ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಬಳಿಕ ದೇಶದಲ್ಲಿ ಉದ್ಯೋಗ ಸಮಸ್ಯೆ ಹೆಚ್ಚಾಗಿದೆ. ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ವಿದೇಶದಿಂದ ಬಹುತೇಕರು ತಾಯ್ನಾಡಿಗೆ ಮರಳಿದ್ದಾರೆ. ಹೀಗಾಗಿ ಭಾರತದಲ್ಲಿ ಉದ್ಯೋಗ ಸಮಸ್ಯೆ ತೀವ್ರವಾಗುತ್ತಿದೆ. ಇದರ ನಡುವೆ ಹೊಸಬೆಳಕೊಂದು ಮೂಡುತ್ತಿದೆ. ಇದೇ ಡಿಸೆಂಬರ್ ಅಂತ್ಯಕ್ಕೆ ಮೊಬೈಲ್ ಇಂಡಸ್ಟ್ರಿಯಿಂದ ಬರೋಬ್ಬರಿ 50,000 ಉದ್ಯೋಗ ಸೃಷ್ಟಿಯಾಗುತ್ತಿದೆ.
ನವದೆಹಲಿ(ಆ.20): ಕೊರೋನಾ ವೈರಸ್ ಹೊಡೆತದಿಂದ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ್ ಭಾರತ ಪರಿಕಲ್ಪನೆ ಘೋಷಿಸಿದ್ದಾರೆ. ಈ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಗೂ ಮತ್ತಷ್ಟು ಬಲ ತುಂಬುವ ಕೆಲಸ ಮಾಡುತ್ತಿದ್ದಾರೆ. ಇದೀಗ ಹಲವು ಮೊಬೈಲ್ ಕಂಪನಿಗಳು ಭಾರತದಲ್ಲಿ ತಮ್ಮ ಘಟಕ ಆರಂಭಿಸಲು ಮುಂದಾಗಿದ್ದು, ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿದೆ. ಹೀಗಾಗಿ ಡಿಸೆಂಬರ್ ಅಂತ್ಯದ ವೇಳೆಗೆ ಮೊಬೈಲ್ ಇಂಡಸ್ಟ್ರಿಯಿಂದ ಬರೋಬ್ಬರಿ 50,000 ಉದ್ಯೋಗ ಸೃಷ್ಟಿಯಾಗುತ್ತಿದೆ.
ಕರ್ನಾಟಕದಲ್ಲಿ iPhone 12 ಉತ್ಪಾದನೆ; ಮೋದಿ ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ಬಲ!
undefined
ಚೀನಾದ 24 ಮೊಬೈಲ್ ಕಂಪನಿಗಳು ಭಾರತದಲ್ಲಿ ಘಟಕ ಆರಂಭಿಸಲು ತುದಿಗಾಲಲ್ಲಿ ನಿಂತಿದೆ. ಈಗಾಗಲೇ ಆ್ಯಪಲ್ ತನ್ನ ಐಪೋನ್ 12 ಉತ್ಪಾದನೆಯನ್ನು ಕರ್ನಾಟಕದಲ್ಲಿ ಮಾಡುತ್ತಿದೆ. 10,000 ಉದ್ಯೋಗಿಗಳ ನೇಮಕ ಪ್ರಕ್ರಿಯೆಗೆ ಆ್ಯಪಲ್ ಚಾಲನೆ ನೀಡಿದೆ. ವಿಯೆಟ್ನಾಂನಿಂದ ಸ್ಯಾಸಮ್ಸಂಗ್ ಸೇರಿದಂತೆ ಇತರ ಹಲವು ಸ್ಮಾರ್ಟ್ ಫೋನ್ ಕಂಪನಿಗಳು ಭಾರತಕ್ಕೆ ಆಗಮಿಸುತ್ತಿದೆ. ಇಷ್ಟೇ ಅಲ್ಲ ಭಾರತದಲ್ಲಿ ಘಟಕ ಆರಂಭಿಸುತ್ತಿದೆ.
ಆತ್ಮನಿರ್ಭರ್ ಭಾರತ: ಭಾರತದಲ್ಲಿ ಫ್ಯಾಕ್ಟರಿ ತೆರೆಯಲು ಚೀನಾದ 24 ಮೊಬೈಲ್ ಕಂಪನಿಗಳ ನಿರ್ಧಾರ!
ಫಾಕ್ಸ್‌ಕಾನ್, ವಿಸ್ಟ್ರೊನ್, ಸ್ಯಾಮಸ್ಸಂಗ್, ಡಿಕ್ಸಾನ್, ಲಾವಾ ಸೇರಿದಂತೆ ಹಲವು ಮೊಬೈಲ್ ಕಂಪನಿಗಳು ಭಾರತದಲ್ಲಿ ಉತ್ಪಾದನಾ ಘಟಕ ಆರಂಭಿಸಲು ತಯಾರಿ ಆರಂಭಿಸಿದೆ. ಈ ಮೂಲಕ 50,000 ಉದ್ಯೋಗ ಸೃಷ್ಟಿಯಾಗುತ್ತಿದೆ. ಸ್ಮಾರ್ಟ್ ಫೋನ್ ಇಂಡಸ್ಟ್ರಿಯಿಂದ ಭಾರತದಲ್ಲಿ ಹೊಸ ಕ್ರಾಂತಿಯಾಗುತ್ತಿದೆ. ಮೇಕ್ ಇನ್ ಇಂಡಿಯಾ ಮೊಬೈಲ್ ಬಿಡುಗಡೆ ಮಾಡೋ ಮೂಲಕ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ವಿದೇಶಿ ಕಂಪನಿಗಳು ಪ್ಲಾನ್ ಮಾಡಿವೆ.