ಕೇಂದ್ರ ಲೋಕಸೇವಾ ಆಯೋಗ ಖಾಲಿ ಇರುವ ವಿವಿಧ 161 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್.16 ಕೊನೆಯ ದಿನವಾಗಿದೆ.
ಬೆಂಗಳೂರು (ಮೇ.31): ಕೇಂದ್ರ ಲೋಕಸೇವಾ ಆಯೋಗ (Union Public Service Commission- UPSC) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಉಪ-ಪ್ರಾಂಶುಪಾಲರು ( Vice- Principal), ಸೇರಿ ವಿವಿಧ 161 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್.16 ಆಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ upsc.gov.in ಗೆ ಭೇಟಿ ನೀಡಲು ಕೋರಲಾಗಿದೆ. https://www.upsconline.nic.in/ ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಒಟ್ಟು 161 ಹುದ್ದೆಗಳ ಮಾಹಿತಿ ಇಂತಿದೆ:
ಉಪ-ಪ್ರಾಂಶುಪಾಲರು (Vice-Principal): 131 ಹುದ್ದೆಗಳು
ಡ್ರಗ್ ಇನ್ಸ್‌ಪೆಕ್ಟರ್ (Drug Inspector): 3 ಹುದ್ದೆಗಳು
ಸಹಾಯಕ ಕೀಪರ್ (Assistant Keeper): 1 ಪೋಸ್ಟ್
ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ (Master in Chemistry): 1 ಪೋಸ್ಟ್
ಖನಿಜ ಅಧಿಕಾರಿ (Mineral Office): 20 ಹುದ್ದೆಗಳು
ಸಹಾಯಕ ಶಿಪ್ಪಿಂಗ್ ಮಾಸ್ಟರ್ ಮತ್ತು ಸಹಾಯಕ ನಿರ್ದೇಶಕ (Assistant Shipping Master and Assistant Director): 2 ಪೋಸ್ಟ್‌ಗಳು
ಹಿರಿಯ ಉಪನ್ಯಾಸಕರು (Senior Lecturer):3 ಹುದ್ದೆಗಳು
ಪರೀಕ್ಷಾ ತಯಾರಿ ಬಗ್ಗೆ UPSC ಟಾಪರ್ Shruti Sharma ಮಾತು
ಶೈಕ್ಷಣಿಕ ವಿದ್ಯಾರ್ಹತೆ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.
ಡ್ರಗ್ ಇನ್ಸ್‌ಪೆಕ್ಟರ್ ಹುದ್ದೆಗೆ ಸಂಬಂಧಿತ ವಿಷಯದಲ್ಲಿ ಪದವಿ ಮಾಡಿರಬೇಕು.
ಸಹಾಯಕ ಕೀಪರ್ ಹುದ್ದೆಗೆ ಮಾನವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಮ್ಯೂಸಿಯಾಲಜಿಯಲ್ಲಿ ಡಿಪ್ಲೊಮಾ ಮಾಡಿರಬೇಕು.
ಸ್ನಾತಕೋತ್ತರ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ; ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಬೋಧನಾ ವಿಷಯದಲ್ಲಿ ಪದವಿ ಮಾಡಿರಬೇಕು
ಖನಿಜ ಅಧಿಕಾರಿ ಹುದ್ದೆಗೆ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಥವಾ ಅನ್ವಯಿಕ ಭೂವಿಜ್ಞಾನ ಅಥವಾ ಅರ್ಥಶಾಸ್ತ್ರ ಅಥವಾ ಗಣಿಗಾರಿಕೆಯಲ್ಲಿ ಸ್ನಾತಕೋತ್ತರ ಪದವಿ , ಎಂಜಿನಿಯರಿಂಗ್ ಮಾಡಿರಬೇಕು.
ಸಹಾಯಕ ಶಿಪ್ಪಿಂಗ್ ಮಾಸ್ಟರ್ ಮತ್ತು ಸಹಾಯಕ ನಿರ್ದೇಶಕ ಹುದ್ದೆಗೆ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಇರಬೇಕು.
ಹಿರಿಯ ಉಪನ್ಯಾಸಕರು (ಜವಳಿ ಸಂಸ್ಕರಣೆ) ಹುದ್ದೆಗೆ ಜವಳಿ ಸಂಸ್ಕರಣೆ ಅಥವಾ ಜವಳಿ ರಸಾಯನಶಾಸ್ತ್ರದಲ್ಲಿ ಪದವಿ ಅಥವಾ ಇಂಜಿನಿಯರಿಂಗ್ ಪದವಿ ಅಥವಾ ಜವಳಿ ಸಂಸ್ಕರಣೆ ಅಥವಾ ಜವಳಿ ರಸಾಯನಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ; ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಜವಳಿ ರಸಾಯನಶಾಸ್ತ್ರ ಅಥವಾ ಜವಳಿ ಸಂಸ್ಕರಣೆಯಲ್ಲಿ ಪೋಸ್ಟ್ ಡಿಪ್ಲೊಮಾ;
ಉಪ-ಪ್ರಾಂಶುಪಾಲರು ಹುದ್ದೆಗೆ ಸ್ನಾತಕೋತ್ತರ ಪದವಿ ,ಶಿಕ್ಷಣ ಪದವಿ ಮಾಡಿರಬೇಕು.
ಹಿರಿಯ ಉಪನ್ಯಾಸಕರು (ಸಮುದಾಯ ವೈದ್ಯಕೀಯ) ಹುದ್ದೆಗೆ ಮೂಲ ವಿಶ್ವವಿದ್ಯಾಲಯ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಭಾರತೀಯ ವೈದ್ಯಕೀಯ ಮಂಡಳಿ ಕಾಯಿದೆ, 1956 (102 ಆಫ್ 1956) ಗೆ ಯಾವುದೇ ಒಂದು ವೇಳಾಪಟ್ಟಿಯಲ್ಲಿ ಸೇರಿಸಲಾಗಿದೆ ಮತ್ತು ರಾಜ್ಯ ವೈದ್ಯಕೀಯ ನೋಂದಣಿ ಅಥವಾ ಭಾರತೀಯ ವೈದ್ಯಕೀಯ ನೋಂದಣಿಯಲ್ಲಿ ನೋಂದಾಯಿಸಿರಬೇಕು. M.D.(ಸಾಮಾಜಿಕ ಮತ್ತು ಪ್ರಿವೆಂಟಿವ್ ಮೆಡಿಸಿನ್)/ M.D.(ಕಮ್ಯುನಿಟಿ ಮೆಡಿಸಿನ್) ಅಥವಾ ತತ್ಸಮಾನ ವಿದ್ಯಾರ್ಹತೆ ಇರಬೇಕು.
ಬ್ರಿಟನ್‌ನ 20 ವಿವಿ ಕುಲಪತಿಗಳ ನಿಯೋಗದಿಂದ ಜೂನ್ 9ರಂದು ಕರ್ನಾಟಕ ಭೇಟಿ
ವಯೋಮಿತಿ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವಿದ್ಯಾರ್ಹತೆ ನಿಗದಿಯಾಗಿದೆ.
ಉಪ-ಪ್ರಾಂಶುಪಾಲರು- 35 ವರ್ಷಗಳು
ಡ್ರಗ್ ಇನ್ಸ್ಪೆಕ್ಟರ್ - 30 ವರ್ಷಗಳು
ಸಹಾಯಕ ಕೀಪರ್ - 30 ವರ್ಷಗಳು
ಮಾಸ್ಟರ್ - 38 ವರ್ಷಗಳು
ಖನಿಜ ಅಧಿಕಾರಿ - 30 ವರ್ಷಗಳು
ಸಹಾಯಕ ಶಿಪ್ಪಿಂಗ್ ಮಾಸ್ಟರ್ ಮತ್ತು ಸಹಾಯಕ ನಿರ್ದೇಶಕ -30 ವರ್ಷಗಳು
ಹಿರಿಯ ಉಪನ್ಯಾಸಕರು (ಜವಳಿ ಸಂಸ್ಕರಣೆ) - ಗರಿಷ್ಟ 38 ವರ್ಷಗಳು
ಹಿರಿಯ ಉಪನ್ಯಾಸಕರು (ಸಮುದಾಯ ವೈದ್ಯಕೀಯ) - ಗರಿಷ್ಟ 55 ವರ್ಷ
ಅರ್ಜಿ ಶುಲ್ಕ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ ₹25 ಅರ್ಜಿ ಶುಲ್ಕ ಪಾವತಿಸಬೇಕು. ಇತರ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಆಯ್ಕೆ ಪ್ರಕ್ರಿಯೆ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ ವಿವರ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ 7ನೇ ವೇತನ ಆಯೋಗದ ನಿಯಮದಲ್ಲಿ ಮಾಸಿಕ ವೇತನ ದೊರೆಯಲಿದೆ.