ಮಹಿಳಾ ಉದ್ಯಮಿ ಅಂಜನಾ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದ ಮಾಜಿ ಸಚಿವ ಬಾಬುರಾವ ಚಿಂಚನಸೂರ| ಅಂಜನ ಯಾರು ಎನ್ನುವುದೇ ನನಗೆ ಗೊತ್ತಿಲ್ಲ| ಆಕೆಯ ಮುಖ ನಾ ಜೀವನದಲ್ಲಿಯೇ ನೋಡಿಲ್ಲ| ಆ ಮಹಿಳೆಯಿಂದ ನಾ ನಯಾ ಪೈಸೆ ಸಾಲ ಪಡೆದಿಲ್ಲ| ನಾನು ಆಕೆಗೆ ಚೆಕ್ ಕೊಟ್ಟಿದ್ದೆ ಎನ್ನುವುದೇ ಶುದ್ದ ಸುಳ್ಳು|
ಕಲಬುರಗಿ[ನ.7]: ಮಹಿಳಾ ಉದ್ಯಮಿ ಅಂಜನಾ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ಅಂಜನ ಯಾರು ಎನ್ನುವುದೇ ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ಅವರು ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕೆಯ ಮುಖ ನಾ ಜೀವನದಲ್ಲಿಯೇ ನೋಡಿಲ್ಲ. ಆ ಮಹಿಳೆಯಿಂದ ನಾ ನಯಾ ಪೈಸೆ ಸಾಲ ಪಡೆದಿಲ್ಲ. ನಾನು ಆಕೆಗೆ ಚೆಕ್ ಕೊಟ್ಟಿದ್ದೆ ಎನ್ನುವುದೇ ಶುದ್ದ ಸುಳ್ಳು. ನನ್ನ ಚೆಕ್ ಕಳ್ಳತನ ಆಗಿತ್ತು. ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೆಲ ಪಟ್ಟಭದ್ರ ಹಿತಾಸಕ್ತಿಗಳು ನನ್ನ ಏಳ್ಗೆ ಸಹಿಸದೆ ಈ ಷಡ್ಯಂತ್ರ ರೂಪಿಸಿವೆ. ನ್ಯಾಯಾಲಯದಲ್ಲಿ ನನಗೆ ಜಯ ಸಿಗುತ್ತದೆ ಎಂಬ ವಿಶ್ವಾಸ ಇದೆ. ನ್ಯಾಯಾಲಯದಲ್ಲಿ ಗೆದ್ದು ಮತ್ತಷ್ಟು ಬಲಿಷ್ಠ ನಾಯಕನಾಗಿ ಹೊರಹೊಮ್ಮುವೆ ಎಂದು ಹೇಳಿದ್ದಾರೆ. ಚಿಂಚನಸೂರ್‌ಗೆ 11 ಕೋಟಿ ಸಾಲ ಕೊಟ್ಟಿದ್ದ ಮಹಿಳೆ ಆತ್ಮಹತ್ಯೆ