
ಚಿತ್ತಾಪುರ (ನ.16) ಚಿತ್ತಾಪುರದ ಆರ್‌ಎಸ್ಎಸ್ ಪಥಸಂಚಲನ ಭಾರಿ ವಿವಾದದ ಕೇಂದ್ರಬಿಂದುವಾಗಿತ್ತು. ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರವಾಗಿರುವ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಅವಕಾಶ ನಿರಾಕರಣೆಯಿಂದ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಇಷ್ಟೇ ಅಲ್ಲ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಕೊನೆಗೆ ಷರತ್ತುಬದ್ಧ ಅನುಮತಿಯೊಂದಿಗೆ ಆರ್‌ಎಸ್ಎಸ್ ಪಥಸಂಚಲನಕ್ಕೆ ಅವಕಾಶ ನೀಡಲಾಗಿತ್ತು. ಇದರಂತೆ ಇಂದು ಆರ್‌ಎಸ್ಎಸ್ ಪಥಸಂಚಲನ ಇನ್ನೇನು ಆರಂಭಗೊಳ್ಳಬೇಕಿರುವಂತೆ ಮತ್ತೆ ಅಡೆ ತಡೆ ಎದುರಾಗಿದೆ. ಪಥಸಂಚಲನ ಆರಂಭಗೊಳ್ಳುತ್ತಿದ್ದಂತೆ ಪೊಲೀಸರು ಆರ್‌ಎಸ್ಎಸ್ ಸದಸ್ಯನ ತಡೆದಿದ್ದಿದ್ದಾರೆ. ಬ್ಯಾಂಡ್ ತಂಡದಲ್ಲಿದ್ದ ಓರ್ವ ಬ್ಯಾಂಡ್ ವಾದಕನಿಗೆ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿಲ್ಲ.
ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನ ಆರಂಭಕ್ಕೆ ಕೆಲ ಸಮಯ ಬಾಕಿ ಇರುವಾಗ ಗೊಂದಲ ಎದುರಾಗಿದೆ. ಚೆಕ್ ಪೋಸ್ಟ್‌ನಲ್ಲಿ ಓರ್ವ ಆರ್‌ಎಸ್ಎಸ್ ಕಾರ್ಯತನನ್ನು ಪೊಲೀಸರು ತಡೆದಿದ್ದರು. ಬ್ಯಾಂಡ್ ವಾದಕ ಒಡಿಶಾ ಮೂಲದವನು ಅನ್ನೋ ಕಾರಣಕ್ಕೆ ಪೊಲೀಸರು ತಡೆದಿದ್ದಾರೆ. ಕಲಬುರುಗಿ ಜಿಲ್ಲೆ ಹೊರತುಪಡಿಸಿ ಬೇರೆ ರಾಜ್ಯದವನಾಗಿರುವ ಕಾರಣ ಪೊಲೀಸರು ಕಾರ್ಯಕರ್ತನ ತಡೆದಿದ್ದಾರೆ. ಚೆಕ್ ಪೋಸ್ಟ್ ಬಳಿ ಬ್ಯಾಂಡ್ ವಾದಕನ ತಡೆದು ವಾಹನದಿಂದ ಕೆಳಗಿಳಿಸಿದ್ದಾರೆ. ಇಷ್ಟೇ ಅಲ್ಲ ಚಿತ್ತಾಪುರ ಪಟ್ಟಣಕ್ಕೆ ಪ್ರವೇಶ ನಿರಾಕರಿಸಿದ್ದಾರೆ.
ಆರ್ಎಸ್ಎಸ್ ಪಥಸಂಚಲನಕ್ಕೆ ಆರಂಭದಲ್ಲೇ ತಡೆ ನೀಡಿದ ಪೊಲೀಸರಿಗೆ ಕಾರ್ಯಕರ್ತರು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಪೊಲೀಸರು ಯಾವುದೇ ವಾದಕ್ಕೆ ಮನ್ನಣೆ ನೀಡಿಲ್ಲ. ಎಲ್ಲಾ ಮನವಿ ತಳ್ಳ ಹಾಕಿದ್ದಾರೆ. ಹೀಗಾಗಿ ಆರ್‌ಎಸ್ಎಸ್ ಓರ್ವ ಬ್ಯಾಂಡ್ ವಾದಕನಿಲ್ಲದೆ ಮುಂದುವರಿಯಬೇಕಾದರೆ ಅನಿವಾರ್ಯತೆ ಎದುರಾಗಿದೆ.
ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನ ವಿವಾದ ಕೋರ್ಟ್ ಮೆಟ್ಟೇಲಿರಿತ್ತು. ಕೋರ್ಟ್ ನವೆಂಬರ್ 16ರಂದು ಷರತ್ತುಬದ್ದ ಅನುಮತಿ ನೀಡಿತ್ತು. ಈ ಕಂಡೀಷನ್‌ನಲ್ಲಿ, 300 ಮಂದಿ ಗಣವೇಷಧಾರಿಗಳು ಮಾತ್ರ ಅವಕಾಶ ನೀಡಲಾಗಿದೆ. ಇಷ್ಟೇ ಅಲ್ಲ 50 ಬ್ಯಾಂಡ್ ವಾದಕರಿಗೆ ಅನುಮತಿ ನೀಡಲಾಗಿದೆ. ಹೀಗಾಗಿ ಒಟ್ಟು 350 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದೇ ವೇಳೆ ಚಿತ್ತಾಪುರದ ಆರ್‌ಎಸ್ಎಸ್ ಕಾರ್ಯಕರ್ತನ ಹೊರತಪಡಿಸಿ ಇತರ ಜಿಲ್ಲೆ ಅಥವಾ ಇತರರಿಗೆ ಆರ್‌ಎಸ್ಎಸ್ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ ಎಂದಿದೆ. ಚಿತ್ತಾಪುರದ ಆರ್‌ಎಸ್ಎಸ್ ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ಚಿತ್ತಾಪುರದಿಂದ ಹೊರಗಿನ, ಅಂದರೆ ಒಡಿಶಾ ಮೂಲದ ಬ್ಯಾಂಡ್ ವಾದಕನಿಗೆ ಪೊಲೀಸರು ಅವಕಾಶ ನಿರಾಕರಿಸಲಾಗಿದೆ.
ಚಿತ್ತಾಪುರ ಆರ್‌ಎಸ್ಎಸ್ ಪಥಸಂಚಲನ ಕಳೆದ ಒಂದು ತಿಂಗಳಿನಿಂದ ದೇಶದ ಗಮನ ಸೆಳೆದಿದೆ. ಪ್ರಿಯಾಂಕ ಖರ್ಗೆ ಆರಂಭದಲ್ಲಿ ರಾಜ್ಯದಲ್ಲಿ ಆರ್‌ಎಸ್ಎಸ್ ಚಟುವಟಿಕೆ ನಿಷೇಧಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರ ಭಾರಿ ಕೋಲಾಹಲ ಸೃಷ್ಟಿಸಿತ್ತು. ಕೋಮುವಾದಿ ಹಾಗೂ ದೇಶದಲ್ಲಿ ಆತಂಕ ಸೃಷ್ಟಿಸುವ ಸಂಘಟನೆಗಳ ಕಾರ್ಯಚಟುವಟಿಕೆಗಳನ್ನು ಸರ್ಕಾರಿ ಸ್ಥಳ, ಸರ್ಕಾರಿ ಶಾಲಾ ಆವರಣ ಮೈದಾನಗಳಲ್ಲಿ ನಿಷೇಧಿಸಬೇಕು ಎಂದು ಮನವಿ ಮಾಡಿದ್ದರು. ಇದರಂತೆ ಸರ್ಕಾರ ಖಾಸಗಿ ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಯನ್ನು ನಿಷೇಧಿಸಿ ಆದೇಶಿಸಿತ್ತು. ಇದರ ಬೆನ್ನಲ್ಲೇ ಚಿತ್ತಾಪುರದಲ್ಲಿ ಜಿಲ್ಲಾಧಿಕಾರಿಗಳು ಆರ್‌ಎಸ್ಎಸ್ ಸೇರಿದಂತೆ ಇತರ ಕೆಲ ಸಂಘಟನೆಗಳ ಪಥಸಂಚಲನಕ್ಕೆ ಅವಕಾಶ ನಿರಾಕರಿಸಿದ್ದರು. ಹೀಗಾಗಿ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.