Latest Videos

30 ಪೇಯ್ಡ್ ಲೀವ್ ಬಳಕೆಯಾಗದಿದ್ದರೆ ರಜೆಯ ಪಾವತಿ ಕಡ್ಡಾಯ, ಹೊಸ ಕಾರ್ಮಿಕ ನೀತಿ!

By Suvarna NewsFirst Published Sep 5, 2023, 7:35 PM IST
Highlights

ಕಾರ್ಮಿಕ ನೀತಿಯಲ್ಲಿ ಅತೀ ದೊಡ್ಡ ಬದಲಾವಣೆಗಳಾಗುತ್ತಿದೆ.  4 ಪ್ರಮುಖ ಬದಲಾವಣೆಯಲ್ಲಿ 30ಕ್ಕಿಂತ ಹೆಚ್ಚು ಪಾವತಿ ರಜೆಯನ್ನು ನೌಕರ ಬಳಕೆ ಮಾಡಿಕೊಳ್ಳದಿದ್ದರೆ, ಕಂಪನಿ ಕಡ್ಡಾಯವಾಗಿ ನೌಕರನಿಗೆ  ಅದರ ಮೊತ್ತ ಪಾವತಿಸಬೇಕು ಅನ್ನೋದು ಹೊಸನೀತಿ. ಹೊಸ ಕಾರ್ಮಿಕ ನೀತಿ ವಿವರ ಇಲ್ಲಿದೆ.

ನವದೆಹಲಿ(ಸೆ.05) ಉದ್ಯೋಗಿಯೊಬ್ಬ 30 ಪಾವತಿ ರಜಾ ದಿನವನ್ನು ಬಳಕೆ ಮಾಡದೇ ಇದ್ದರೆ, ಅದರ ಮೊತ್ತವನ್ನು ಕಡ್ಡಾಯವಾಗಿ ಕಂಪನಿ ಉದ್ಯೋಗಿಗೆ ಪಾವತಿ ಮಾಡಬೇಕು. ಇದು ಹೊಸ ಕಾರ್ಮಿಕ ನೀತಿ. ಉದ್ಯೋಗಿ, ಕಂಪನಿ, ಕೆಲಸದ ಸಮಯ, ರಜಾ ದಿನ, ವೇತನ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಇದೀಗ ಹೊಸ ಕಾರ್ಮಿಕ ನೀತಿ ಜಾರಿಯಾಗುತ್ತಿದೆ. 4 ಪ್ರಮುಖ ಮಸೂದೆಗಳು ಶೀಘ್ರದಲ್ಲೇ ಜಾರಿಗಾಯುತ್ತಿದೆ.. ಉದ್ಯೋಗದಾತ ಹಾಗೂ ಉದ್ಯೋಗಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಮಿಕ ನೀತಿಯನ್ನು ಪರಿಷ್ಕರಿಸಲಾಗಿದೆ. 

ಕೆಲಸದಲ್ಲಿ ಆರೋಗ್ಯಕರ ವಾತಾವರಣ, ಸುರಕ್ಷತೆ,  ಉತ್ಪಾದನೆ ಹೆಚ್ಚಳಕ್ಕೆ ಹೊಸ ಕಾರ್ಮಿಕ ನೀತಿ ಮಹತ್ತರ ಕೊಡುಗೆ ನೀಡಲಿದೆ. ಇದರಲ್ಲಿ ಪ್ರಮುಖವಾಗಿ ಉದ್ಯೋಗಿಯ ಪಾವತಿ ರಜಾದಿನ ನೀತಿಯನ್ನು ಕಡ್ಡಾಯವಾಗಿದೆ.  ಪ್ರತಿ ಕಂಪನಿಯಲ್ಲಿ ವಾರ್ಷಿಕವಾಗಿ ಇಂತಿಷ್ಟು ಪಾವತಿ ರಜೆ ಇದೆ. ಈ ರಜೆಯನ್ನು ಉದ್ಯೋಗಿ ಬಳಕೆ ಮಾಡಿಕೊಳ್ಳದೇ ಇದ್ದಲ್ಲಿ, ಅಥವಾ ಬಳಕೆ ಮಾಡಲು ಸಾಧ್ಯವಾಗದಿದ್ದಲ್ಲಿ ಆ ರಜಾ ದಿನ ವೇತವನ್ನು ಕಂಪನಿ ಪಾವತಿ ಮಾಡಬೇಕು. ಪಾವತಿ ರಜೆಯಲ್ಲಿ 30 ದಿನ ಬಳಕೆಯಾಗದಿದ್ದಲ್ಲಿ, ಈ 30 ಅಥವಾ ಅದಕ್ಕಿಂತ ಹೆಚ್ಚು ರಜಾ ದಿನದ ವೇತವನ್ನು ಕಂಪನಿ ಉದ್ಯೋಗಿಗೆ ನೀಡಬೇಕು. ಆದರೆ ಈ ನಿಯಮ ಮ್ಯಾನೇಜರ್, ಸೂಪರ್‌ವೈರಸ್‌ಗಳಿಗೆ ಅನ್ವಯವಾಗಲ್ಲ.

 

ಕಾರ್ಮಿಕ ನೀತಿ ಸಡಿಲಗೊಳಿಸಿದ ಜರ್ಮನಿ, ಭಾರತೀಯರಿಗೆ ಮೊದಲ ಆದ್ಯತೆ!

ಒಂದು ವರ್ಷದಲ್ಲಿ ಪಾವತಿ ರಜಾ ದಿನ 30 ಅಥವಾ ಅದಕ್ಕಿಂತ ಹೆಚ್ಚು ಬಳಕೆಯಾಗದಿದ್ದಲ್ಲಿ ಕಂಪನಿ ರಜಾ ದಿನದ ವೇತನ ಪಾವತಿ ಮಾಡಬೇಕು. ಮುಂದಿನ ವರ್ಷ ಈ ರಜಾ ದಿನದ ವೇತನ ಪಡೆಯಲು ಉದ್ಯೋಗಿ  ಅರ್ಹರಾಗಿರುತ್ತಾರೆ. 

ರಜಾ ಪಾವತಿ  ನೀತಿ ಸೇರಿದಂತೆ ನಾಲ್ಕು ಪ್ರಮುಖ  ಕಾರ್ಮಿಕರ ನೀತಿ ಜಾರಿಯಾಗಲಿದೆ. ಔದ್ಯೋಗಿಕ ಸುರಕ್ಷತೆ, ಆರೋಗ್ಯಹಾಗೂ ಕೆಲಸದ  ಸ್ಥಿತಿಗತಿ, ವೇತನ ನೀತಿ, ಕೈಗಾರಿಕಾ ಸಂಬಂಧ ಕೋಡ್, ಸಾಮಾಜಿಕ ಭದ್ರತೆ ಸೇರಿದಂತೆ ನಾಲ್ಕು ಕಾರ್ಮಿಕ ನೀತಿಯಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದೆ. 

ಒಂದು ವಾರದಲ್ಲಿ ಇಂತಿಷ್ಟೆ ಸಮಯ ಕೆಲಸ ಮಾಡಬೇಕು. ಅದಕ್ಕಿಂತ ಹೆಚ್ಚು ದುಡಿಸಿಕೊಳ್ಳುವಂತಿಲ್ಲ. ಹೆಚ್ಚುವರಿ ಸಮಯ ಕೆಲಸಕ್ಕೆ ಹೆಚ್ಚುವರಿ ಪಾವತಿ ಮಾಡಬೇಕು. ಹೆಚ್ಚುವರಿ ಕೆಲಸದಸಮಯ ಒತ್ತಾಯಪೂರ್ವಕವಾಗಿ ಮಾಡುವಂತಿಲ್ಲ. 

ಕಾರ್ಮಿಕರು ಸತ್ತಿದ್ದಾರೆಂದು ಸರ್ಟಿಫಿಕೇಟ್‌ ಸೃಷ್ಟಿಸಿ 1 ಕೋಟಿ ಪರಿಹಾರ ಪಡೆದ ಪಂಚಾಯ್ತಿ ಅಧಿಕಾರಿಗಳು!

ಇನ್ನು ಔದ್ಯೋಗಿಕ ಸುರಕ್ಷತೆ ಪ್ರತಿ ಉದ್ಯೋಗಿಗೂ ಕಡ್ಡಾಯವಾಗಿದೆ. ಕಂಪನಿ ಈ ಕುರಿತು ಗಮನಹರಿಸಬೇಕು. ಕೆಲಸದ ಪರಿಸರದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸುವುದು ಉದ್ಯೋಗದಾತರ ಜವಾಬ್ದಾರಿಯಾಗಿದೆ. 
 

click me!