KIMSನಲ್ಲಿ ವಿವಿಧ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Kannadaprabha News   | Asianet News
Published : May 01, 2020, 12:00 PM IST
KIMSನಲ್ಲಿ ವಿವಿಧ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾರಾಂಶ

ರಿಸರ್ಚ್‌ ಅಸಿಸ್ಟೆಂಟ್‌(ಮೆಡಿಕಲ್‌), ರಿಸರ್ಚ್‌ ಅಸಿಸ್ಟೆಂಟ್‌ (ನಾನ್‌-ಮೆಡಿಕಲ್‌), ರಿಸರ್ಚ್‌ ಅಸಿಸ್ಟೆಂಟ್‌, ಲ್ಯಾಬೊರೇಟರಿ ಟೆಕ್ನಿಷಿಯನ್‌ ಹುದ್ದೆಗಳ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ| ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಅಗತ್ಯವಾದ ಎಲ್ಲ ಮೂಲ ದಾಖಲಾತಿಗಳ ಜೊತೆಗೆ 2 ಸೆಟ್‌ ಝೆರಾಕ್ಸ್‌ ಪ್ರತಿಗಳು ಮತ್ತು 2 ಪಾಸ್‌ಪೋರ್ಟ್‌ ಅಳ​ತೆ​ಯ ಫೋಟೋಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಮೇ 05ರ ಸಂಜೆ 05 ಗಂಟೆ ಒಳಗೆ ನೇರವಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು| 

ಕೊಪ್ಪಳ(ಮೇ.01):  ಕೋವಿಡ್‌-19 ಅಂಗವಾಗಿ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿಆರ್‌ಡಿಎಲ್‌ ಲ್ಯಾಬ್‌ ಸ್ಥಾಪಿಸಿದ್ದು, ಲ್ಯಾಬ್‌ನ ನಿರ್ವಹಣೆಗಾಗಿ ರಿಸರ್ಚ್‌ ಅಸಿಸ್ಟೆಂಟ್‌(ಮೆಡಿಕಲ್‌), ರಿಸರ್ಚ್‌ ಅಸಿಸ್ಟೆಂಟ್‌ (ನಾನ್‌-ಮೆಡಿಕಲ್‌), ರಿಸರ್ಚ್‌ ಅಸಿಸ್ಟೆಂಟ್‌, ಲ್ಯಾಬೊರೇಟರಿ ಟೆಕ್ನಿಷಿಯನ್‌ ಹುದ್ದೆಗಳಿಗಾಗಿ ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಈ ಹುದ್ದೆಗಳಿಗೆ ವೇತನವನ್ನು ಎಸ್‌ಡಿಆರ್‌ಎಫ್‌ ನಿಧಿಯಿಂದ ಭರಿಸಲಾಗುವುದು. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಅಗತ್ಯವಾದ ಎಲ್ಲ ಮೂಲ ದಾಖಲಾತಿಗಳ ಜೊತೆಗೆ 2 ಸೆಟ್‌ ಝೆರಾಕ್ಸ್‌ ಪ್ರತಿಗಳು ಮತ್ತು 2 ಪಾಸ್‌ಪೋರ್ಟ್‌ ಅಳ​ತೆ​ಯ ಫೋಟೋಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಮೇ 05ರ ಸಂಜೆ 05 ಗಂಟೆ ಒಳಗೆ ನೇರವಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. 

ಮನೆಯಿಂದ ಆಚೆ ಬಂದವರಿಗೆ ಸ್ಪೆಷಲ್ ಪಿಪಿಇ ಕಿಟ್ ಹಾಕಿದ ಕೊಪ್ಪಳ ಪೊಲೀಸರು..!

ಮೇ. 06ರಂದು ನೇರ ಸಂದರ್ಶನಕ್ಕೆ ಹಾಜರಾಗಲು ಬಯಸುವ ಅಭ್ಯರ್ಥಿಗಳು ಬೆಳಗ್ಗೆ 09 ಗಂಟೆಗೆ ಆಯ್ಕೆ ಸಮಿತಿ ಮುಂದೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ www.kimskoppal.kar.nic.in  ವೀಕ್ಷಿಸಬಹುದು ಎಂದು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
click me!

Recommended Stories

2026ರಲ್ಲಿ 40 ಕೆಲಸ ನುಂಗಲಿದೆ ಎಐ, ಈ ಪಟ್ಟಿಯಲ್ಲಿ ನಿಮ್ಮ ನೌಕರಿ ಇದೆಯಾ ಚೆಕ್ ಮಾಡಿ
ಕೆನರಾ ಬ್ಯಾಂಕ್ ಗ್ರಾಹಕರಿಗೆ ₹3 ಕೋಟಿ ಪಂಗನಾಮ; ಗ್ರಾಹಕರ ಹೆಸರಲ್ಲಿ ಸಾಲ ಪಡೆದು ಮ್ಯಾನೇಜರ್ ಎಸ್ಕೇಪ್!