ಭೀಮಾ ನದಿ ಪ್ರವಾಹ: ಕಲಬುರಗಿ ಜಿಲ್ಲೆಯಲ್ಲಿ ಆತಂಕ

Published : Jul 30, 2025, 04:39 PM IST
Kalburgi rain

ಸಾರಾಂಶ

ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ ಹೆಚ್ಚಿನ ನೀರು ಬಿಡುಗಡೆಯಿಂದಾಗಿ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹಲವು ಹಳ್ಳಿಗಳಲ್ಲಿ ರೈತರ ಬೆಳೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕಲಬುರಗಿ: ಮಹಾರಾಷ್ಟ್ರ ರಾಜ್ಯದ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 70 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಕಲಬುರಗಿ ಜಿಲ್ಲೆಯ ಆಫ್ಜಲಪುರ ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಪ್ರವಾಹ ಆತಂಕ ಉಂಟಾಗಿದ್ದು, ಭೀಮಾ ನದಿ ಉಕ್ಕೆರಾಟದಿಂದ ರೈತರ ಹೊಲಗಳು, ಗದ್ದೆಗಳು ನೀರಿನ ಒಳಗೆ ಬರುತ್ತಿವೆ. ಈ ಕೆಳಹಳ್ಳಿಗಳಲ್ಲಿ ಜಮೀನು ಬೆಳೆ, ಕಬ್ಬು, ಈರುಳ್ಳಿ, ಉದ್ದೆಗಳ ಬೆಳೆಗಳಿಗೆ ಹಾನಿಯು ಸಂಭವಿಸಿದೆ ಎಂದು ಭಯ ವ್ಯಕ್ತಪಡಿಸಲಾಗಿದೆ.

ಈ ನೀರು ಮಣ್ಣೂರ್ ಹುದ್ದಿ ಮೂಲಕ ಸೊನ್ನ ಬ್ಯಾರೇಜ್ ಗೆ ತಲುಪಿದ್ದು, ಸೊನ್ನ ಬ್ಯಾರೇಜ್‌ ಮೂಲಕ ಇದೇ ವೇಳೆ ಭೀಮಾ ನದಿಗೆ 6 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಉಜ್ಜನಿ ಹಾಗೂ ವೀರ ಜಲಾಶಯಗಳಿಂದ ಹೆಚ್ಚಿನ ನೀರು ಬಂದಾಗ, ಸೊನ್ನ ಹಾಗೂ ಬೆಣ್ಣೆತೋರಾ ಬ್ಯಾರೇಜ್ಗಳ ಮೂಲಕ ಕೆಳಗಿನ ಭಾಗದ ನದಿಗೆ ಜಲಬಾಹುಮಾನ ವಿಸ್ತರಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಲೆವೆಲ್ (ಡಿ.ಸಿ) ಸಾರ್ವಜನಿಕರಿಂದ ಭಾವಿಭಾಗದ ನದಿ ದಂಡೆಯ ಭದ್ರತೆಗಾಗಿ ಜಾಗೃತಿ ಇರುವಂತೆ ಮನವಿ ಮಾಡಿದ್ದಾರೆ. ಮಳೆಯ ಮುನ್ಸೂಚನೆಗಳು ಬಂದಿರುವ ಹಿನ್ನೆಲೆ ಜಲಾಶಯ ಒಳ ಹರಿವಿನ ಪ್ರಮಾಣ ಹೆಚ್ಚಳದೊಂದಿಗೆ ಹೊರ ಹರಿವು ಕೂಡ ಹೆಚ್ಚಾಗಬಹುದು ಎಂದು ತಿಳಿಸಿದವರು, ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದರು.

ಈರುಳ್ಳಿ, ಕಬ್ಬು, ಹತ್ತಿ, ಉದ್ದು ಹಾನಿ

ಭೀಮೇಯ ವಿರುಮನ್ನೂರು, ಶೇಷಾಗಿರಿವಾಡಿ, ಕುಡಿಗನೂರ, ಉಡಚನ ಸೇರಿದಂತೆ ನದಿ ತೀರದ ಹತ್ತಾರು ಗ್ರಾಮಗಳ ರೈತರ ಹೊಲಗಳಿಗೆ ನುಗಿದ್ದರಿಂದ ಅದಾಗಲೇ ಹೊಲದಲ್ಲಿದ್ದ ಈರುಳ್ಳಿ, ಕಬ್ಬು, ಉದ್ದು, ಹೆಸರು ಸೇರಿದಂತೆ ಬೆಳೆಗಳು ಭಾರಿ ಹಾನಿಗೆ ಒಳಗಾಗಿವೆ. ಮಣ್ಣೂರ್ ಗ್ರಾಡಮ ರೇಣುಕಾ ಗಡ್ದೆಪ್ಪ ಜಮಾದಾರ್ ಸೇರಿದ 2 ಎಕರೆ, ಈರುಳ್ಳಿ, ಉದ್ದು ಫಸಲು ಹಾಗೂ ಸೈಬಣ್ಣ ಮಲ್ಲಪ್ಪ ಜಮಾದಾರ್ ಅವರ 2 ಎಕರೆ ಹೆಸರು ನೀರಲ್ಲಿ ಹಾಳಾಗಿದೆ. ಇದಲ್ಲದೆ ಕುಡಿಗನೂರ್, ಶಿವುರ್, ಉಡಚನ ಹಟ್ಟಿ, ಹಿರಿಯಲ್, ಭೋಸಗ, ದುಡ್ದುನಾಗಿ ಸೇರಿದಂತೆ 40 ಗ್ರಾಮಗಲ್ಲಿ ನೆರರೇ ಆತಂಕ ಕಾಡುತ್ತಿದೆ. ಇದಲ್ಲದೆ ಜೇವರ್ಗಿ ತಾಲೂಕಿನ 40 ಕ್ಕೂ ಹೆಚ್ಚು ಭೀಮಾ ನದಿ ತೀರದ ಹಳ್ಳಿಗಳ್ಳಲು ಪ್ರವಾಹ ಭೀತಿ ಶುರುವಾಗಿದೆ.

ನದಿ ಪಾತ್ರಕ್ಕೆ ಹೋಗದಂತೆ ಸೂಚನೆ

ಸೊನ್ನ ಮತ್ತು ಬೆಣ್ಣೆತೋರಾ ಬ್ಯಾರೇಜ್ ಕೆಳಗಡೆ ಇರುವ ನದಿ ಪಾತ್ರದ ಜನರು ಎಚ್ಚರಿಕೆಯಿಂದಿರಲು ಕೋರಲಾಗಿದೆ. ನದಿ, ಹಳ್ಳ, ಕೆರೆ ದಡದಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ದನ-ಕರುಗಳನ್ನು ಮೆಯಿಸುವುದು ಹಾಗೂ ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸಬಾರದು. ನದಿ ತೀರದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಅಪಾಯವಿರುವ ನದಿ-ಹಳ್ಳಗಳಲ್ಲಿ ಈಜಾಡುವುದು ಮತ್ತು ಪೋಟೊ-ಸೆಲ್ಫಿಗಳನ್ನು ತೆಗೆದು ಅಪಾಯಕ್ಕೆ ಸಿಲುಕಬಾರದು. ಪ್ರವಾಹ ಸಂದರ್ಭದಲ್ಲಿ ಮೀನುಗಾರರಿಗೆ ಮೀನು ಹಿಡಿಯಲು ನದಿಯ ಕಡೆ ಹೋಗಬಾರದು ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ.

ನಿರಂತರ ಮಳೆಯಿಂದ ಅಪಾಯವಿರುವ ಮನೆ ಗೋಡೆ, ಶಾಲೆ, ಅಂಗನವಾಡಿ ಹಾಗೂ ಇತರೆ ಕಟ್ಟಡಗಳ ಕುಸಿಯುವ ಸಾಧ್ಯತೆ ಇರುವದರಿಂದ ಅಧಿಕಾರಿಗಳು ಸಾರ್ವಜನಿಕರ ಸುರಕ್ಷತೆಯ ಮುನ್ನೆಚ್ಚರಿಕೆ ಕ್ರಮಗಳನು ತೆಗದುಕೊಳ್ಳಬೇಕು. ಪ್ರವಾಹದಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಪ್ರತಿ ಗ್ರಾಮಗಳಲ್ಲಿ ಡಂಗೂರ ಸಾರುವುದು ಹಾಗೂ ಮೈಕ್ ಮೂಲಕ ಜಾಗೃತಿ ಮೂಡಿಸಬೇಕು. ನದಿ, ಹಳ್ಳ, ಕೆರೆ ದಡದಲ್ಲಿರುವ ದೇವಸ್ಥಾನ, ಮಸೀದಿ, ಪ್ರಾರ್ಥನಾ ಮಂದಿರಗಳಲ್ಲಿ ಪೂಜೆ ಸಲ್ಲಿಸುವವರನ್ನು ಮನವೊಲಿಸಿ ನದಿ ದಡಕ್ಕೆ ತೆರಳದಂತೆ ಸಾರ್ವಜನಿಕರ ಮನವೊಲಿಸಬೇಕು. ಇನ್ನು ಪ್ರವಾಹದಿಂದ ಹಾನಿಯಾದ ಬಗ್ಗೆ ಪ್ರಾಥಮಿಕ ವರದಿಯನ್ನು ಪ್ರತಿ ದಿನ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೂಚಿಸಿದ್ದಾರೆ.

ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರಲು ಸೂಚನೆ:

ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿ-ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿದ್ದು ಪ್ರವಾಹ ಮತ್ತು ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಯಾಗದಂತೆ ಮುನ್ನಚ್ಚರಿಕೆಗಳನ್ನು ತೆಗದುಕೊಳ್ಳಬೇಕು. ಸಂಭವನೀಯ ಪ್ರವಾಹ ಎದುರಾದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ತಗ್ಗು ಪ್ರದೇಶಗಳನ್ನು ಜನರನ್ನು ಗುರುತಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಡಿ.ಸಿ. ಸೂಚನೆ ನೀಡಿದ್ದಾರೆ.

ಎಲ್ಲಮ್ಮ ಮಂದಿರ ಜಾಲವೃತ್ತ

ಭೀಮಾ ನದಿ ಯಲ್ಲಿರುವ ರೇಣುಕಾ ಎಲ್ಲಮ್ಮ ಮಂದಿರ ಸಂಪೂರ್ಣ ಜಲವೃತ್ತ ಆಗಿದೆ, ಮಂದಿರ ಸುತ್ತ ನದಿ ನೀರು ಭಾರಿ ರಭಸದಿಂದ ಹರಿಯುತ್ತಿದೆ. ಸಂಜೆ ಹೊತ್ತಿಗೆ ಮಂದಿರಕ್ಕೆ ಸಂಪರ್ಕಿಸುವ ಸೇತುವೆ ನೀರಲ್ಲಿ ಮುಳುಗುವ ಸಾಧ್ಯತೆ ಇದೆ.

PREV
Read more Articles on
click me!

Recommended Stories

ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ, ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಸಮಯ ಬದಲಾವಣೆ!
ಬಸವತತ್ವದ ಅನುಯಾಯಿಗಳು ತಾಲಿಬಾನಿಗಳು, ಮತ್ತೊಮ್ಮೆ ವಿವಾದದಾತ್ಮಕ ಹೇಳಿಕೆ ಕೊಟ್ಟ ಕನ್ನೇರಿ ಶ್ರೀ!