ಮಲ್ಕೊಂಡ್ರೆ 1 ಲಕ್ಷ ರೂ. ಸಂಬಳ: ಅಪ್ಲಿಕೇಶನ್ ಹಾಕೋದು ತುಂಬ ಸರಳ!

Published : Nov 29, 2019, 12:36 PM ISTUpdated : Nov 29, 2019, 12:37 PM IST
ಮಲ್ಕೊಂಡ್ರೆ 1 ಲಕ್ಷ ರೂ. ಸಂಬಳ: ಅಪ್ಲಿಕೇಶನ್ ಹಾಕೋದು ತುಂಬ ಸರಳ!

ಸಾರಾಂಶ

9 ಗಂಟೆ ಮಲಗಿದರೆ ಬರೋಬ್ಬರಿ 1 ಲಕ್ಷ ರೂ. ಸಂಬಳ| ಇಂತಹ ಆಫರ್ ಅಸ್ತಿತ್ವದಲ್ಲಿರೋದು ನಿಜ| ಮಲಗಲು ಬರೋಬ್ಬರಿ 1 ಲಕ್ಷ ರೂ. ವೇತನ ನೀಡುವ ವೇಕ್‌ಫಿಟ್.ಕೋ ಕಂಪನಿ| ಪೈಜಾಮ ಹಾಕಿಕೊಂಡು ಮಲಗಬೇಕು ಎಂಬುದಷ್ಟೇ ಅರ್ಜಿ ಸಲ್ಲಿಸಲು ಇರುವ ಅರ್ಹತೆ| ಮಲಗುವ ಹವ್ಯಾಸದಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಅಧ್ಯಯನ|

ನವದೆಹಲಿ(ನ.29): ಕೆಲಸದ ವೇಳೆ ನಿದ್ದೆ ಮಂಪರು ಬಂದರೆ ಸಿನಿಯರ್'ಗಳಿಂದ ಬೈಯಿಸಿಕೊಳ್ಳೋದು ಗ್ಯಾರಂಟೀ. ಮಧ್ಯಾಹ್ನದ ಊಟದ ನಂತರ ಒಂದು ಜಂಪ್ ನಿದ್ದೆ ಮಾಡಿ ಏಳೋಣ ಅಂದ್ರೆ ಪಕ್ಕದಲ್ಲೇ ಕೂರವ ಮೇಲಾಧಿಕಾರಿ ಮುಖ ಕೆಂಪಾಗಿರುತ್ತದೆ.

ಅಂತದ್ದರಲ್ಲಿ ಏನೂ ಕೆಲಸವಿಲ್ಲದೇ ಕೇವಲ ಮಲಗಿಕೊಳ್ಳಲೆಂದೇ ಕಂಪನಿಯೊಂದು ನಿಮಗೆ 1 ಲಕ್ಷ ರೂ. ಸಂಬಳ ನೀಡುವ ಆಫರ್ ನೀಡಿದರೆ? ಅಚ್ಚರಿಪಡಬೇಡಿ, ಇಂತದ್ದೊಂದು ಆಫರ್ ನಿಜಕ್ಕೂ ಅಸ್ತಿತ್ವದಲ್ಲಿದೆ.

ವೇಕ್‌ಫಿಟ್.ಕೋ ಎಂಬ ಕಂಪನಿ ರಾತ್ರಿ ವೇಳೆ ಬರೋಬ್ಬರಿ 9 ಗಂಟೆ ಮಲಗುವವರಿಗೆ ತಿಂಗಳಿಗೆ 1 ಲಕ್ಷ ರೂ. ಸಂಬಳ ನೀಡುವುದಾಗಿ ಘೋಷಿಸಿದೆ. ದಿನಕ್ಕೆ 9 ಗಂಟೆಯಂತೆ ವಾರದಲ್ಲಿ 100 ಗಂಟೆ ಮಲಗುವುದು ಉದ್ಯೋಗಿಯ ಕೆಲಸ.

ಈ ಕುರಿತು ಮಾಹಿತಿ ನೀಡಿರುವ ಕಂಪನಿಯ ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ, ಕಂಪನಿ ಆರೋಗ್ಯಕರವಾಗಿ ನಿದ್ರಿಸುವ ವ್ಯಕ್ತಿಗಳ ಹುಟುಕಾಟದಲ್ಲಿದ್ದು, ದಿನವೊಂದಕ್ಕೆ ಬರೋಬ್ಬರಿ 9 ಗಂಟೆಗಳ ಕಾಲ ಮಲಗುವ ಹವ್ಯಾಸವಿರುವವರು ಅರ್ಜಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಗಾಂಜಾ ಸೇವಿಸಿದ್ರೆ 2 ಲಕ್ಷ ಸಂಬಳ: ಕಂಪನಿಯ ವಿಚಿತ್ರ ಆಫರ್!

ಅರ್ಹತೆ:

ಮಲಗುವ ವೇಳೆ ಪೈಜಾಮ ಹಾಕಿಕೊಂಡು ಮಲಗಬೇಕು ಎಂಬುದಷ್ಟೇ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಯಾಗಿದೆ.

ಮನುಷ್ಯನ ಮಲಗುವ ಹವ್ಯಾಸ ಮತ್ತು ಅದರಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ಅಧ್ಯಯನ ಮಾಡುವುದು ವೇಕ್‌ಫಿಟ್.ಕೋ ಕಂಪನಿಯ ಉದ್ದೇಶ ಎನ್ನಲಾಗಿದೆ.

PREV
click me!

Recommended Stories

ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!
ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ