ಕೊರೋನಾ ಹಾಗೂ ಲಾಕ್ಡೌನ್ನಿಂದಾಗಿ 2020-21ನೇ ಸಾಲಿನ ಪೊಲೀಸ್ ಕಾನ್ಸ್ಟೇಬಲ್ ವೃಂದದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿಲಾಗಿದ್ದು, ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ರರಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.13): 2020-21ನೇ ಸಾಲಿನ ಪೊಲೀಸ್ ಕಾನ್ಸ್ಟೇಬಲ್ ವೃಂದದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿಲಾಗಿದ್ದು, ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿ ಅವಲೋಕಿಸಿ ಈ ಹಿಂದೆ ನಿಗಪಡಿಸಲಾಗಿದ್ದ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಮಾತ್ರ ವಿಸ್ತರಿಸಲಾಗಿದ್ದು, ಇನ್ನುಳಿದಂತೆ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸಿಪಿಸಿ (ಪುರುಷ ಮತ್ತು ಮಹಿಳಾ) (ಕಲ್ಯಾಣ ಕರ್ನಾಟಕ) ಹಾಗೂ ಎಪಿಸಿ (ಪುರುಷ) (ಕಲ್ಯಾಣ ಕರ್ನಾಟಕ) ಅರ್ಜಿ ಸಲ್ಲಿಸುವ ದಿನಾಂಕ: ಜುಲೈ-9 ಹಾಗೂ ಶುಲ್ಕ ಪಾವತಿಸಲು ಜುಲೈ 13, ಸಿಪಿಸಿ (ಪುರುಷ ಮತ್ತು ಮಹಿಳಾ) ಹಾಗೂ ಎಪಿಸಿ (ಪುರುಷ)( ಸಿಎಆರ್/ಡಿಎಆರ್) ಅರ್ಜಿ ಸಲ್ಲಿಸುವ ದಿನಾಂಕ: ಜುಲೈ-13 ಹಾಗೂ ಶುಲ್ಕ ಪಾವತಿಸಲು ಜುಲೈ 15 ಹಾಗೂ ಸ್ಪೇ. ಆರ್.ಪಿ.ಸಿ. (ಪುರುಷ /ಮಹಿಳಾ) (ಕೆಎಸ್ಆರ್ಪಿ /ಐ.ಆರ್.ಬಿ) ಹಾಗೂ ಸ್ಪೇ./ಆರ್ಪಿಸಿ (ಪುರುಷ) (ಬ್ಯಾಂಡ್ಸ್ಮನ್) (ಕೆಎಸ್ಆರ್ಪಿ/ಐ.ಆರ್.ಬಿ.) ಅರ್ಜಿ ಸಲ್ಲಿಸುವ ದಿನಾಂಕ: ಜುಲೈ-6 ಹಾಗೂ ಶುಲ್ಕ ಪಾವತಿಸಲು ಜುಲೈ 7 ಕೊನೆ ದಿನಾಂಕ ಆಗಿರುತ್ತದೆ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-261413/259022 ಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
undefined
ವಿವಿಧ ಹುದ್ದೆಗಳ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದ ಕೆಪಿಎಸ್ಸಿ
ದ್ವಿತಿಯ ಪಿಯು ಪರೀಕ್ಷೆ: ನಿಷೇಧಾಜ್ಞೆ ಜಾರಿ
ಶಿವಮೊಗ್ಗ: ಜೂನ್ 18ರಂದು ಜಿಲ್ಲೆಯ 33 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಯುತ್ತಿದ್ದು, ಅಂದು ಬೆಳಗ್ಗೆ 7.30ರಿಂದ ಸಂಜೆ 4ರವರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿಸಲಾಗಿದೆ. ಈ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಟೈಪಿಂಗ್, ಝೆರಾಕ್ಸ್ ಅಂಗಡಿಗಳು ತೆರೆಯುವುದನ್ನು ನಿಷೇಧಿಸಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ಸಂಬಂಧಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಹೊರತುಪಡಿಸಿ ಇತರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳೊಳಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಈ ನಿರ್ಬಂಧಿತ ಪ್ರದೇಶದ ಸುತ್ತಮುತ್ತಲಲ್ಲಿ ಐದು ಮತ್ತು ಐದಕ್ಕಿಂತ ಹೆಚ್ಚಿನ ಜನರು ಸೇರುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಮೊಬೈಲ್ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶ ನೀಡಿದ್ದಾರೆ.
ಯಾರಾದರೂ 200 ಮೀ ವ್ಯಾಪ್ತಿಯೊಳಗೆ ಪ್ರವೇಶಿಸಿದರೆ, ಪ್ರವೇಶಿಸಲು ಯತ್ನಿಸಿದರೆ ಅಂತಹವರನ್ನು ಪೊಲೀಸ್ ವಶಕ್ಕೆ ಪಡೆದು ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.