ಮ್ಯಾನೇಜರ್ ಬೇಡಿಕೆಗೆ ಬೇಸತ್ತು, ಮೊದಲ ದಿನವೇ ಕೆಲಸ ಬಿಟ್ಟ ಉದ್ಯೋಗಿ!

By Sathish Kumar KH  |  First Published Oct 13, 2024, 6:14 PM IST

ಸಿಟ್ಟು ಸಿಡುಕು ಮಾಡುವ ಬಾಸ್ ಮತ್ತು ಅವರ ಅತಿಯಾದ ಕೆಲಸದ ಹೇರಿಕೆಯಿಂದಾಗಿ ಪ್ರಾಡಕ್ಟ್ ಡಿಸೈನರ್ ಒಬ್ಬ ಕೆಲಸಕ್ಕೆ ಸೇರಿದ ಮೊದಲ ದಿನವೇ ಕೆಲಸ ಬಿಟ್ಟಿರುವ ಘಟನೆ ನಡೆದಿದೆ. ಅವರ ರಾಜೀನಾಮೆ ಪತ್ರ ರೆಡ್ಡಿಟ್‌ನಲ್ಲಿ ವೈರಲ್ ಆಗಿದ್ದು, ಕೆಲಸದ ಸ್ಥಳದಲ್ಲಿನ ವಾತಾವರಣದ ಬಗ್ಗೆ ಚರ್ಚೆಗೆ ಕಾರಣವಾಗಿದೆ.


ವೈರಲ್ ಸುದ್ದಿ: ಖಾಸಗಿ ಸಂಸ್ಥೆಯಲ್ಲಿ ಪ್ರಾಡಕ್ಟ್ ಡಿಸೈನರ್ ಆಗಿ ಮೊದಲ ದಿನ ಕೆಲಸಕ್ಕೆ ಹೋದಾಗ ತಮ್ಮ ಮ್ಯಾನೇಜರ್‌ನ ವರ್ತನೆ ಮತ್ತು ಆತನ ಅನಗತ್ಯ ಬೇಡಿಕೆಗಳಿಂದಾಗಿ ಕೆಲಸದ ಮೊದಲ ದಿನವೇ ರಾಜೀನಾಮೆ ನೀಡಿದ್ದಾರೆ. ಈ ಉದ್ಯೋಗಿ ತಮ್ಮ ರಾಜೀನಾಮೆ ಪತ್ರವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ಜೊತೆಗೆ, ಕೆಲಸದ ಸ್ಥಳಗಳಲ್ಲಿ ಎಂತಹ ವಿಷಮ ವಾತಾವರಣ ಇರುತ್ತದೆ ಎಂಬುದರ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಎಂತೆಂತಹ ವಿಚಾರಗಳು ಮುನ್ನೆಲೆಗೆ ಬರುತ್ತವೆ ಎನ್ನುವುದೇ ಗೊತ್ತಾಗುವುದಿಲ್ಲ. ಇನ್ನು ಖಾಸಗಿ ಉದ್ಯೋಗಿಗಳು ಅನುಭವಿಸುವ ನೋವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗ ಈ ವಿಚಾರಗಳು ತುಂಬಾ ಮುನ್ನೆಲೆಗೆ ಬರುತ್ತವೆ. ಕಾರಣ ಬಹುತೇಕವಾಗಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವವರು ಕೂಡ ಇದೇ ವ ರ್ಗದವರು ಎಂದು ಹೇಳಬಹುದು. ಇಲ್ಲೊಬ್ಬ ವ್ಯಕ್ತಿ ತಾನು ಕಡಿಮೆ ವೇತನಕ್ಕೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರೂ ಮೊದಲ ದಿನವೇ ಆತನ ಬಾಸ್ ಉದ್ಯೋಗಿಯನ್ನು ನಡೆಸಿಕೊಂಡ ರೀತಿ ಹಾಗೂ ಅವರು ನಡೆದುಕೊಂಡ ಬಗೆಯನ್ನು ನೋಡಿ ಕೋಪಗೊಂಡಿದ್ದಾನೆ. ಇದಾದ ನಂತರ ಮೊದಲ ದಿನವೇ ನಿಮ್ಮ ಕೆಲಸ, ನಿಮ್ಮ ವೇತನ ಎರಡನ್ನೂ ನೀವೇ ಇಟ್ಟುಕೊಳ್ಳಿ ಎಂದು ಮ್ಯಾಜೇಜರ್ ಮುಖದ ಮೇಲೆ ರಾಜೀನಾಮೆ ಪತ್ರವನ್ನು ಎಸೆದು ಬಂದಿದ್ದಾನೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ತನ್ನ ರಾಜೀನಾಮೆ ಇಮೇಲ್ ಶೇರ್ ಮಾಡಿಕೊಂಡಿದ್ದು, ಅದು ಭಾರಿ ವೈರಲ್ ಆಗುತ್ತಿದೆ.

Latest Videos

undefined

ಇದನ್ನೂ ಓದಿ: ಸೇಲ್ಸ್ ಮಾರ್ಕೆಟಿಂಗ್ ಕೆಲಸ ಬಿಟ್ಟು, IAS ಅಧಿಕಾರಿಯಾದ ಅನಾಮಿಕಾ!

ಕಳೆದೊಂದು ವಾರದ ಹಿಂದಷ್ಟೇ ಅಕ್ಟೋಬರ್ 7 ರಂದು ವ್ಯಕ್ತಿಯೊಬ್ಬ ಕೆಲಸ ಆರಂಭಿಸಿದ್ದಾನೆ. ಕೆಲಸಕ್ಕೆ ಬಂದ ವ್ಯಕ್ತಿಯಿಂದ ತನ್ನ ಮ್ಯಾನೇಜರ್ ಮೊದಲ ದಿನವೇ 9 ಗಂಟೆಗಳಿಗಿಂತ ಹೆಚ್ಚು ಸಮಯ ಕೆಲಸ ಮಾಡಬೇಕು ಎಂದು ಹೇಳಿದ್ದಕ್ಕೆ  ಇದನ್ನು ಕೇಳಿ ಆಶ್ಚರ್ಯಚಕಿತರಾಗಿದ್ದಾರೆ. ಇದಾದ ನಂತರ ಮೊದಲ ದಿನವೇ 12 ರಿಂದ 14 ಗಂಟೆಗಳ ಕಾಲ ಕೆಲಸ ಮಾಡುವಂತೆ ಮ್ಯಾನೇಜರ್ ಹೇಳಿದರಂತೆ. ಆಗ ಕೆಲಸ ಮಾಡುವ ವ್ಯಕ್ತಿ ಸರ್ಕಾರದ ನಿಯಮಾವಳಿಗಳನ್ನು ತಿಳಿಸಿ, ಓವರ್ ಟೈಮ್ ಕೆಲಸ ಮಾಡುವುದರ ಬಗ್ಗೆ ಪ್ರಶ್ನಿಸಿದಾಗ ಅವರನ್ನು ಮ್ಯಾಜೇರ್  ಅಪಹಾಸ್ಯ ಮಾಡಿದ್ದಾರೆ. ಈ ವೇಳೆ ಕೆಲಸದ ಸಮಯದಲ್ಲಿ ಚಹಾ, ಊಟ ಸೇರಿದಂತೆ ವಿರಾಮಕ್ಕೆ ಕೆಲವೊಂದಿಷ್ಟು ಬಿಡುವು ಕೇಳಿದರೂ ಆಗ ಅಪಹಾಸ್ಯ ಮಾಡಲಾಯಿತು.

ಇದರಿಂದ ಕೋಪಗೊಂಡ ನೌಕರ ನಾನು ಕಡಿಮೆ ಸಂಬಳಕ್ಕೆ ಒಪ್ಪಿಕೊಂಡು ಕೆಲಸಕ್ಕೆ ಹೋದರೂ, ಮ್ಯಾನೇಜರ್ ನನ್ನಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ, ಸರ್ಕಾರದ ನಿಯಮಾವಳಿಗಳಂತೆ 8 ಗಂಟೆಗಳಿಗಿಂದ ಹೆಚ್ಚುವರಿಯಾಗಿ ಮಾಡುವ ಕೆಲಸಕ್ಕೆ ಹೆಚ್ಚುವರಿ ಹಣ ನೀಡುವಂತೆ ಕೇಳಿದ್ದಾರೆ. ಆದರೆ, ತಮ್ಮ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರು ವೇತನವಿಲ್ಲದೆ ಕೆಲಸ ಮಾಡುವುದಿಲ್ಲ ಎಂದು ಹೇಳಿದಾಗ, ಮ್ಯಾನೇಜರ್‌ನ ವರ್ತನೆ ಬದಲಾಯಿತು. ಈ ಬಗ್ಗೆ ಉದ್ಯೋಗಿ ಮ್ಯಾನೇಜರ್ ಬೇಡಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ 'Western developed nation behaviour' ಎಂದು ಹೇಳಿಕೊಂಡಿದ್ದಾರೆ.
 

“ಬಚನ್” ಒಂದು ಚೆನ್ನಾಗಿ ನೆಡಲಾದ ಕುತಂತ್ರ 
ಮೂಲಕu/ayrus001 ಒಳಗೆBollyBlindsNGossip

ಇಂಟರ್ನೆಟ್ ಬಳಕೆದಾರರಿಂದ ಪ್ರಶಂಸೆ: ನೆಟ್ಟಿಗರು ಈ ಉದ್ಯೋಗಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ನಿಮ್ಮ ಮೇಲೆ ಹೆಮ್ಮೆ ಇದೆ. ನಾನು ನನ್ನ ವೃತ್ತಿಜೀವನದ ಆರಂಭದಲ್ಲಿ ಇದನ್ನು ಮಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ರಾಜೀನಾಮೆ ಇಮೇಲ್ ಅನ್ನು 'ಇದುವರೆಗಿನ ಅತ್ಯುತ್ತಮ ಇಮೇಲ್‌ಗಳಲ್ಲಿ ಒಂದು' ಎಂದು ಮತ್ತೊಬ್ಬರು ಕಾಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಖಾಸಗಿ ಉದ್ಯೋಗಿಗಳ ಕಹಿ ಸತ್ಯ ಎಂದು ಬಣ್ಣಿಸಿದ್ದಾರೆ. ಇದು ತಮ್ಮೊಂದಿಗೆ ಪ್ರತಿದಿನ ನಡೆಯುತ್ತದೆ ಎಂದು ಜನರು ಹೇಳಿದ್ದಾರೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಕೇಂದ್ರದಿಂದ ಗುಡ್‌ನ್ಯೂಸ್; ಪಿಎಂ ಇಂಟರ್ನ್‌ಶಿಪ್ ಯೋಜನೆಗೆ ಇಂದಿನಿಂದ ನೋಂದಣಿ ಪ್ರಾರಂಭ!

click me!