ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ: ₹4000 ಭತ್ಯೆ!

By Web DeskFirst Published Jul 17, 2019, 7:28 PM IST
Highlights

ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸರ್ಕಾರಿ ವಕೀಲರು, ಜಿಲ್ಲಾ ಸರ್ಕಾರಿ ನ್ಯಾಯವಾದಿ ಜಿಲ್ಲಾ ಪ್ರಾಸಿಕ್ಯೂಟರ್) ಅಥವಾ 20 ವರ್ಷಗಳ ಅನುಭವವುಳ್ಳ ನ್ಯಾಯವಾದಿಗಳ ಹತ್ತಿರ ತರಬೇತಿಗೆ ನಿಯೋಜಿಸಲಾಗುವುದು.
 

ಮೈಸೂರು (ಜು. 17):  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2019-20ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ 4 ವರ್ಷದ ಅವಧಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಮೈಸೂರು ಜಿಲ್ಲೆಯಿಂದ 10 ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.4000/- ತರಬೇತಿ ಭತ್ಯೆಯನ್ನು ಮಂಜೂರು ಮಾಡಲಾಗುವುದು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಿಂದುಳಿದ ವರ್ಗಗಳ ವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿರಬೇಕು, ವಾರ್ಷಿಕ ಆದಾಯ ಮಿತಿ ಪ್ರವರ್ಗ-1ರ ಅಭ್ಯರ್ಥಿಗಳಿಗೆ ರೂ.3,50,000/- ಹಾಗೂ ಪ್ರವರ್ಗ 2ಎ, 3ಎ, 3ಬಿ ಅಭ್ಯರ್ಥಿಗಳಿಗೆ ರೂ.2,50,000/-ದೊಳಗಿರಬೇಕು.

ಅಭ್ಯರ್ಥಿಗಳ ವಯೋಮಿತಿ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷದೊಳಗಿರಬೇಕು. ದಿನಾಂಕ:16.08.2019ಕ್ಕಿಂತ ಹಿಂದೆ ಮೂರು ವರ್ಷ ಅವಧಿಯೊಳಗೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, ಬಾರ್ ಕೌನ್ಸಿಲ್‍ನಲ್ಲಿ ನೋಂದಣಿ ಮಾಡಿಸಿರಬೇಕು.

ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ: https://kannada.asianetnews.com/jobs

ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸರ್ಕಾರಿ ವಕೀಲರು, ಜಿಲ್ಲಾ ಸರ್ಕಾರಿ ನ್ಯಾಯವಾದಿ ಜಿಲ್ಲಾ ಪ್ರಾಸಿಕ್ಯೂಟರ್) ಅಥವಾ 20 ವರ್ಷಗಳ ಅನುಭವವುಳ್ಳ ನ್ಯಾಯವಾದಿಗಳ ಹತ್ತಿರ ತರಬೇತಿಗೆ ನಿಯೋಜಿಸಲಾಗುವುದು.

ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಾ||ಬಾಬು ಜಗಜೀವನರಾಂ ಭವನ, ಆದಿಪಂಪ ರಸ್ತೆ, ನಾರಾಯಣ ಸ್ವಾಮಿ ಬ್ಲಾಕ್, ಪಡುವಾರಹಳ್ಳಿ ಪೂರ್ವ ಬಡಾವಣೆ ಮೈಸೂರು ರವರಿಂದ ಪಡೆÉದು ಆಗಸ್ಟ್ 16 ರ ಸಂಜೆ 5.30 ಗಂಟೆಯೊಳಗೆ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:0821-2342917 ಸಂಪರ್ಕಿಸಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

click me!