ನಿರುದ್ಯೋಗಿಗಳಿಗೆ ಸಹಾಯಧನ! ಅರ್ಜಿ ಆಹ್ವಾನ

Published : Jul 17, 2019, 06:47 PM IST
ನಿರುದ್ಯೋಗಿಗಳಿಗೆ ಸಹಾಯಧನ! ಅರ್ಜಿ ಆಹ್ವಾನ

ಸಾರಾಂಶ

ರೂ. 25 ಲಕ್ಷಗಳವರೆಗಿನ ಬಂಡವಾಳ ಹೂಡಿಕೆಯೊಂದಿಗೆ ಗಾರ್ಮೆಂಟ್ ಘಟಕ ಸ್ಥಾಪಿಸಲು ಶೇ.90ರಷ್ಟು ಸಹಾಯಧನ! ಆರಂಭಿಕ ಉದ್ಯಮಿಗಳನ್ನಾಗಿ ಪ್ರೋತ್ಸಾಹಿಸಲು ಸಹಾಯಧನ

ಮೈಸೂರು (ಜು 17): ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ 2019-20ನೇ ಸಾಲಿನ ನೂತನ ಜವಳಿ ನೀತಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ – ಯುವತಿಯರನ್ನು ಆರಂಭಿಕ ಉದ್ಯಮಿಗಳನ್ನಾಗಿ ಪ್ರೋತ್ಸಾಹಿಸಲು ಸಹಾಯಧನ ನೀಡಲಾಗುವುದು.

ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ: https://kannada.asianetnews.com/jobs

ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 10 ಅತಿ ಸಣ್ಣ (ಮೈಕ್ರೋ) ಗಾರ್ಮೆಂಟ್ ಘಟಕಗಳನ್ನು ಪ್ಲಾಂಟ್ ಅಂಡ್ ಮಿಷನರಿ ಮೇಲೆ ಗರಿಷ್ಠ ರೂ. 25 ಲಕ್ಷಗಳವರೆಗಿನ ಬಂಡವಾಳ ಹೂಡಿಕೆಯೊಂದಿಗೆ ಸ್ಥಾಪಿಸಲು ಶೇ.90ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ.

ಆಸಕ್ತರು ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 0821- 2441353/2422322 ನ್ನು ಸಂಪರ್ಕಿಸುವುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
click me!

Recommended Stories

ರೈಲ್ ಇಂಡಿಯಾ ನೇಮಕಾತಿ: 154 ಹುದ್ದೆಗಳಿಗೆ ಅರ್ಜಿ ಆಹ್ವಾನ, ತಕ್ಷಣವೇ ಅರ್ಜಿ ಸಲ್ಲಿಸಿ
ಕೋಡಿಂಗ್, ನಿರಂತರ ಮೀಟಿಂಗ್ ನಡೆಸಿ ಬೇಸತ್ತು 30 ಲಕ್ಷ ರೂ ವೇತನದ ಉದ್ಯೋಗ ತೊರೆದ ಚೆನ್ನೈ ಟೆಕ್ಕಿ!