ಡ್ರೈವರ್‌ ಹುದ್ದೆ ಸೃಷ್ಟಿ : ದೇಶದಲ್ಲೇ ಮೊದಲ ಸ್ಥಾನದಲ್ಲಿ ಬೆಂಗಳೂರು!

Published : Aug 28, 2019, 09:03 AM IST
ಡ್ರೈವರ್‌ ಹುದ್ದೆ ಸೃಷ್ಟಿ : ದೇಶದಲ್ಲೇ ಮೊದಲ ಸ್ಥಾನದಲ್ಲಿ ಬೆಂಗಳೂರು!

ಸಾರಾಂಶ

ಚಾಲಕರಿಗೆ ಬೆಂಗಳೂರಿನಲ್ಲಿ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಚಾಲಕರಿಗೆ ದೇಶದಲ್ಲೇ ಅತೀ ಹೆಚ್ಚು ಬೇಡಿಕೆ ಬಂದಿದೆ ಎಂದು ವರದಿಯೊಂದು ತಿಳಿಸಿದೆ.

ಮುಂಬೈ [ಆ.28]: ಫುಡ್‌ ಡೆಲಿವರಿ ಹಾಗೂ ಹೊಸ ವಾಣಿಜ್ಯ ಕಂಪನಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಬೆಂಗಳೂರಿನಲ್ಲಿ ಚಾಲಕರಿಗೆ ದೇಶದಲ್ಲೇ ಅತೀ ಹೆಚ್ಚು ಬೇಡಿಕೆ ಬಂದಿದೆ ಎಂದು ವರದಿಯೊಂದು ತಿಳಿಸಿದೆ.

ದೇಶದಲ್ಲಿ ಚಾಲಕ ಉದ್ಯೋಗಗಳ ಪೈಕಿ ಶೇ.15 ರಷ್ಟುಹುದ್ದೆಗಳು ಬೆಂಗಳೂರಿನಲ್ಲೇ ಇದ್ದು, ಶೇ.10 ರಷ್ಟುಮುಂಬೈ ಹಾಗೂ ಶೇ.7 ರಷ್ಟುದೆಹಲಿಯಲ್ಲಿ ಚಾಲಕ ಹುದ್ದೆಗಳು ಖಾಲಿ ಇದೆ ಎಂದು ಉದ್ಯೋಗ ಸೈಟ್‌ ಇನ್‌ಡೀಡ್‌ ಹೇಳಿದೆ. 

2014-18ರ ಅವಧಿಯಲ್ಲಿ ಚಾಲಕ ಹುದ್ದೆಯ ಬೇಡಿಕೆ ಶೇ.50 ರಷ್ಟುಹೆಚ್ಚಾಗಿದ್ದು, ಚಾಲಕ ಹುದ್ದೆ ಆಕಾಂಕ್ಷಿಗಳ ಸಂಖ್ಯೆ ಶೇ.500 ರಷ್ಟುಹೆಚ್ಚಾಗಿದೆ. 2018ರಲ್ಲಿ ಒಂದು ಲಕ್ಷದಲ್ಲಿ ಶೇ.40ರಷ್ಟುಮಂದಿ ಚಾಲಕ ಹುದ್ದೆಯ ಬಗ್ಗೆ ತಡಕಾಡಿದ್ದಾರೆ. ದೈನಂದಿನ ಸ್ಟಾರ್ಟಪ್‌ ಕಂಪನಿಗಳ ಹೆಚ್ಚಳ, ಫುಡ್‌ ಡೆಲಿವರಿ ಹಾಗೂ ಇ-ಮಾರಾಟಗಳ ಹೆಚ್ಚಳವಾಗಿದ್ದರಿಂದ ಚಾಲಕ ಹುದ್ದೆಗೆ ಭಾರೀ ಬೇಡಿಕೆ ಬಂದಿದೆ ಎಂದು ಇನ್‌ಡೀಡ್‌ ಹೇಳಿದೆ.

PREV
click me!

Recommended Stories

ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ
ಲೋಕಸಭೆಯಲ್ಲಿ ನೌಕರರ ಪರ ಮಸೂದೆ ಮಂಡನೆ: ಉದ್ಯೋಗಿಗಳ ಲೈಫ್​ ಜಿಂಗಾಲಾಲಾ- ಏನಿದೆ ಇದರಲ್ಲಿ?