ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿ ನೇಮಕಾತಿ ಆರಂಭಗೊಂಡಿದೆ. 184 ಖಾಲಿ ಹುದ್ದೆಗಳ ಭರ್ಜಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 21 ಕೊನೆಯ ದಿನ.
ನವದೆಹಲಿ(ಅ.13) ಸರ್ಕಾರಿ ನೌಕರಿ ಹುಡುಕುತ್ತಿರುವ ಯುವ ಸಮೂಹಕ್ಕೆ ಉತ್ತಮ ಅವಕಾಶ ಒದಗಿ ಬಂದಿದೆ. ವಿಶೇಷವಾಗಿ ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿ ವಿಭಾಗದಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ಭಾರತೀಯ ಸೇನೆಯಲ್ಲಿ ಜ್ಯೂನಿಯರ್ ಕಮಿಷನ್ಡ್ ಆಫೀಸರ್, ಯೋಧ ಸೇರಿದಂತೆ ವಿವಿಧ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿ ಗೋರಖಾ ರೈಫಲ್ಸ್ ವಿಭಾಗದಲ್ಲಿ ನೇಮಕಾತಿ ನಡೆಯುತ್ತಿದೆ. ಒಟ್ಟು 184 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಹಾಗೂ ಅರ್ಹರು ಅಕ್ಟೋಬರ್ 21ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ.
ಅಕ್ಟೋಬರ್ 21ರಿಂದ 25ರ ವರೆಗೆ ಟೆರಿಟೋರಿಯಲ್ ನೇಮಕಾತಿ ರ್ಯಾಲಿ ನಡೆಯಲಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು. ಈ ಕುರಿತು ಟೆರಿಟೋರಿಯಲ್ ಆರ್ಮಿ ವಿಭಾಗ, ಆಸಕ್ತ ಅಭ್ಯರ್ಥಿಗಳು ಅಧಿಕೃತ ಟೆರಿಟೋರಿಯಲ್ ವೆಬ್‌ಸೈಟ್‌ಗೆ ತೆರಳಿ ಅರ್ಜಿ ಸಲ್ಲಿಸಲು ಸೂಚಿಸಿದೆ. ಇದೇ ವೇಳೆ ಹೊರಡಿಸುವ ಅಧಿಸೂಚನೆ ಗಮನಿಸಿ ಅರ್ಜಿ ಸಲ್ಲಿಸಲು ಸೂಚಿಸಿದೆ. ಈ ಅಧಿಸೂಚನೆಯಲ್ಲಿ ಆಯಾ ವಿಭಾಗದ ಹುದ್ದೆಗಳಿಗೆ ವಿದ್ಯಾರ್ಹತೆ, ಅಗತ್ಯ ದಾಖಲೆ ಸೇರಿದಂತೆ ಇತರ ಮಾಹಿತಿಗಳನ್ನು ನೀಡಲಾಗಿದೆ.
undefined
ಟಾಟಾ ಕನ್ಸಲ್ಟೆನ್ಸಿ ಮಹತ್ವದ ಘೋಷಣೆ: ಆಂಧ್ರದಲ್ಲಿ ಐಟಿ ಕೇಂದ್ರ ಸ್ಥಾಪನೆ, 10 ಸಾವಿರ ಉದ್ಯೋಗವಕಾಶ!
184 ಹುದ್ದೆಗಳ ಪೈಕಿ 7 ಹುದ್ದೆ ಜ್ಯೂನಿಯರ್ ಕಮಿಷನ್ಡ್ ಆಫೀಸರ್, 7 ಹುದ್ದೆ ಧಾರ್ಮಿಕ ಶಿಕ್ಷಕ ಸ್ಥಾನಗಳಿಗಿದೆ. ಇನ್ನು ಯೋಧ, ಕ್ಲರ್ಕ್, ಹೇರ್‌ಡ್ರೆಸ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಯ್ಕೆ ಪ್ರಕ್ರಿಯೆ ಭಾರತೀಯ ಸೇನಾ ನಿಯಮಗಳು ಹಾಗೂ ನಿಬಂಧನೆಗಳಿಗೆ ಒಳಪಟ್ಟಿದೆ. ಹೀಗಾಗಿ ಆಯಾ ಹುದ್ದೆಗೆ ತಕ್ಕಂತೆ ನೇಮಕಾತಿ ಪ್ರಕ್ರಿಯೆ ನಡೆಲಿದೆ.
ಫಿಸಿಕಲ್ ಟೆಸ್ಟ್, ಎತ್ತರ, ತೂಕ ಸೇರಿದಂತೆ ಇತರ ಕೆಲ ಕಡ್ಡಾಯ ಮಾನದಂಡಗಳನ್ನು ಅಭ್ಯರ್ಥಿಗಳು ಹೊಂದಿರಬೇಕು. ಪ್ರೊಫಿಶೆನ್ಸಿ ಟೆಸ್ಟ್, ಟ್ರೇಡ್ ಹಾಗೂ ದಾಖಲೆ ಪತ್ರಗಳ ಪರಿಶೀಲನೆಯೂ ನಡೆಯಲಿದೆ. ಸ್ಕ್ರೀನ್ ಟೆಸ್ಟ್ ಹಾಗೂ ಸಂದರ್ಶನದ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯಾ ಹುದ್ದೆಗಳ ವೇತನವೂ ಭಿನ್ನವಾಗಿದೆ. ಜೊತೆಗೆ ಎಲ್ಲಾ ಸರ್ಕಾರಿ ಸೌಲಭ್ಯಗಳು ಲಭ್ಯವಾಗಲಿದೆ.
ಟೆರಿಟೋರಿಯಲ್ ಆರ್ಮಿಯಲ್ಲಿ ಸೇವೆ ಸಲ್ಲಿಸಲು ಈಗಾಗಲೇ ಹಲವುರು ಅರ್ಜಿ ಸಲ್ಲಿಸಿದ್ದಾರೆ. ಅರ್ಹರು ಹಾಗೂ ಆಸಕ್ತರಿಗೆ ಅರ್ಜಿ ಸಲ್ಲಿಸಲು ಕೆಲ ದಿನಗಳ ಅವಕಾಶವಿದೆ. ಅಗತ್ಯ ದಾಖಲೆ ಪತ್ರ, ಸ್ವವಿವರಗಳನ್ನು ದಾಖಲಿಸಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಕಚೇರಿಗೆ ಡ್ಯಾನ್ಸ್ ಮಾಡುತ್ತಾ ಬರದಿದ್ದರೆ ಕೆಲಸ ಮಾಡಲ್ಲ, ಉದ್ಯೋಗಿಗಳ ನೋಟಿಸ್‌ಗೆ ಮಣಿದ ಬಾಸ್!