₹2 ಕೋಟಿ ಸಂಬಳ, ಫ್ರೀ ಊಟ-ವಸತಿ; ಆದರೂ ಯಾಕೆ ಯಾರೂ ಅಪ್ಲೈ ಮಾಡ್ತಿಲ್ಲ?

Published : Oct 22, 2024, 03:22 PM IST
₹2 ಕೋಟಿ ಸಂಬಳ, ಫ್ರೀ ಊಟ-ವಸತಿ; ಆದರೂ ಯಾಕೆ ಯಾರೂ ಅಪ್ಲೈ ಮಾಡ್ತಿಲ್ಲ?

ಸಾರಾಂಶ

ವಾರ್ಷಿಕ ₹2 ಕೋಟಿ ಸಂಬಳದ ಮನೆಗೆಲಸದ ಕೆಲಸಕ್ಕೆ ಜನ ಅರ್ಜಿ ಸಲ್ಲಿಸುತ್ತಿಲ್ಲ. ಊಟ, ವಸತಿ ಒದಗಿಸಿದರೂ, ಕೆಲವು ಕಠಿಣ ಷರತ್ತುಗಳಿಂದಾಗಿ ಯಾರೂ ಮುಂದೆ ಬರುತ್ತಿಲ್ಲ.

ಬೀಜಿಂಗ್: ನಿರುದ್ಯೋಗ ಸಮಸ್ಯೆ ಎಲ್ಲಾ ದೇಶಗಳಲ್ಲಿಯೂ ಕಂಡು ಬರುತ್ತದೆ. ಒಂದೊಂದು ಸರ್ಕಾರಿ ಹುದ್ದೆಗೆ ಸಾವಿರಾರು ಜನರು ಅಪ್ಲೈ ಮಾಡುತ್ತಿರುತ್ತಾರೆ. ಆದ್ರೆ ಕೆಲವೊಂದು ಉದ್ಯೋಗ ಮಾಡಲು ಜನರು ಹಿಂದೇಟು ಹಾಕುತ್ತಿರುತ್ತಾರೆ. ಇಂತಹ ಉದ್ಯೋಗಗಳ ಅರ್ಜಿ ಆಹ್ವಾನ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹವುದೇ ಒಂದು ಉದ್ಯೋಗ ಜಾಹೀರಾತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಕೆಲಸಕ್ಕೆ ಆಯ್ಕೆಯಾಗುವ ವ್ಯಕ್ತಿಗೆ ವಾರ್ಷಿಕ 2 ಕೋಟಿ ರೂಪಾಯಿ ನೀಡಲಾಗುತ್ತದೆ. ಸಂಬಳದ ಜೊತೆಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ನೀಡಲಾಗುತ್ತದೆ. ಇಷ್ಟು ಒಳ್ಳೆಯ ಸಂಬಳ ನೀಡುವ ಘೋಷಣೆ ಮಾಡಿದರೂ ಯಾರು ಈ ಕೆಲಸಕ್ಕೆ ಮುಂದಾಗುತ್ತಿಲ್ಲ. ಹಾಗಾದ್ರೆ ಯಾವುದು ಈ ಕೆಲಸ ಅಂತ ಎಂಬುದನ್ನು ನೋಡೋಣ ಬನ್ನಿ.

ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಈ ಉದ್ಯೋಗ ಸಿಕ್ಕರೆ ಚೀನಾದಲ್ಲಿ ಕೆಲಸ ಮಾಡಬೇಕು. ಚೀನಾದ ಶಾಂಘೈನ ನಿವಾಸಿಯಾಗಿರುವ ಮಹಿಳೆ ತಮ್ಮ ಪರ್ಸನಲ್ ಕೆಲಸಗಳಿಗಾಗಿ ಸೇವಕಿಯನ್ನು ಹುಡುಕುತ್ತಿದ್ದಾರೆ. ಸೇವಕಿಯಾದವಳು 24 ಗಂಟೆಯೂ  ಮಾಲಕಿಯ ಎಲ್ಲಾ ಬೇಕು-ಬೇಡಗಳನ್ನು ನೋಡಿಕೊಳ್ಳುವ ಕೆಲಸ ಮಾಡಬೇಕು. ಈ ಕೆಲಸಕ್ಕಾಗಿ ತಿಂಗಳಿಗೆ 16 ಲಕ್ಷಕ್ಕೂ ಅಧಿಕ ಸಂಬಳ ನೀಡಲು ಮಹಿಳೆ ಸಿದ್ಧವಾಗಿದ್ದಾರೆ.

ಮಹಿಳೆ ನೀಡಿದ ಜಾಹೀರಾತಿನ ಪ್ರಕಾರ, ಊಟ ಮತ್ತು ವಸತಿ ಸೇರಿದಂತೆ ವಾರ್ಷಿಕ 2 ಕೋಟಿ ರೂ.ಗೂ ಅಧಿಕ ಪ್ಯಾಕೇಜ್‌ವುಳ್ಳ ಉದ್ಯೋಗ ಇದಾಗಿದೆ. ತಿಂಗಳಿಗೆ 1,644,435.25 ರೂಪಾಯಿ ಸಂಬಳ ನಿಗಧಿ ಮಾಡಲಾಗಿದೆ. ಆದ್ರೆ ಈ ಉದ್ಯೋಗಕ್ಕೆ ಹಾಕಿರುವ ಕೆಲ ಷರತ್ತುಗಳಿಂದ ಯಾರು ಸಹ ಅಪ್ಲೈ ಮಾಡುತ್ತಿಲ್ಲ. ಮಹಿಳಾ ಅರ್ಜಿದಾರರು 165 ಸೆಂಟಿ ಮೀಟರ್ ಎತ್ತರ ಇರಬೇಕು ಮತ್ತು 55 ಕೆಜಿ ತೂಕ ಹೊಂದಿರಬೇಕು. ಕನಿಷ್ಠ 12ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚು ಓದಿರಬೇಕು. ನೋಡಲು ಸ್ವಚ್ಛವಾಗಿರಬೇಕು, ಹೌಸ್‌ ಕೀಪಿಂಗ್ ಸರ್ವಿಸ್‌ನ ಎಲ್ಲಾ ಕೆಲಸಗಳು ಬರುತ್ತಿರಬೇಕು. ಇಷ್ಟು ಮಾತ್ರವಲ್ಲದೇ ಮಹಿಳೆ ಗಾಯನ ಮತ್ತು ಡ್ಯಾನ್ಸ್ ಸಹ ಬರುತ್ತಿರಬೇಕು ಎಂಬ ಷರತ್ತು ವಿಧಿಸಿದ್ದಾರೆ. ಸದ್ಯ ಈ ಜಾಹೀರಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಏಕಾಏಕಿ ಕೆಲಸ ಕಳೆದುಕೊಂಡರೆ ನಿಭಾಯಿಸುವುದು ಹೇಗೆ? ಇಲ್ಲಿದೆ ಹಣಕಾಸು ಸಲಹೆ!

ಜಾಹೀರತು ನೀಡಿರುವ ಮಹಿಳೆಗೆ ಮನೆಗೆಲಸಕ್ಕೆ ಸಹಾಯಕಿ ಬೇಕಾಗಿದ್ದಾಳೆ. ಈಗಾಗಲೇ ಮಹಿಳೆ ಬಳಿ 12-12 ಗಂಟೆ ಕೆಲಸ ಮಾಡುವ ಇಬ್ಬರು ಸೇವಕಿಯರಿದ್ದಾರೆ. ಈ ಇಬ್ಬರಿಗೂ ಇದೇ ಸಂಬಳವನ್ನು ನೀಡಲಾಗುತ್ತಿದೆ. ಆದ್ರೆ ಈ ಕೆಲಸಕ್ಕೆ ಹೋಗುವವರು ಸ್ವಾಭಿಮಾನವನ್ನು ಮನೆಯಲ್ಲಿಯೇ ಬಿಟ್ಟು ಹೋಗಬೇಕು. ಕಾರಣ ಮಾಲಕಿ ಹೇಳಿದ್ರೆ ಆಕೆಯ ಕಾಲುಗಳನ್ನು ಸಹ ಒತ್ತಬೇಕು. ಕೇಳಿದಾಗ ಮಾಲಕಿಗೆ ಹಣ್ಣು, ನೀರು ನೀಡುತ್ತಿರಬೇಕು. ಆಕೆ ಬರುವ ಮೊದಲೇ ಗೇಟ್ ಬಳಿ ನಿಂತು ಕಾಯುತ್ತಿರಬೇಕು. ಬೆರಳಿನಲ್ಲಿ ತೋರಿಸಿದ ಕೆಲಸವನ್ನು ಚಾಚೂ ತಪ್ಪದೇ ಶ್ರದ್ಧೆಯಿಂದ ಮಾಡಬೇಕು. ಇದೆಲ್ಲದರ ಜೊತೆಯಲ್ಲಿ ಯಜಮಾನಿಯ ಬಟ್ಟೆಯನ್ನು ಸಹ ಸೇವಕಿಯರೇ ಬದಲಿಸಬೇಕು. 

ಫೈಲ್ಸ್ ಉಲ್ಬಣಿಸಿದೆ ರಜೆ ಕೊಡಿ ಎಂದ ಉದ್ಯೋಗಿಗೆ ಸಾಕ್ಷ್ಯ ಕೇಳಿದ ಬಾಸ್: ಆತ ಮಾಡಿದ್ದೇನು?

PREV
Read more Articles on
click me!

Recommended Stories

ಮದುವೆ ಹತ್ತಿರ ಇರುವಾಗ್ಲೆ 25 ಲಕ್ಷ ಸ್ಯಾಲರಿ ಕೆಲ್ಸ ಬಿಟ್ಟು ಡೆಲಿವರಿ ಬಾಯ್ ಆದ, ಇಂಟರೆಸ್ಟಿಂಗ್ ಆಗಿದೆ ಕಾರಣ
ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?