India Post Office Recruitment 2022: ಬರೋಬ್ಬರಿ 38,926 ಹುದ್ದೆಗಳಿಗೆ ನೇಮಕಾತಿ

By Suvarna NewsFirst Published May 3, 2022, 12:37 PM IST
Highlights

ಭಾರತೀಯ ಅಂಚೆ ಇಲಾಖೆ ಖಾಲಿ ಇರುವ 38,926  ಗ್ರಾಮೀಣ ಅಂಚೆ ಸೇವಕ   ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.   ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಜೂನ್ 5 ಕೊನೆಯ ದಿನಾಂಕವಾಗಿದೆ. 

ಬೆಂಗಳೂರು(ಮೇ.3): ಭಾರತೀಯ ಅಂಚೆ ಇಲಾಖೆ (India Post Office) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ದೇಶದಾದ್ಯಂತ ಬರೋಬ್ಬರಿ  38,926  ಗ್ರಾಮೀಣ ಅಂಚೆ ಸೇವಕ (  Gramin Dak Sevaks ) ಹುದ್ದೆಗಳು ಖಾಲಿ ಇದ್ದು, ಇದರಲ್ಲಿ  ಬಿಪಿಎಂ (Branch Postmaster), ಎಬಿಪಿಎಂ (Assistant Branch Postmaster) ಅಂಚೆ ಸೇವಕ (Dak Sevak) ಹುದ್ದೆಗಳು ಸೇರಿವೆ. ಕರ್ನಾಟಕದಲ್ಲಿ 2410 ಹುದ್ದೆಗಳು ಖಾಲಿ ಇದೆ.  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಜೂನ್ 5 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು https://indiapostgdsonline.gov.in/ ಗೆ ಭೇಟಿ ನೀಡಲು ಕೋರಲಾಗಿದೆ. 

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಅಂಚೆ ಇಲಾಖೆ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ಅಥವಾ ಸಂಸ್ಥೆಯಿಂದ  10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅದರಲ್ಲೂ ಗಣಿತಶಾಸ್ತ್ರ ಮತ್ತು  ಇಂಗ್ಲಿಷ್ ನಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ: ಭಾರತೀಯ ಅಂಚೆ ಇಲಾಖೆ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 18 ರಿಂದ 40 ವರ್ಷದ ಒಳಗಿರಬೇಕು.

SAI Recruitment 2022: ಕ್ರೀಡಾ ಪ್ರಾಧಿಕಾರದಿಂದ ಯುವ ವೃತ್ತಿಪರರ ನೇಮಕಾತಿ

ಅರ್ಜಿ ಶುಲ್ಕ: ಭಾರತೀಯ ಅಂಚೆ ಇಲಾಖೆ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ₹100 ಅರ್ಜಿ ಶುಲ್ಕ ಪಾವತಿಸಬೇಕು. SC/ST, PwD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. 

ಆಯ್ಕೆ ಪ್ರಕ್ರಿಯೆ: ಭಾರತೀಯ ಅಂಚೆ ಇಲಾಖೆ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. 

ವೇತನ ವಿವರ: ಭಾರತೀಯ ಅಂಚೆ ಇಲಾಖೆ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ಮಾಸಿಕ ವೇತನ ದೊರೆಯಲಿದೆ. ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗೆ ₹12,000 ಮಿಕ್ಕುಳಿದ ಸಹಾಯಕ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್  ಮತ್ತು ಅಂಚೆ ಸೇವಕ ಹುದ್ದೆಗಳಿಗೆ ₹10,000 ವೇತನ ದೊರೆಯಲಿದೆ.

India's Unemployment Rate ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಳ! 

ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಉದ್ಯೋಗವಕಾಶ: ಭಾರತೀಯ ಕ್ರೀಡಾ ಪ್ರಾಧಿಕಾರವು (Sports Authority of India - SAI) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ.  ಒಟ್ಟು 50 ಯುವ ವೃತ್ತಿಪರ (Young Professional) ಹುದ್ದೆಗಳು ಖಾಲಿ ಇದ್ದು,  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಅರ್ಜಿ ಸಲ್ಲಿಸಲು ಮೇ. 12 ಕೊನೆಯ ದಿನಾಂಕವಾಗಿದೆ.  ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‌ತಾಣ sportsauthorityofindia.nic.in ಗೆ ಭೇಟಿ ನೀಡಲು ಕೋರಲಾಗಿದೆ. ಅರ್ಜಿ ಸಲ್ಲಿಸಬೇಕಾದ  email ವಿಳಾಸ: jobs.saibangalore@gmail.com

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ಯಾವುದೇ ವಿಭಾಗದಲ್ಲಿ ಪದವಿ/ ಸ್ನಾತಕೋತ್ತರ ಪದವಿ/ MBA/ ಕ್ರೀಡಾ ವಿಭಾಗದ ಡಿಪ್ಲೊಮಾದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು. ಜೊತೆಗೆ ಆಯಾಯ ಕ್ಷೇತ್ರದಲ್ಲಿ 1 ವರ್ಷಗಳ ಅನುಭವ ಹೊಂದಿರಬೇಕು.

click me!