲಿ ಡಿಕೆಶಿ ಲೀಡ್ ಮೇಲೆ ಬೆಟ್ಟಿಂಗ್ ಮಾಡಿ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ಹಾಕಲಾಗುತ್ತಿದೆ.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ