'ಅಯೋಧ್ಯೆ ತೀರ್ಪು ಯಾರ ಪರ ಬಂದರೂ ಜನತೆ ಶಾಂತಿಯಿಂದ ನಡೆದುಕೊಳ್ಳಬೇಕು'

By Web DeskFirst Published Nov 9, 2019, 10:25 AM IST
Highlights

ಅಯೋಧ್ಯೆ ತೀರ್ಪು|ಭಾರತದ ಸಮಗ್ರತೆ ಐಕ್ಯತೆಗೆ ಹೆಸರಾದ ದೇಶವಾಗಿದೆ| ನ್ಯಾಯಾಲಯದ ತೀರ್ಪನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಜನ ಸ್ವಾಗತಿಸಬೇಕು| ಭಾವೈಕ್ಯತೆ ಮತ್ತು ಏಕತೆಗೆ ಹೆಸರಾದ ದೇಶ ಭಾರತ| ದೇಶದ ಜನರೆಲ್ಲರೂ ಶಾಂತಿ ಸೌಹಾರ್ದತೆಯಲ್ಲಿ ಇರಬೇಕು| 

ಕಲಬುರಗಿ(ನ.9): ಇಂದು ಅಯೋಧ್ಯೆ ತೀರ್ಪು ಪ್ರಕಟವಾಗಲಿದೆ. ತೀರ್ಪು ಯಾರ ಪರ ಬಂದರೂ ಜನತೆ ಶಾಂತಿ, ಸಂಯಮದಿಂದ ನಡೆದುಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಮನವಿ ಮಾಡಿದ್ದಾರೆ.

ಶನಿವಾರ ನಗರದಲ್ಲಿ ಮಾತನಾಡಿದ ಅವರು, ಭಾರತದ ಸಮಗ್ರತೆ ಐಕ್ಯತೆಗೆ ಹೆಸರಾದ ದೇಶವಾಗಿದೆ. ಹೀಗಾಗಿ ನ್ಯಾಯಾಲಯದ ತೀರ್ಪನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಜನ ಸ್ವಾಗತಿಸಬೇಕು. ಭಾವೈಕ್ಯತೆ ಮತ್ತು ಏಕತೆಗೆ ಹೆಸರಾದ ದೇಶ ಭಾರತವಾಗಿದೆ. ದೇಶದ ಜನರೆಲ್ಲರೂ ಶಾಂತಿ ಸೌಹಾರ್ದತೆಯಲ್ಲಿ ಇರಬೇಕು ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಯೋಧ್ಯ ವಿಚಾರದಲ್ಲಿ ಸುಪ್ರೀಂಕೋರ್ಟಿನ ತೀರ್ಪು ದೇಶದ ಇತಿಹಾಸದಲ್ಲಿಯೇ ಐತಿಹಾಸಿಕವಾಗಿದೆ.ದೇಶದ 130 ಕೋಟಿ ಜನ ಒಪ್ಪುವಂತಹ ತೀರ್ಪು ಇದಾಗಿದೆ. ಭಾರತದ ಐಕ್ಯತೆ ಮತ್ತು ಸೌಹಾರ್ದತೆ ಕಾಪಾಡುವ ತೀರ್ಪು ಇದಾಗಿದೆ. ದೇಶದ ಏಕತೆ ಮತ್ತು ಅಖಂಡತೆ ಉಳಿಸಿ ಬೆಳೆಸಿಕೊಂಡು ಹೋಗಲು ಈ ತೀರ್ಪು ಸಹಕಾರಿಯಾಗಿದೆ ಎಲ್ಲರೂ ಈ ತೀರ್ಪನ್ನು ಗೌರವಿಸಿ ಅಣ್ಣ ತಮ್ಮಂದಿರಂತೆ ಬಾಳಬೇಕು ಎಂದು ಹೇಳಿದ್ದಾರೆ. 

ಅಯೋಧ್ಯೆ ತೀರ್ಪು ಪ್ರಕಟವಾಗಲಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 

 

click me!