
ಶಿಕ್ಷಣ, ಸಾಮರ್ಥ್ಯ ಇದ್ರೂ ಅನೇಕ ಮಹಿಳೆಯರಿಗೆ ಮನೆಯಿಂದ ಹೊರಗೆ ಹೋಗಿ ಕೆಲ್ಸ ಮಾಡೋಕೆ ಸಾಧ್ಯ ಆಗ್ತಿಲ್ಲ. ಬಿಡುವಿನ ಟೈಂನಲ್ಲಿ ವರ್ಕ್ ಫ್ರಂ ಹೋಮ್ ಕೆಲ್ಸ ಏನಿದೆ ಅಂತ ಹುಡುಕ್ತಿರ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವರ್ಕ್ ಫ್ರಮ್ ಹೋಮ್ ಜಾಹೀರಾತು ಬರ್ತಿರುತ್ತೆ. ಆದ್ರೆ ಅದನ್ನು ನಂಬೋದು ಕಷ್ಟ. ಅನೇಕರು ಹಣ ಪಡೆದು ಮೋಸ ಮಾಡಿದ್ರೆ ಮತ್ತೆ ಕೆಲವರು ಕೆಲ್ಸ ಮಾಡಿಸ್ಕೊಂಡು ಸಂಬಳ ನೀಡೋದಿಲ್ಲ. ಯಾವ್ದೆ ಮೋಸ ಇಲ್ದೆ, ನಿಮ್ಮ ಅರ್ಹತೆಗೆ ತಕ್ಕಂತೆ ಮನೆಯಲ್ಲೇ ಕುಳಿತು ಕೆಲ್ಸ ಮಾಡ್ಬೇಕು. ಆರ್ಥಿಕವಾಗಿ ಸ್ವಾವಲಂಬಿಗಳಾಗ್ಬೇಕು ಎನ್ನುವ ಮಹಿಳೆಯರಿಗೆ ಸರ್ಕಾರದ ಯೋಜನೆಯೊಂದಿದೆ. ಆ ಯೋಜನೆಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಂಡು ನೀವು ಮನೆಯಿಂದ್ಲೇ ಕೆಲ್ಸ ಮಾಡ್ಬಹುದು.
ವರ್ಕ್ ಫ್ರಮ್ ಹೋಮ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ :
• ಮಹಿಳೆಯ ಕನಿಷ್ಠ ವಯಸ್ಸು18 ವರ್ಷ
• ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
• ಆರ್ಥಿಕವಾಗಿ ದುರ್ಬಲ ವರ್ಗ, ವಿಧವೆಯರು, ವಿಚ್ಛೇದಿತರು, ವಿಕಲಾಂಗರು, ಹಿಂಸಾಚಾರಕ್ಕೆ ಒಳಗಾದ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.
• ಅರ್ಜಿದಾರರು 8 ನೇ ತರಗತಿ, 10 ನೇ ತರಗತಿ ಪಾಸ್ ಆಗಿರ್ಬೇಕು. ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ನೀಡಲಾಗುವುದು.
• ಈ ಯೋಜನೆ ಜಾರಿಯಲ್ಲಿರುವ ರಾಜ್ಯದ ಶಾಶ್ವತ ನಿವಾಸಿಯಾಗಿರಬೇಕು.
• ಕೆಲಸಕ್ಕೆ ಅಗತ್ಯವಾದ ಕೌಶಲ್ಯ ಅಥವಾ ಅನುಭವ ಹೊಂದಿರುವ ಮಹಿಳೆಯರಿಗೆ ಹೆಚ್ಚಿನ ಅವಕಾಶ
ಮುಖ್ಯಮಂತ್ರಿ ವರ್ಕ್ ಫ್ರಮ್ ಹೋಮ್ ಅರ್ಜಿ ಸಲ್ಲಿಕೆ ಹೇಗೆ? :
• ಮುಖ್ಯಮಂತ್ರಿ ವರ್ಕ್ ಫ್ರಮ್ ಹೋಮ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
• ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿರುವ ಆನ್ಬೋರ್ಡಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು
• ಆನ್ಲೈನ್ ನೋಂದಣಿ ಫಾರ್ಮ್ ಓಪನ್ ಆದ್ಮೇಲೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನುಭರ್ತಿ ಮಾಡಬೇಕು.
• ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
• ಅಂತಿಮವಾಗಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಬೇಕು.
• ರಿಜಿಸ್ಟ್ರೇಷನ್ ನಂತ್ರ ನೋಂದಣಿ ಐಡಿ ಮತ್ತು ಪಾಸ್ವರ್ಡ್ ಸಿಗುತ್ತದೆ.
• ಮತ್ತೆ ವೆಬ್ಸೈಟ್ ಗೆ ಲಾಗಿನ್ ಆಗಿ ಮತ್ತು ನಿಮ್ಮ ನೆಚ್ಚಿನ ಕೆಲಸವನ್ನು ಆಯ್ಕೆ ಮಾಡಿ, ಅರ್ಜಿ ಸಲ್ಲಿಸಿ.
ಮುಖ್ಯಮಂತ್ರಿ ವರ್ಕ್ ಫ್ರಮ್ ಯೋಜನೆಗೆ ಅಗತ್ಯವಿರುವ ದಾಖಲೆ : SSO ಐಡಿ, ಆಧಾರ್ ಕಾರ್ಡ್ ಸಂಖ್ಯೆ, ಜನ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ , ಇಮೇಲ್ ಐಡಿ, ಉನ್ನತ ಶೈಕ್ಷಣಿಕ ಅರ್ಹತೆ ಪ್ರಮಾಣಪತ್ರ, ಕೆಲಸದ ಅನುಭವಕ್ಕೆ ಸಂಬಂಧಿಸಿದ ದಾಖಲೆಗಳು, ಕೌಶಲ್ಯ ಪ್ರಮಾಣಪತ್ರ