ಉದ್ಯೋಗಿಗಳೇ! PIP ಹೆಸರಿನಲ್ಲಿ ಕೆಲಸದಿಂದ ವಜಾ ಮಾಡಲಾಗತ್ತೆ ಹುಷಾರ್!‌ ಆಗ ಏನ್‌ ಮಾಡಬೇಕು?

Published : Mar 21, 2025, 01:41 PM ISTUpdated : Mar 21, 2025, 02:33 PM IST
ಉದ್ಯೋಗಿಗಳೇ! PIP ಹೆಸರಿನಲ್ಲಿ ಕೆಲಸದಿಂದ ವಜಾ ಮಾಡಲಾಗತ್ತೆ ಹುಷಾರ್!‌ ಆಗ ಏನ್‌ ಮಾಡಬೇಕು?

ಸಾರಾಂಶ

ಆಫೀಸ್‌ಗಳಲ್ಲಿ ಪಿಐಪಿ ಎನ್ನೋದು ಈಗ ಭಾರೀ ಬಳಕೆಯಾಗುತ್ತಿದೆ. ಹಾಗಾದರೆ ಪಿಐಪಿ ಎಂದರೇನು? ಫಿಐಪಿಗೆ ಹಾಕಿದಾಗ ಏನು ಮಾಡಬೇಕು? 

ಇತ್ತೀಚೆಗೆ ಆಫೀಸ್‌ಗಳಲ್ಲಿ ಪಿಐಪಿ ಎನ್ನುವ ಪದ ಸಾಕಷ್ಟು ಸದ್ದು ಮಾಡ್ತಿದೆ. ಕಾಸ್ಟ್‌ ಕಟಿಂಗ್‌ ಒಂದು ಕಡೆಯಾದರೆ, ಪಿಐಪಿ ಎನ್ನೋದು ಇನ್ನೊಂದು ತಲೆನೋವಾಗಿದೆ. ಉದ್ಯೋಗಿಗಳಿಗೆ ಉತ್ತಮ ಕೆಲಸ ಮಾಡಲು ಅಥವಾ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ನೀಡುವ ಗಡುವು ಇದಾಗಿದ್ದರೂ ಕೂಡ ಇಂದು ಇದನ್ನೇ ಕೆಲಸದಿಂದ ತೆಗೆದು ಹಾಕಲು ಅಸ್ತ್ರ ಮಾಡಿಕೊಳ್ಳಲಾಗಿದೆ.

ಪಿಐಪಿ ಅಂದರೇನು?
ಪಿಐಪಿ ಎಂದರೆ performance improvement plans.  ಕನ್ನಡದಲ್ಲಿ ಕಾರ್ಯಕ್ಷಮತೆ ಸುಧಾರಣೆ ಯೋಜನೆ ಎಂದು ಹೇಳಲಾಗುವುದು. ಓರ್ವ ಉದ್ಯೋಗಿ ಸರಿಯಾಗಿ ಕೆಲಸ ಮಾಡದಿದ್ದಾಗ ಅವರಿಗೆ ಕೆಲಸ ಸುಧಾರಿಸಿಕೊಳ್ಳಲು ಒಂದರಿಂದ ಮೂರು ತಿಂಗಳುಗಳ ಕಾಲ ಸಮಯ ಕೊಡಲಾಗುವುದು. ಆ ಸಮಯದಲ್ಲಿ ಆ ಉದ್ಯೋಗಿ ಕೊಟ್ಟ ಟಾರ್ಗೆಟ್‌ ಚೆನ್ನಾಗಿ ರೀಚ್‌ ಆದರಂತೂ ಸರಿ, ಮಾಡಿಲ್ಲವೆಂದರೆ ಕೆಲಸದಿಂದ ವಜಾ ಮಾಡಲಾಗುವುದು. 

ಡಿವೋರ್ಸ್ ಜೀವನಾಂಶ ಹೇಗೆ ನಿರ್ಧಾರವಾಗುತ್ತೆ? ಪುರುಷರಿಗೂ ಸಿಗುತ್ತಾ ಹಣ?

ಟಾರ್ಗೆಟ್‌ ಕೊಡ್ತಾರೆ
ಓರ್ವ ಉದ್ಯೋಗಿಗೆ ಇಷ್ಟು ಸಮಯದಲ್ಲಿ ಹೀಗೆ ಕೆಲಸ ಆಗಬೇಕು, ಟಾರ್ಗೆಟ್‌ ರೀಚ್‌ ಆಗಬೇಕು ಎಂದು ಗಡವು ಕೊಡಲಾಗುತ್ತದೆ. ಇದು ಅವರಿಗೆ ಎಚ್ಚರಿಕೆಯ ಕರೆಘಂಟೆ.

ಪಿಐಪಿಗೆ ಹಾಕಿದಾಗ ಏನು ಮಾಡಬೇಕು?
ಉದ್ಯೋಗಿಯನ್ನು ಪಿಐಪಿಗೆ ಹಾಕಿದಾಗ ತಾನು ಎಲ್ಲಿ ಎಡವುತ್ತಿದ್ದೇನೆ? ಏನು ತಪ್ಪಾಗಿದೆ? ಉಳಿದವರು ಹೇಗೆ ಕೆಲಸ ಮಾಡುತ್ತಿದ್ದಾರೆ? ನಾನು ಹೇಗೆ ಮಾಡುತ್ತಿದ್ದೇನೆ ಎಂದು ಮೊದಲು ಆಲೋಚಿಸಿಕೊಳ್ಳಬೇಕು. ತಮ್ಮ ಮೇಲಧಿಕಾರಿ ಅಥವಾ ಮ್ಯಾನೇಜರ್‌ ಬಳಿ ಹೇಗೆ ಕೆಲಸವನ್ನು ಸುಧಾರಿಸಿಕೊಳ್ಳಬಹುದು, ಹೇಗೆ ಕೆಲಸ ಮಾಡಬೇಕು ಎಂದು ಕೂತು ಮಾತನಾಡಬೇಕು. ಕೆಲಸವನ್ನು ಇನ್ನಷ್ಟು ಚೆನ್ನಾಗಿ ಮಾಡಲು ಇನ್ನಷ್ಟು ಕೌಶಲ ಕಲಿಯಬೇಕು. 

ಕೇವಲ ₹15000 ಬಂಡವಾಳ ಹಾಕಿ ಈ ಬಿಸಿನೆಸ್, ಆರಂಭಿಸಿ ಲಕ್ಷಗಳಲ್ಲಿ ಲಾಭ ಗಳಿಸಿ!

ನಿಜಕ್ಕೂ ಏನಾಗುತ್ತಿದೆ
ಕೆಲ ಕಂಪೆನಿಗಳಲ್ಲಿ ಚೆನ್ನಾಗಿ ಕೆಲಸ ಮಾಡಿದರೂ ಕೂಡ ಉದ್ಯೋಗಿಯನ್ನು ವಜಾ ಮಾಡಲಾಗುವುದು. ಪಿಐಪಿ ಹಾಕ್ತೀನಿ ಎಂದು ಹೇಳಿ ಅವರಿಗೆ ಸಾಧಿಸಲು ಸಾಧ್ಯವಾಗದ ಟಾರ್ಗೆಟ್‌ ಕೊಡಲಾಗುತ್ತದೆ. ಉಳಿದ ಉದ್ಯೋಗಿಗಳಿಗೆ ನೀಡಿದ ಟಾರ್ಗೆಟ್‌ಗಿಂತ ದುಪ್ಪಟ್ಟು ಟಾರ್ಗೆಟ್‌ ಕೊಡಲಾಗುತ್ತದೆ. ಆ ಉದ್ಯೋಗಿ ಸಹಜವಾಗಿ ಟಾರ್ಗೆಟ್‌ ರೀಚ್‌ ಮಾಡಲು ಸಾಧ್ಯವಾಗಿರೋದಿಲ್ಲ. ಆಗ ಅವರನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಉದ್ಯೋಗಿಗಳಿಗೆ ಈ ಸಮಸ್ಯೆ ಆಗ್ತಿದೆ. ಕೆಲಸದಿಂದ ವಜಾ ಮಾಡಲು ಒಂದು ಕೆಲಸದ ಕೊರತೆ ಇರಬೇಕು ಇಲ್ಲವೇ ಬಿಹೇವಿಯರ್‌ ಸಮಸ್ಯೆ ಇರಬೇಕು. ಕೆಲಸವೂ ಚೆನ್ನಾಗಿದ್ದು, ಬಿಹೇವಿಯರ್‌ ಮೇಲೂ ಪ್ರಶ್ನೆ ಮಾಡಲು ಸಾಧ್ಯ ಆಗದೇ ಇದ್ದಾಗ ಕೆಲ ಮ್ಯಾನೇಜರ್‌ಗಳು ಈ ದಾರಿ ಹಿಡಿಯುತ್ತಾರೆ. ಇಲ್ಲಿ HR ( ಮಾನವ ಸಂಪನ್ಮೂಲ ನಿರ್ವಹಣೆ ) ಕೂಡ ಪಿಐಪಿಗೆ ಹಾಕಿದ ಉದ್ಯೋಗಿಗಳ ಟಾರ್ಗೆಟ್‌ ಎಷ್ಟಿದೆ? ಈ ಹಿಂದೆ ಹೇಗೆ ಕೆಲಸ ಮಾಡಿದ್ದರು ಎಂದು ಒಮ್ಮೆ ಚೆಕ್‌ ಮಾಡಿದರೆ ಒಳ್ಳೆಯದು. ಇಲ್ಲಿ HR ಕೆಲಸ ಜಾಸ್ತಿ ಇದೆ. 

ಸಾಧಿಸಲು ಸಾಧ್ಯವಾಗದ ಟಾರ್ಗೆಟ್‌ ಕೊಟ್ಟಾಗ ಎಚ್‌ಆರ್‌ ಜೊತೆ ಆ ಉದ್ಯೋಗಿ ಮಾತನಾಡಬೇಕು. ಇದರಿಂದ ಒಮ್ಮೊಮ್ಮೆ ಸಮಸ್ಯೆ ಬಗೆಹರಿಯಬಹುದು, ಬಗೆಹರಿಯದೇ ಇರಬಹುದು. ಅದೆಲ್ಲವೂ ಆ ಕಂಪೆನಿಯ ಮೇಲಧಿಕಾರಿಗಳ ಹಿಡಿತದಲ್ಲಿರೋದರಿಂದ ಏನೂ ಹೇಳಲಾಗದು. 

ಉದ್ಯೋಗಿ ಮರಣಾನಂತರ ಪತ್ನಿಗೆ 10 ವರ್ಷ ಸಂಬಳ ಕೊಡೋ, ಮಗುವಿಗೆ ತಿಂಗಳಿಗೆ 86500 ರೂ ಕೊಡೋ ಕಂಪೆನಿ ಇದು

ರಾಜೀನಾಮೆ ನೀಡುತ್ತಾರೆ
ಕೆಲಸ ಚೆನ್ನಾಗಿ ಮಾಡಿದ್ದರೂ ಕೂಡ ಪಿಐಪಿಗೆ ಹಾಕಲಾಗುತ್ತದೆ. ಪಿಐಪಿಗೆ ಹಾಕುತ್ತಾರೆ ಎನ್ನುವ ಹೆಸರು ಬರುತ್ತದೆ ಎಂಬ ಭಯಕ್ಕೆ ಎಂದು ಕೆಲ ಉದ್ಯೋಗಿಗಳು ರಾಜೀನಾಮೆ ನೀಡುತ್ತಾರೆ. ಪಿಐಪಿಗೆ ಹಾಕಿದಾಗ ಸಹಜವಾಗಿ ಉದ್ಯೋಗಿಯ ಮಾನಸಿಕ ಸ್ಥಿತಿ ಹದಗೆಡುತ್ತದೆ, ಆತಂಕ ಆಗುತ್ತದೆ, ಭರವಸೆ ಕುಗ್ಗುತ್ತದೆ. ಹೀಗಾಗಿ ಉದ್ಯೋಗಿ ರಾಜೀನಾಮೆ ನೀಡಿ ಬೇರೆ ಉದ್ಯೋಗ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. 


ಪಿ

PREV
Read more Articles on
click me!

Recommended Stories

ಹಂತ ಹಂತವಾಗಿ 1.88 ಲಕ್ಷ ಸರ್ಕಾರಿ ಹುದ್ದೆ ಭರ್ತಿ : ಸಿದ್ದರಾಮಯ್ಯ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!