20,000 ನೇಮಕಾತಿ..ಭರ್ಜರಿ ಗುಡ್‌ ನ್ಯೂಸ್ ಕೊಟ್ಟ ಇನ್ಫೋಸಿಸ್..!

Published : Jul 26, 2026, 09:08 PM IST
Infosys

ಸಾರಾಂಶ

ವೇತನ ಹೆಚ್ಚಳಕ್ಕೆ ಇನ್ಫೋಸಿಸ್ ಮುಹೂರ್ತ ಫಿಕ್ಸ್ ಮಾಡಿದೆ. ಇದರ ಜೊತೆಗೆ 20 ಸಾವಿರ ಹೊಸಬರಿಗೆ ಉದ್ಯೋಗ ನೀಡಲು ಕಂಪನಿ ಮುಂದಾಗಿದೆ. ಇನ್ಫೋಸಿಸ್‌ನ ಮುಂದಿನ ಸಿಇಒ ಕೂಡ ಈಗ ಫಿಕ್ಸ್ ಆಗಿದ್ದಾರೆ! ಪೂರ್ಣ ವಿವರಗಳಿಗಾಗಿ ಲೇಖನ ಓದಿ.

ಬೆಂಗಳೂರು: ಇನ್ಫೋಸಿಸ್ ಕಂಪನಿಯು ತನ್ನ ಮೊದಲ ತ್ರೈಮಾಸಿಕ (Q1) ಫಲಿತಾಂಶಗಳನ್ನು ಪ್ರಕಟಿಸಿದ್ದು, ಇದರ ಬೆನ್ನಲ್ಲೇ ಉದ್ಯೋಗಿಗಳಿಗೆ ವೇತನ ಹೆಚ್ಚಳದ ಸಿಹಿಸುದ್ದಿ ನೀಡಿದೆ. ಕಂಪನಿಯ ಸಿಇಒ ಸಲಿಲ್ ಪರೇಖ್ ಅವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಮೂರು ಹಂತಗಳಲ್ಲಿ ಸ್ಯಾಲರಿ ಹೈಕ್

ಇನ್ಫೋಸಿಸ್ ಈ ವರ್ಷದ ವೇತನ ಹೆಚ್ಚಳವನ್ನು ಒಟ್ಟು ಮೂರು ಹಂತಗಳಲ್ಲಿ ಜಾರಿಗೆ ತರಲು ನಿರ್ಧರಿಸಿದೆ. ಅಕ್ಟೋಬರ್‌ನಿಂದ ಈ ಪ್ರಕ್ರಿಯೆ ಆರಂಭವಾಗಲಿದ್ದು, ಜನವರಿವರೆಗೆ ಮುಂದುವರಿಯಲಿದೆ. ಹೆಚ್ಚಿನ ಉದ್ಯೋಗಿಗಳಿಗೆ ಅಕ್ಟೋಬರ್‌ನಲ್ಲಿ ವೇತನ ಹೆಚ್ಚಳದ ಲಾಭ ಸಿಗಲಿದೆ.

ಹಿರಿಯ ಅಧಿಕಾರಿಗಳು ಮತ್ತು ಸೀನಿಯರ್ ಉದ್ಯೋಗಿಗಳಿಗೆ ಜನವರಿಯಲ್ಲಿ ವೇತನ ಪರಿಷ್ಕರಣೆಯಾಗಲಿದೆ. ಆದರೆ ಎಷ್ಟು ಶೇಕಡಾವಾರು ಹೆಚ್ಚಳವಾಗಲಿದೆ ಎಂಬ ಮಾಹಿತಿಯನ್ನು ಕಂಪನಿ ಸದ್ಯಕ್ಕೆ ಗೌಪ್ಯವಾಗಿಟ್ಟಿದೆ.

20,000 ಫ್ರೆಶರ್‌ಗಳ ನೇಮಕಾತಿ

ಐಟಿ ವಲಯದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇನ್ಫೋಸಿಸ್ ದೊಡ್ಡ ಅವಕಾಶ ನೀಡಿದೆ. ಈ ಹಣಕಾಸು ವರ್ಷದಲ್ಲಿ ಒಟ್ಟು 20,000 ಫ್ರೆಶರ್‌ಗಳನ್ನು (Freshers) ನೇಮಕ ಮಾಡಿಕೊಳ್ಳುವುದಾಗಿ ಕಂಪನಿ ಘೋಷಿಸಿದೆ. ಈಗಾಗಲೇ ಏಪ್ರಿಲ್-ಜೂನ್ ಅವಧಿಯಲ್ಲಿ 4,000ಕ್ಕೂ ಹೆಚ್ಚು ಮಂದಿಯನ್ನು ನೇಮಿಸಿಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.

ಅಶೀಶ್ ಕುಮಾರ್ ದಾಶ್ ಮುಂದಿನ ಸಿಇಒ

ಕಂಪನಿಯ ನಾಯಕತ್ವದಲ್ಲೂ ಮಹತ್ವದ ಬದಲಾವಣೆಯಾಗಿದೆ. ಪ್ರಸ್ತುತ ಸಿಇಒ ಸಲಿಲ್ ಪರೇಖ್ ಅವರ ಅವಧಿ 2027ರ ಮಾರ್ಚ್‌ಗೆ ಕೊನೆಗೊಳ್ಳಲಿದ್ದು, ಅವರ ನಂತರ ಕಂಪನಿಯನ್ನು ಮುನ್ನಡೆಸಲು ಅಶೀಶ್ ಕುಮಾರ್ ದಾಶ್ (Ashiss Kumar Dash) ಅವರನ್ನು 'ಸಿಇಒ-ಡಿಸಿನೇಟ್' ಆಗಿ ಮಂಡಳಿ ನೇಮಿಸಿದೆ. ಇವರು ಏಪ್ರಿಲ್ 2027 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕಂಪನಿಯ ಒಟ್ಟು ಆದಾಯದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ಸೇವೆಗಳ ಪಾಲು ಹೆಚ್ಚುತ್ತಿದೆ. ಕಳೆದ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ. 5.5 ರಷ್ಟಿದ್ದ ಎಐ ಕೊಡುಗೆ, ಈ ತ್ರೈಮಾಸಿಕದಲ್ಲಿ ಶೇ. 8.2 ಕ್ಕೆ ಏರಿಕೆಯಾಗಿದೆ. ಇದಲ್ಲದೆ, 3.6 ಬಿಲಿಯನ್ ಡಾಲರ್ ಮೌಲ್ಯದ ಬೃಹತ್ ಡೀಲ್‌ಗಳನ್ನು ಕಂಪನಿ ತನ್ನದಾಗಿಸಿಕೊಂಡಿದೆ.

PREV
Read more Articles on
click me!

Recommended Stories

IT ಕೆಲಸಕ್ಕೆ 'ಗುಡ್ ಬೈ', ರೈಸ್ ಬಿಸಿನೆಸ್‌ಗೆ 'ಹೈ': ಈಗ ಕೋಟಿ ಕೋಟಿ ವಹಿವಾಟು, ವರ್ಷಕ್ಕೆ 25 ಲಕ್ಷ ಗಳಿಸುತ್ತಿರುವ ಯುವಕ!
10 ನಿಮಿಷ ಬೇಗ ಹೊರಟಿದ್ದೆ ತಪ್ಪಾ? CEO ಕಳುಹಿಸಿದ ವಾಟ್ಸಾಪ್ ಮೆಸೇಜ್ ನೋಡಿ ಉದ್ಯೋಗಿ ಕಕ್ಕಾಬಿಕ್ಕಿ!