ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ: ಅರ್ಜಿ ಹಾಕಿ

By Web Desk  |  First Published Aug 27, 2019, 2:46 PM IST

ಬೆಂಗಳೂರು ವಿಶ್ವವಿದ್ಯಾಲಯ ಭೌತಶಾಸ್ತ್ರ ವಿಭಾಗದಲ್ಲಿ ‘ಇಸ್ರೋ ಪ್ರಾಧ್ಯಾಪಕ’ ಹುದ್ದೆಗೆ ಅರ್ಜಿ ಆಹ್ವಾನಿಲಸಾಗಿದೆ. ಇದಕ್ಕೆ ಬೇಕಾದ ಅರ್ಹತೆಗಳು ಈ ಕೆಳಗಿನಂತಿದೆ.


ಬೆಂಗಳೂರು, (ಆ.27): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಯೋಗದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಭೌತಶಾಸ್ತ್ರ ವಿಭಾಗದಲ್ಲಿ ‘ಇಸ್ರೋ ಪ್ರಾಧ್ಯಾಪಕ’ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ, ಅನ್ವಯಿಕೆಗಳು, ವಾಯುಮಂಡಲದ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ವಿಜ್ಞಾನಿ, ಎಂಜಿನಿಯರ್‌, ಶಿಕ್ಷಣ ತಜ್ಞರು ಅರ್ಜಿ ಹಾಕಬಹುದು.

Tap to resize

Latest Videos

undefined

ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

ಅರ್ಜಿದಾರರು ಇಸ್ರೋ ಕಾರ್ಯಕ್ರಮದೊಂದಿಗೆ ಸಂವಹನ ನಡೆಸುವ ಉತ್ತಮ ಅನುಭವಗಳನ್ನು ಹೊಂದಿರಬೇಕು. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸುಧಾರಿತ ಸಂಶೋಧನೆ ನಡೆಸುವಲ್ಲಿ ಹಾಗೂ ಪ್ರಕಟಣೆಗಳ ವಿಷಯದಲ್ಲಿ ಸಾಬೀತಾಗಿರುವ ದಾಖಲೆಗಳನ್ನು ಹೊಂದಿರಬೇಕು.

ಆಯ್ಕೆಯಾದ ಅಭ್ಯರ್ಥಿಯು ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ಅನ್ವಯಿಕೆಗಳಲ್ಲಿ ಪ್ರಸಿದ್ಧ ಅಧ್ಯಯನಗಳನ್ನು ನಡೆಸುವ ಸ್ಥಿತಿಯಲ್ಲಿರಬೇಕು. ಬಾಹ್ಯಾಕಾಶ ವಿಜ್ಞಾನ ವಿಭಾಗದಲ್ಲಿ ಉತ್ತಮ ಗುಣಮಟ್ಟದ ಸಂಶೋಧನೆಗಳನ್ನು ಮಾರ್ಗದರ್ಶನ ಮಾಡುವುದು, ಉತ್ತೇಜಿಸುವುದು ಮತ್ತು ಕೈಗೊಳ್ಳುವುದು ಬಾಹ್ಯಾಕಾಶ ಸಂಬಂಧಿತ ಅಧ್ಯಯನಗಳಲ್ಲಿ ಆಸಕ್ತಿಯನ್ನು ಉತ್ತೇಜಿಸುವ ಜವಾಬ್ದಾರಿ ಹಾಗೂ ಜ್ಞಾನ ಪ್ರಸಾರಕ್ಕಾಗಿ ಲೇಖನಗಳನ್ನು ಪ್ರಕಟಿಸುವ ಕಾಳಜಿ ಹೊಂದಿರಬೇಕು ಎಂದು ತಿಳಿಸಿದೆ.

ಆಸಕ್ತರರು ಅರ್ಜಿಗಳನ್ನು ಸೆ.7ರೊಳಗೆ ಡಾ. ಕಂಸಾಲಿ ನಾಗರಾಜ, ಸಂಯೋಜಕರು, ಭೌತಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಬೆಂಗಳೂರು-560 056 ಇಲ್ಲಿಗೆ ಕಳುಹಿಸಬಹುದು.

 ಇ -ಮೇಲ್‌ simvisrochair@gmail.com ಅಥವಾ bu2registrar@gmail.com ಇಲ್ಲಿಗೆ ಕಳುಹಿಸಬಹುದು.

click me!