ಇಸ್ರೋ ನೇಮಕಾತಿ 2024: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, 10ನೇ ತರಗತಿಯಾದವರಿಗೂ ಅವಕಾಶ!

Published : Sep 22, 2024, 01:48 PM ISTUpdated : Sep 22, 2024, 04:19 PM IST
ಇಸ್ರೋ ನೇಮಕಾತಿ 2024: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, 10ನೇ ತರಗತಿಯಾದವರಿಗೂ ಅವಕಾಶ!

ಸಾರಾಂಶ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಹ್ಯೂಮನ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌ನಲ್ಲಿ ಟೆಕ್ನೀಷಿಯನ್‌, ಮೆಡಿಕಲ್‌ ಆಫೀಸರ್‌ ಸೇರಿದಂತೆ 103 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 9 ರೊಳಗೆ ಅರ್ಜಿ ಸಲ್ಲಿಸಬಹುದು.

ಬೆಂಗಳೂರು (ಸೆ.22): ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO -Indian Space Research Organisation)ಯ  ಹ್ಯೂಮನ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌ (Human Space Flight Centre-HSFC) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ . ಟೆಕ್ನೀಷಿಯನ್‌, ಮೆಡಿಕಲ್‌ ಆಫೀಸರ್‌ ಸೇರಿ ಒಟ್ಟು 103 ಹುದ್ದೆಗಳಿದ್ದು, 10ನೇ ತರಗತಿ, ಐಟಿಐ, ಪದವಿ ಮುಂತಾದ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು, ಕೊನೆಯ ದಿನಾಂಕ ಅಕ್ಟೋಬರ್‌ 9 ಆಗಿದೆ.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ:  ಇಸ್ರೋದ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರ (HSFC)ದಲ್ಲಿ ಖಾಲಿ ಇರುವ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ ಇರಬೇಕು.
ಮೆಡಿಕಲ್‌ ಆಫೀಸರ್‌- 3 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್‌, ಎಂ.ಡಿ
ಸೈಂಟಿಸ್ಟ್ ಎಂಜಿನಿಯರ್- 10 ಹುದ್ದೆ, ವಿದ್ಯಾರ್ಹತೆ: ಬಿ.ಇ ಅಥವಾ ಬಿ.ಟೆಕ್‌ ಅತವಾ ಎಂ.ಟೆಕ್‌
ಟೆಕ್ನಿಕಲ್ ಅಸಿಸ್ಟೆಂಟ್- 28 ಹುದ್ದೆ, ವಿದ್ಯಾರ್ಹತೆ: ಡಿಪ್ಲೊಮಾ
ಸೈಂಟಿಫಿಕ್ ಅಸಿಸ್ಟೆಂಟ್- 1 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ, ಪದವಿ
ಟೆಕ್ನೀಷಿಯನ್‌-ಬಿ (ಫಿಟ್ಟರ್)- 22 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನೀಷಿಯನ್‌-ಬಿ (ಎಲೆಕ್ಟ್ರಾನಿಕ್ ಮೆಕ್ಯಾನಿಕ್)- 12 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನೀಷಿಯನ್‌-ಬಿ (ಎಸಿ ಮತ್ತು ರೆಫ್ರಿಜರೇಷನ್‌)- 1 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನೀಷಿಯನ್‌-ಬಿ- (ವೆಲ್ಡರ್) 2 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನೀಷಿಯನ್‌-ಬಿ- (ಮೆಷಿನಿಸ್ಟ್) 1 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನೀಷಿಯನ್‌-ಬಿ- (ಎಲೆಕ್ಟ್ರಿಕಲ್)- 3 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನೀಷಿಯನ್‌-ಬಿ- (ಟರ್ನರ್) 1 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನೀಷಿಯನ್‌-ಬಿ- (ಗ್ರೈಂಡರ್) 1 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಡ್ರಾಫ್ಟ್‌ಮ್ಯಾನ್‌-ಬಿ- (ಮೆಕ್ಯಾನಿಕಲ್)- 9 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಡ್ರಾಫ್ಟ್‌ಮ್ಯಾನ್‌-ಬಿ- (ಸಿವಿಲ್)-4 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಅಸಿಸ್ಟಂಟ್‌- (ರಾಜಭಾಷಾ) 5 ಹುದ್ದೆ, ವಿದ್ಯಾರ್ಹತೆ: ಪದವಿ

ವಯೋಮಿತಿ ಮತ್ತು ಅರ್ಜಿ ಶುಲ್ಕ: ಇಸ್ರೋದ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರ (HSFC)ದಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ ಎಂದು ತಿಳಿಸಲಾಗಿದೆ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ. ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 750 ರೂ. ಪಾವತಿಸಬೇಕು.

ಆಯ್ಕೆ ವಿಧಾನ: ಇಸ್ರೋದ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರ (HSFC)ದಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಆಯ್ಕೆಯಾಗಲು ಬಯಸುವವವರಿಗೆ ಲಿಖಿತ ಪರೀಕ್ಷೆ, ಸ್ಕಿಲ್‌ ಟೆಸ್ಟ್‌ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. 

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://cdn.digialm.com/EForms/configuredHtml/1258/90047/Registration.html
ಓಪನ್ ಆಗಿರುವ ಟ್ಯಾಬ್‌ ನಲ್ಲಿ ಹೆಸರು ನೋಂದಾಯಿಸಿ ಲಾಗಿನ್‌ ಆಗಿ.
ಇಲ್ಲಿ ಕಂಡುಬರುವ ಅಪ್ಲಿಕೇಷನ್‌ ಫಾರಂ ಎಚ್ಚರಿಕೆಯಿಂದ ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಿ
ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ Submit ಬಟನ್‌ ಕ್ಲಿಕ್‌ ಮಾಡಿ. ಮುಂದಿನ ರೆಫರೆನ್ಸ್ ಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

PREV
Read more Articles on
click me!

Recommended Stories

ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ
ಲೋಕಸಭೆಯಲ್ಲಿ ನೌಕರರ ಪರ ಮಸೂದೆ ಮಂಡನೆ: ಉದ್ಯೋಗಿಗಳ ಲೈಫ್​ ಜಿಂಗಾಲಾಲಾ- ಏನಿದೆ ಇದರಲ್ಲಿ?