'ಹುಟ್ಟಿದ ಊರಿಗೆ ಬ್ಯಾಗು ಹಿಡಿ.. ಸೀದಾ ನಡಿ..' ಕನ್ನಡಿಗರ ಕೆಣಕಿದ್ದ ಸುಗಂಧ್‌ ಶರ್ಮ ಕೆಲಸದಿಂದಲೇ ವಜಾ!

By Santosh Naik  |  First Published Sep 23, 2024, 1:55 PM IST

ಬೆಂಗಳೂರಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಸುಗಂಧ್ ಶರ್ಮ ತನ್ನ ಕೆಲಸ ಕಳೆದುಕೊಂಡಿದ್ದಾರೆ. ಕನ್ನಡ ಪರ ಸಂಘಟನೆಗಳ ಒತ್ತಡದ ಮೇರೆಗೆ ಫ್ರೀಡಂ ಕಂಪನಿಯು ಅವರನ್ನು ವಜಾಗೊಳಿಸಿದೆ.


ಬೆಂಗಳೂರು (ಸೆ. 23): ನಾವಿದ್ದರೆ ಬೆಂಗಳೂರು. ಹಾಗೇನಾದರೂ ನಾವೆಲ್ಲರೂ ಬೆಂಗಳೂರು ಬಿಟ್ಟು ಹೋದರೆ, ಇಡೀ ಊರೇ ಖಾಲಿಯಾಗುತ್ತದೆ. ಕೋರಮಂಗಲದ ಪಬ್‌ಗಳೆಲ್ಲಾ ಖಾಲಿ ಹೊಡೆಯುತ್ತದೆ ಎಂದಿದ್ದ ಇನ್ಸ್‌ಟಾಗ್ರಾಮ್‌ ಇನ್‌ಫ್ಲುಯೆನ್ಸರ್‌ ಸುಗಂಧ್‌ ಶರ್ಮ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾಳೆ. ಸುಗಂಧ್‌ ಶರ್ಮ ಸೋಶಿಯಲ್‌ ಮೀಡಿಯಾದಲ್ಲಿ ರಾಜ್ಯದ ಕುರಿತಾಗಿ ಕೆಟ್ಟದಾಗಿ ಮಾತನಾಡಿದ ಬೆನ್ನಲ್ಲಿಯೇ ಆಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ನೀವು ಬೆಂಗಳೂರು ಬಿಟ್ಟು ತೊಲಗಿ ಎಂದು ಸಾಕಷ್ಟು ಮಂದಿ ಹೇಳಿದ್ದರು. ಕರ್ನಾಟಕದ ಬಗ್ಗೆ ಮಾತನಾಡಿದ್ದ ಸುಗಂಧ ಶರ್ಮ ವಿರುದ್ದ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಯುವತಿಗೆ ಬುದ್ದಿ ಕಲಿಸಲು ಕನ್ನಡ ಪರ ಸಂಘಟನೆಗಳು ಮುಂದಾಗಿದ್ದವು.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಆಕೆ ಕೆಲಸ ಮಾಡುತ್ತಿದ್ದ ಕಂಪನಿ ಕೂಡ ಎಚ್ಚೆತ್ತುಕೊಂಡಿದೆ. ವಿಡಿಯೋ ವೈರಲ್ ಆಗ್ತಿದ್ದಂತೆ ಸುಗಂಧ ಶರ್ಮರನ್ನ ಕಂಪನಿ ಕೆಲಸದಿಂದ ತೆಗೆದುಹಾಕಿದೆ. ಫ್ರೀಡಂ ಕಂಪನಿಯಲ್ಲಿ ಸುಗಂಧ ಶರ್ಮ ಕೆಲಸ ಮಾಡುತ್ತಿದ್ದರು. ಸದ್ಯ ಮಹಿಳೆಯನ್ನ ಫ್ರೀಡಂ ಕಂಪನಿ ಟರ್ಮಿನೇಟ್‌ ಮಾಡಿದೆ. ಫ್ರೀಡಂ ಕಂಪನಿಗೆ ತೆರಳಿ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಇದರ ಮಾಹಿತಿ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ  ಆಕೆ ಬೇರೆ ಯಾವುದೇ ಕಂಪನಿಯಲ್ಲಿ ಕೆಲಸ ನಿರ್ವಹಿಸಿದರೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Latest Videos

undefined

ನಿನ್ನೆ ಬೆಂಗ್ಳೂರ ಖಾಲಿ ಆಗುತ್ತೆ ಅಂದೋಳು ಇವತ್ತು I Love ಬೆಂಗಳೂರಂತ ಕನ್ನಡಿಗರು ಚಳಿಬಿಡಿಸಿದ ನಂತ್ರ ಬುದ್ಧಿ ಕಲಿತ ರೀಲ್ಸ್ ರಾಣಿ

ತಾನು ಮಾಡಿದ ರೀಲ್ಸ್‌ನಲ್ಲಿ ಧಿಮಾಕು ತೋರಿಸಿದ್ದ ಉತ್ತರ ಭಾರತ ಮೂಲದ ಸುಗಂಧ್‌ ಶರ್ಮಗೆ ಕನ್ನಡಿಗರು ಚಳಿ ಬಿಡಿಸಿದ ಬಳಿಕ ಮೆತ್ತಗಾಗಿದ್ದಳು.  'ನನಗೆ ಕನ್ನಡ ಅಂದ್ರೆ ತುಂಬಾ ಇಷ್ಟ, ಕನ್ನಡ ಕಲಿಯಲು ಪ್ರಯತ್ನ ಮಾಡ್ತಿದ್ದೇನೆ ಎಂದು ತಿಪ್ಪೆ ಸಾರಿಸುವ ಪ್ರಯತ್ನ ಮಾಡಿ ರೀಲ್ಸ್‌ ಪೋಸ್ಟ್‌ ಮಾಡಿದ್ದರು.

'ತೊಲಗಿ ಮೊದಲು..' ಅನುಪಮಾ ಗೌಡ, ಚಂದನ್‌ ಶೆಟ್ಟಿ ಹೀಗೆ ಹೇಳಿದ್ದು ಯಾರಿಗೆ?

ನಾನು ಟ್ರಾವೆಲರ್‌, ಊರೂರು ಸುತ್ತುತ್ತೇನೆ. ಬೆಂಗಳೂರಂದ್ರೆ ನನಗೆ ಇಷ್ಟ. ಈ ಊರಿನ ಬಗ್ಗೆ ಗೌರವವಿದೆ. ನನ್ನಲ್ಲಿ ಉತ್ತರ ಭಾರತೀಯರು, ದಕ್ಷಿಣ ಭಾರತೀಯರು ಎಂಬ ಯಾವುದೇ ಭೇದ-ಭಾವ ಇಲ್ಲ. ನಾವೆಲ್ಲಾ ಭಾರತೀಯರು ಎಂದು ವಿಡಿಯೋ ಮಾಡಿದ್ದರು. ಉತ್ತರ ಭಾರತದವರು ಬೆಂಗಳೂರನ್ನು ಖಾಲಿ ಮಾಡಿದರೆ, ಇಡೀ ಬೆಂಗಳೂರು ಖಾಲಿ ಆಗುತ್ತದೆ ಎಂದು ಹೇಳುವ ಮೂಲಕ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಈದರಿಂದಾಗಿ ಸುಗಂಧ್‌ ಶರ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡಿಗರು ಪ್ಲೀಸ್‌ ಲೀವ್‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಯೂಟರ್ನ್ ಹೊಡೆದ ಮಹಿಳೆ ಐಲವ್ ಬೆಂಗಳೂರು ಎಂದಿದ್ದಾರೆ.

ಎರಡು ದಿನಗಳ ಹಿಂದೆ ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್‌ ಮಾಡಿರುವ ಸುಗಂಧ ಶರ್ಮ, 'ನೀವು ಯಾವಾಗಲೂ ಹೇಳ್ತಾ ಇರ್ತೀರಿ.. ನೀವು ಉತ್ತರ ಭಾರತೀಯರು ವಾಪಾಸ್‌ ಹೋಗಿ ಅಂತಾ. ಹಾಗೇನಾದರೂ ನಾವು ನಿಜವಾಗಿಯೂ ಬೆಂಗಳೂರಿನಿಂದ ಎದ್ದು ಹೊರಗೆ ಹೋದರೆ, ನಿಮ್ಮ ಊರು ಪೂರ್ತಿ ಖಾಲಿಯಾಗಿ ಹೋಗುತ್ತದೆ. ಮೊದಲಿಗೆ ನಿಮ್ಮೆಲ್ಲರ ಪಿಜಿಗಳು ಖಾಲಿಯಾಗಿ ಹೋಗುತ್ತದೆ. ಅದರಿಂದ ಸಂಪಾದನೆ ಮಾಡುವ ಹಣ ನಿಮಗೆ ಸಿಗೋದಿಲ್ಲ. ಕೋರಮಂಗಲದ ಎಲ್ಲಾ ಕ್ಲಬ್‌ಗಳು ಖಾಲಿ ಹೊಡಿಯೋಕೆ ಶುರುವಾಗುತ್ತೆ. ಚಂದ ಚಂದನೆಯ ಹುಡುಗಿಯುರು ಪಂಜಾಬಿ ಮ್ಯೂಸಿಕ್‌ಗೆ ಡಾನ್ಸ್‌ ಮಾಡ್ತಾ ಇರ್ತಾರಲ್ಲ, ಅಂಥವರು ಯಾರೂ ನಿಮಗೆ ನೋಡೋಕೆ ಸಿಗೋದಿಲ್ಲ. ಸ್ವಲ್ಪ ಬುದ್ದಿವಂತಿಕೆಯಿಂದ ಮಾತನಾಡಿ. ಹಾಗೇನಾದರೂ ನಿಮ್ಮ ಆಸೆ ನಿಜವಾಗಿ ಬಿಟ್ಟರೆ, ನಿಮ್ಮೆಲ್ಲಾ ಖುಷಿ ಕೂಡ ಕಳೆದುಹೋಗುತ್ತದೆ. ಬೆಂಗಳೂರಿನಲ್ಲಿ ಬರ ಬರೋಕೆ ಶುರುವಾಗುತ್ತದೆ' ಎಂದು ಹೇಳಿದ್ದರು. ಇದಕ್ಕೆ ಚಂದನ್‌ ಶೆಟ್ಟಿ, ಅನುಪಮಾ ಗೌಡ ಸೇರಿದಂತೆ ಹಲವು ನಟ-ನಟಿಯರು ಆಕ್ರೋಶ ವ್ಯಕ್ತಪಡಿಸಿದ್ದರು.

click me!