ಅತ್ತಾಗ ಸಮಾಧಾನ ಪಡಿಸೋಕೆ ಯಾರಾದ್ರೂ ಇದ್ರೆ ಚೆನ್ನಾಗಿರುತ್ತಿತ್ತು ಅಂತ ಎಲ್ರಿಗೂ ಅನ್ಸುತ್ತೆ. ಇನ್ಮುಂದೆ ಆ ಟೆನ್ಶನ್ ಬೇಕಿಲ್ಲ. ಅತ್ತೆ ಕಣ್ಣೀರು ಒರೆಸೋಕೆ ಹುಡುಗರು ಬಾಡಿಗೆಗೆ ಸಿಗ್ತಾರೆ. ಅದು ಅಂತಿಂಥೋರಲ್ಲ ಹ್ಯಾಂಡ್‌ಸಮ್ ಬಾಯ್ಸ್.
ಜಗತ್ತಿನಲ್ಲಿ ಅದೆಷ್ಟು ಚಿತ್ರವಿಚಿತ್ರವಾದ ಆಸಕ್ತಿಕರ ಉದ್ಯೋಗಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ ಅಚ್ಚರಿಯಾಗೋದು ಖಂಡಿತ. ಇಡೀ ದಿನಾ ಟಿವಿ ನೋಡುವುದು, ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಕೆಲಸ ಮಾಡಿಕೊಳ್ಳುವುದು, ಸುಮ್ಮನೆ ಸೂಟ್ ಹಾಕಿಕೊಂಡು ಓಡಾಡುವುದಕ್ಕೆ ಕೂಡಾ ಸಂಬಳ ಕೊಡೋ ವಿಚಾರಗಳ ಬಗ್ಗೆ ನೀವು ಈ ಹಿಂದೆ ಕೇಳಿದ್ದೀರಿ. ಇಂಥಾ ಕೆಲವು ವಿಚಿತ್ರ ಕೆಲಸಗಳಿಗೆ ಸಾವಿರಗಟ್ಟಲೆ, ಲಕ್ಷಗಟ್ಟಲೆ, ಕೋಟಿಗಟ್ಟಲೆ ಸ್ಯಾಲರಿ ನಿಗದಿಪಡಿಸಿರುತ್ತಾರೆ. ಇದು ಸಹ ಅಂಥದ್ದೇ ಒಂದು ವಿಚಿತ್ರ ಜಾಬ್. ಅತ್ತವರ ಕಣ್ಣೀರು ಒರೆಸಿದ್ರೆ ಸಾಕು ತಿಂಗಳಿಗೆ ಲಕ್ಷಗಟ್ಟಲೆ ದುಡ್ಡು ಸಂಪಾದಿಸ್ಬೋದು. ಜಪಾನ್‌ನಲ್ಲಿ ಹೀಗೆ ಕಣ್ಣೀರು ಒರೆಸೋ ಹ್ಯಾಂಡ್‌ಸಮ್ ಹುಡುಗರು ಬಾಡಿಗೆಗೆ ದೊರಕುತ್ತಾರೆ.
ಕೇಳೋಕೆ ಸ್ಪಲ್ಪ ವಿಚಿತ್ರ ಅನಿಸಿದ್ರೂ ನಿಜ. ಜಪಾನ್‌ನಲ್ಲಿ ಕಚೇರಿಗಳಲ್ಲಿ ಉದ್ಯೋಗಿಗಳಿಗೆ ಉಂಟಾಗುವ ಸ್ಟ್ರೆಸ್‌ನ್ನು ಕಡಿಮೆ ಮಾಡಲು ಈ ವಿಶೇಷ 'ಹ್ಯಾಂಡ್‌ಸಮ್ ವೀಪಿಂಗ್ ಬಾಯ್ಸ್'ಗಳನ್ನು ನೇಮಿಸಿಕೊಳ್ಳಲಾಗ್ತಿದೆ. ಒಬ್ಬರ ಕಣ್ಣೀರು ಒರೆಸೋಕೆ ಇವರಿಗೆ ಭರ್ತಿ 7,900 ಯೆನ್ ಅಥವಾ ಸರಿಸುಮಾರು ರೂ 4,400 ಶುಲ್ಕವನ್ನು ಪಾವತಿಸಬೇಕು. ಈ ಹ್ಯಾಂಡ್‌ಸಮ್ ಹುಡುಗರನ್ನು ಬಾಡಿಗೆಗೆ ಸಹ ಇಟ್ಟುಕೊಳ್ಳಬಹುದು. ಈ ಕಣ್ಣೀರು ಒರೆಸುವ ವೃತ್ತಿಪರರು ಕೆಲಸದ ಸ್ಥಳದಲ್ಲಿ ಹಂಚಿಕೊಂಡ ಕಣ್ಣೀರು ಮತ್ತು ಭಾವನಾತ್ಮಕ ಸಂಪರ್ಕದ ಮೂಲಕ ಸಾಂತ್ವನ ನೀಡುವ ಮೂಲಕ ಸಾಮಾಜಿಕ ಮಾನದಂಡಗಳನ್ನು ಮುರಿಯುತ್ತಿದ್ದಾರೆ.
ಛೀ! ಈ ವಾಸನೆ ತಗೊಂಡ್ರೆ ತಿಂಗಳಿಗೆ 1.5 ಲಕ್ಷ ರೂ. ಸಂಬಳ ಕೊಡ್ತಾರಂತೆ...
ಇಕೆಮೆಸೊ ಡ್ಯಾನ್ಶಿಯನ್ನು ಹಿರೋಕಿ ಟೆರಾಯ್ ಎಂಬ ವ್ಯಕ್ತಿ ಕೆಲಸದ ಸ್ಥಳದಲ್ಲಿ ಉಂಟಾಗುವ ಒತ್ತಡವನ್ನು ಎದುರಿಸಲಾಗದೆ ಸಂಕಷ್ಟವನ್ನು ಅನುಭವಿಸಿದರು. ಮಾನಸಿಕವಾಗಿ ಒತ್ತಡವನ್ನು ಎದುರಿಸಿದರು. ಹೀಗಾಗಿ ಹೀಗೆ 'ಕಣ್ಣೀರು ಒರೆಸುವ ಹುಡುಗರು' ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದಾರೆ. ಅನ್‌ಲೈನ್‌ನಲ್ಲಿ ಇಕೆಮೆಸೊ ಬಾಯ್ಸ್ ಪೇಜ್‌ನಲ್ಲಿ ಗ್ರಾಹಕರಿಗೆ ಈ ಸೇವೆಯು ಲಭ್ಯವಿರುತ್ತದೆ.
ಇಲ್ಲಿ ಪ್ರತಿಯೊಬ್ಬ ಉದ್ಯೋಗಿಗಳು ವೀಪಿಂಗ್ ಬಾಯ್ಸ್ ಬಳಿ, ಆಫೀಸಿನ ದುಃಖದ ಕ್ಷಣವನ್ನು ಹಂಚಿಕೊಳ್ಳಬಹುದು, ತಮಗಾದ ಒತ್ತಡದ ಬಗ್ಗೆ ಹೇಳಿಕೊಳ್ಳಬಹುದಾಗಿದೆ. 'ಕಚೇರಿಗಳಲ್ಲಿ ಹೆಚ್ಚಾಗುವ ಒತ್ತಡವನ್ನು ಅಳದೆ ಕಷ್ಟಪಟ್ಟು ಸಹಿಸಿಕೊಳ್ಳುವುದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದು ಕೆಲಸದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ಕಣ್ಣೀರು ಒರೆಸುವ ಉದ್ಯೋಗುವನ್ನು ಸೃಷ್ಟಿ ಮಾಡಲು ಮುಂದಾದೆವು' ಎಂದು ವೀಪಿಂಗ್ ಬಾಯ್ಸ್‌ನ ಸಂಸ್ಥಾಪಕರು ಹೇಳಿದ್ದಾರೆ.
ದಿನಿವಿಡೀ ಸುಮ್ನೆ ಕ್ಯಾಂಡಿ ತಿನ್ತಿದ್ರೆ ಸಾಕು, ವರ್ಷಕ್ಕೆ 61 ಲಕ್ಷ ರೂ. ಸ್ಯಾಲರಿ !
2013 ರಲ್ಲಿ ದುಃಖದ ಚಲನಚಿತ್ರ ಕ್ಲಿಪ್‌ಗಳ ಉಚಿತ ಪ್ರದರ್ಶನವನ್ನು ಪ್ರಾರಂಭಿಸಿದ ನಂತರ, ಅಪರಿಚಿತರನ್ನು ಒಟ್ಟಿಗೆ ಅಳಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿರುವ ಟೆರೈ ಈ ಪರಿಕಲ್ಪನೆಯನ್ನು "ಇಕೆಮೆಸೊ ಡ್ಯಾನ್ಶಿ" ಎಂಬ ಶೀರ್ಷಿಕೆಯ ಪುಸ್ತಕಕ್ಕೆ ಯಶಸ್ವಿಯಾಗಿ ಭಾಷಾಂತರಿಸಿದ್ದಾರೆ. ಪ್ರಕಟಣೆಯು ಪುರುಷ ಮಾದರಿಗಳು ಕಣ್ಣೀರು ಸುರಿಸುತ್ತಿರುವ ಎಬ್ಬಿಸುವ ಛಾಯಾಚಿತ್ರಗಳನ್ನು ಒಳಗೊಂಡಿದೆ.
ಇಕೆಮೆಸೊ ಡ್ಯಾನ್ಶಿಯ ವೀಪಿಂಗ್ ಬಾಯ್ಸ್ ಮಾತ್ರವಲ್ಲದೆ ಈ ಹಿಂದೆ ಟೋಕಿಯೊ ಮುದ್ದಾಡುವ ಟೈಂ, ಬಾಡಿಗೆಗೆ ಸ್ನೇಹಿತ ಸೇವೆಗಳನ್ನು ಉದ್ಯಮವನ್ನು ಆರಂಭಿಸಿದ್ದರು. ಈ ಮೂಲಕ ಅಸಾಂಪ್ರದಾಯಿಕ ವಿಧಾನಗಳ ಮೂಲಕ ಭಾವನಾತ್ಮಕ ಅಗತ್ಯಗಳನ್ನು ಬಗೆಹರಿಸುವ ಅಗತ್ಯತೆಯನ್ನು ಒತ್ತಿ ಹೇಳಿದ್ದರು.