ಅಂದು 12 ಗಂಟೆ ಕೆಲಸ, ತಿಂಗಳಿಗೆ 15000 ಸಂಬಳ! ಇಂದು 35 ಸಾವಿರ ಸ್ಯಾಲರಿ.. ಇವರು ಮಾಡಿದ ಟ್ರಿಕ್ಸ್ ಏನು?

Published : Jul 23, 2026, 09:01 PM IST
priyanka

ಸಾರಾಂಶ

ಒಂದು ಕಾಲದಲ್ಲಿ ದಿನದ 12 ಗಂಟೆಗಳ ಕಾಲ ಸತತವಾಗಿ ದುಡಿದರೂ ಕೈಗೆ ಸಿಗುತ್ತಿದ್ದುದು ಕೇವಲ 15 ರಿಂದ 20 ಸಾವಿರ ರೂಪಾಯಿ. ರಜೆ ಇಲ್ಲ, ಕೆಲಸಕ್ಕೆ ಹೋದ ಮನೆಯವರಲ್ಲಿ ಗೌರವವೂ ಇರಲಿಲ್ಲ. ಆದರೆ ಇಂದು ಅದೇ ಯುವತಿ ಆ್ಯಪ್ ಆಧಾರಿತ ಗೃಹ ಸೇವೆಗಳ ಮೂಲಕ ತಿಂಗಳಿಗೆ 35 ಸಾವಿರ ರೂಪಾಯಿ ಸಂಪಾದಿಸುತ್ತಾ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಹೇಗೆ ಗೊತ್ತಾ?

ನೋಯ್ಡಾ: ಒಂದು ಕಾಲದಲ್ಲಿ ದಿನದ 12 ಗಂಟೆಗಳ ಕಾಲ ಸತತವಾಗಿ ದುಡಿದರೂ ಕೈಗೆ ಸಿಗುತ್ತಿದ್ದುದು ಕೇವಲ 15 ರಿಂದ 20 ಸಾವಿರ ರೂಪಾಯಿ. ರಜೆ ಇಲ್ಲ, ಕೆಲಸಕ್ಕೆ ಹೋದ ಮನೆಯವರಲ್ಲಿ ಗೌರವವೂ ಇರಲಿಲ್ಲ. ಆದರೆ ಇಂದು ಅದೇ ಯುವತಿ ಆ್ಯಪ್ ಆಧಾರಿತ ಗೃಹ ಸೇವೆಗಳ ಮೂಲಕ ತಿಂಗಳಿಗೆ 35 ಸಾವಿರ ರೂಪಾಯಿ ಸಂಪಾದಿಸುತ್ತಾ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಇದು ಡಿಜಿಟಲ್ ಕ್ರಾಂತಿ ಹೇಗೆ ಒಬ್ಬ ಸಾಮಾನ್ಯ ಗೃಹ ಕಾರ್ಮಿಕಳ ಬದುಕನ್ನು ಬದಲಿಸಿದೆ ಎಂಬ ರೋಚಕ ಕಥೆ.

ಅವಮಾನವೇ ಬದಲಾವಣೆಗೆ ನಾಂದಿ

ಉತ್ತರ ಪ್ರದೇಶದ ಫಿರೋಜಾಬಾದ್ ಮೂಲದ 23 ವರ್ಷದ ಪ್ರಿಯಾಂಕಾ ನೋಯ್ಡಾದಲ್ಲಿ ನೆಲೆಸಿದ್ದಾರೆ. 12ನೇ ತರಗತಿ ಮುಗಿಸಿರುವ ಇವರು ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಮತ್ತು ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ 12 ಗಂಟೆಗಳ ಕಾಲ ಮಗುವನ್ನು ನೋಡಿಕೊಳ್ಳುವ ಕೆಲಸಕ್ಕೆ ಹೋಗಿದ್ದೆ. ಅಲ್ಲಿನ ಯಜಮಾನಿ ಮಧ್ಯಾಹ್ನ 3 ಗಂಟೆಗೆ ಊಟ ಕೊಡುತ್ತಿದ್ದರು. ನಿಮ್ಮಂತಹ ಕೆಲಸದವರಿಗೆಲ್ಲ ಸ್ಟೇಟಸ್ (ಅಂತಸ್ತು) ಇರುವುದಿಲ್ಲ ಎಂದು ನಿಂದಿಸಿದ್ದರು. ಆ ಮಾತು ಕೇಳಿ ನನ್ನ ಮನಸ್ಸು ಒಡೆದು ಹೋಯಿತು. ಅಂದೇ ಇಂತಹ ಕೆಲಸ ಬಿಡಲು ನಿರ್ಧರಿಸಿದೆ ಎಂದು ಪ್ರಿಯಾಂಕಾ ತಮ್ಮ ಕಹಿ ನೆನಪನ್ನು ಹಂಚಿಕೊಳ್ಳುತ್ತಾರೆ.

ಆ್ಯಪ್ ಮೂಲಕ ಬದುಕು ಬದಲು

ಕಳೆದ ಎಂಟು ತಿಂಗಳಿನಿಂದ ಪ್ರಿಯಾಂಕಾ ಆ್ಯಪ್ ಆಧಾರಿತ ಪ್ಲಾಟ್‌ಫಾರ್ಮ್ ( app-based home service platform) ಮೂಲಕ ಪಾತ್ರೆ ತೊಳೆಯುವುದು, ಮನೆ ಸ್ವಚ್ಛಗೊಳಿಸುವುದು ಮತ್ತು ಧೂಳು ತೆಗೆಯುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ.

ಸಂಬಳದ ವಿವರ ಹೀಗಿದೆ

  • ದೈನಂದಿನ ಫಿಕ್ಸೆಡ್ ವೇತನ: ಬುಕಿಂಗ್ ಇರಲಿ ಅಥವಾ ಇಲ್ಲದಿರಲಿ ದಿನಕ್ಕೆ 900 ರೂ. ಗ್ಯಾರಂಟಿ
  • ವಾರಾಂತ್ಯದ ಗಳಿಕೆ: ಶನಿವಾರ ಮತ್ತು ಭಾನುವಾರ ಕೆಲಸ ಮಾಡಿದರೆ ದಿನಕ್ಕೆ 1,050 ರೂ.
  • ಬೋನಸ್: ತಿಂಗಳಿಗೆ 6,000 ರೂ. ವರೆಗೆ ಬೋನಸ್ ಸಿಗುತ್ತದೆ.
  • ಒಟ್ಟು ಆದಾಯ: ತಿಂಗಳಿಗೆ ಕನಿಷ್ಠ 30,000 ರಿಂದ 35,000 ರೂ. ಗಳಿಸುತ್ತಿದ್ದಾರೆ.

ಕೆಲಸ ಕಳೆದುಕೊಳ್ಳುವ ಭಯವಿಲ್ಲ

ಸಾಂಪ್ರದಾಯಿಕ ಮನೆಗೆಲಸಗಳಲ್ಲಿ ರಜೆ ಕೇಳಿದರೆ ಕೆಲಸದಿಂದ ಕಿತ್ತುಹಾಕುವ ಭಯವಿರುತ್ತದೆ. ಈ ಆ್ಯಪ್ ವ್ಯವಸ್ಥೆಯಲ್ಲಿ ಪ್ರಿಯಾಂಕಾ ತಮಗೆ ಬೇಕಾದಾಗ ರಜೆ ಪಡೆಯಬಹುದು. ನಾನು 15 ದಿನ ಹಳ್ಳಿಗೆ ಹೋಗಿ ಬಂದರೂ ನನ್ನ ಐಡಿ (ID) ಮತ್ತೆ ಆಕ್ಟಿವೇಟ್ ಆಗುತ್ತದೆ. ಕೆಲಸ ಕಳೆದುಕೊಳ್ಳುವ ಚಿಂತೆ ಇಲ್ಲ ಎನ್ನುತ್ತಾರೆ ಅವರು.

ಪ್ರಿಯಾಂಕಾ ಮತ್ತು ಅವರ ಸ್ನೇಹಿತೆಯರು ತಮ್ಮ ಕೆಲಸದ ವ್ಯಾಪ್ತಿಯಲ್ಲಿರುವ ಪಾರ್ಕ್‌ಗಳಲ್ಲಿ ಅಥವಾ ರಸ್ತೆ ಬದಿಯಲ್ಲಿ ಕುಳಿತು ಬುಕಿಂಗ್‌ಗಾಗಿ ಕಾಯುತ್ತಾರೆ. 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬುಕಿಂಗ್ ಬಂದ ಕೂಡಲೇ ಗ್ರಾಹಕರ ಮನೆಗೆ ತೆರಳಿ ಕೆಲಸ ಮುಗಿಸುತ್ತಾರೆ. ಈ ಸ್ವಾತಂತ್ರ್ಯ ಅವರ ಬದುಕಿಗೆ ಹೊಸ ಚೈತನ್ಯ ನೀಡಿದೆ. ಆದಾಯ ಹೆಚ್ಚಿದ್ದರೂ ಕೆಲಸದಲ್ಲಿ ಸವಾಲುಗಳಿಲ್ಲದಿಲ್ಲ. ಕೆಲವು ಗ್ರಾಹಕರು ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ನಾವು ಹೇಳಿದ ಮಾತು ಕೇಳದಿದ್ದರೆ ನಿಮ್ಮ 'ರೇಟಿಂಗ್' (Rating) ಹಾಳು ಮಾಡುತ್ತೇವೆ ಎಂದು ಬೆದರಿಸುತ್ತಾರೆ. ರೇಟಿಂಗ್ ಕಡಿಮೆಯಾದರೆ ನಮಗೆ ಬೋನಸ್ ಸಿಗುವುದಿಲ್ಲ. ಆದರೆ ಹೆಚ್ಚಿನ ಗ್ರಾಹಕರು ತುಂಬಾ ಒಳ್ಳೆಯವರಾಗಿದ್ದಾರೆ, ಕೆಲವೊಮ್ಮೆ ಟಿಪ್ಸ್ ಕೂಡ ನೀಡುತ್ತಾರೆ ಎಂದು ಅವರು ವಿವರಿಸುತ್ತಾರೆ.

ಪ್ರಿಯಾಂಕಾ ಅವರ ಪತಿ ಇವರ ಕೆಲಸಕ್ಕೆ ಪೂರ್ಣ ಬೆಂಬಲ ನೀಡುತ್ತಿದ್ದಾರೆ. ಆದರೆ ಸಮಾಜದ ಹಂಗಿಗೆ ಹೆದರಿ ತಮ್ಮ ಹೆತ್ತವರಿಗೆ ಮತ್ತು ಅತ್ತೆ-ಮಾವನಿಗೆ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಇನ್ನು ತಿಳಿಸಿಲ್ಲ. ಡಿಜಿಟಲ್ ಯುಗದಲ್ಲಿ ಗೃಹ ಕಾರ್ಮಿಕರಿಗೂ ಹೊಸ ಆಯಾಮ ಸಿಗುತ್ತಿರುವುದಕ್ಕೆ ಪ್ರಿಯಾಂಕಾ ಅವರೇ ಸಾಕ್ಷಿ.

PREV
Read more Articles on
click me!

Recommended Stories

ಕೆಪಿಎಸ್‌ಸಿ ಮತ್ತೊಂದು ಭಾರೀ ಹಗರಣ: ₹80 ಲಕ್ಷಕ್ಕೆ ಪಶುವೈದ್ಯ ಹುದ್ದೆ ಮಾರಾಟ? ವಿಡಿಯೋ ಸಮೇತ ಮದ್ಯವರ್ತಿ ಲಾಕ್!
138 ದೊಡ್ಡ ಗ್ರಹ ಹಿಮ್ಮುಖ ಚಲನೆ, 4 ರಾಶಿಗಳಿಗೆ ದುಡ್ಡು, ಪ್ರಮೋಷನ್, ಆಸ್ತಿ ಯೋಗ!