ಆಸ್ಟ್ರೇಲಿಯಾ- ಭಾರತ ದ್ವಿಪಕ್ಷೀಯ ಆರ್ಥಿಕ ಒಪ್ಪಂದ, 5 ವರ್ಷಗಳಲ್ಲಿ 10 ಲಕ್ಷ ಉದ್ಯೋಗ

By Suvarna News  |  First Published Apr 3, 2022, 3:40 PM IST

ಆಸ್ಟ್ರೇಲಿಯಾ ಜೊತೆ ಭಾರತ ದ್ವಿಪಕ್ಷೀಯ ಆರ್ಥಿಕ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಮುಂದಿನ 4 ರಿಂದ 5 ವರ್ಷಗಳಲ್ಲಿ ಭಾರತದಲ್ಲಿ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದೆ ಎನ್ನಲಾಗಿದೆ.


ನವದೆಹಲಿ(ಎ.3): ಮುಂದಿನ 4 ರಿಂದ 5 ವರ್ಷಗಳಲ್ಲಿ ಭಾರತದಲ್ಲಿ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Commerce and Industry Minister Piyush Goyal) ಶನಿವಾರ ಹೇಳಿದ್ದಾರೆ. 

ಆಸ್ಟ್ರೇಲಿಯಾದೊಂದಿಗಿನ ಹೊಸ ವ್ಯಾಪಾರ ಒಪ್ಪಂದವು ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಪ್ರಸ್ತುತ $27 ಶತಕೋಟಿಯಿಂದ ಸುಮಾರು $45-50 ಶತಕೋಟಿಗೆ ತರುವ ನಿರೀಕ್ಷೆಯಿದೆ. ಅಲ್ಲದೆ ಮುಂದಿನ 4 ರಿಂದ 5 ವರ್ಷಗಳಲ್ಲಿ ಭಾರತದಲ್ಲಿ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸರ್ಕಾರ ನಿರೀಕ್ಷಿಸುತ್ತದೆ ಎಂದು ಹೇಳಿದರು. 

Latest Videos

undefined

 

Addressed a joint press conference with my Australian counterpart after signing of the .

This historic agreement covers a wide array of goods & services with both sides looking forward towards a comprehensive deal ahead.

📹 https://t.co/igik9LFxLH pic.twitter.com/SVgCrmkt5C

— Piyush Goyal (@PiyushGoyal)

ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ (Economic Cooperation and Trade Agreement - IndAus ECTA) ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಆಸ್ಟ್ರೇಲಿಯಾದ ಪ್ರತಿನಿಧಿ ಡಾನ್ ಟೆಹಾನ್ (Dan Tehan) ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಸಮ್ಮುಖದಲ್ಲಿ ವರ್ಚುವಲ್ ಸಮಾರಂಭದಲ್ಲಿ ಸಹಿ ಹಾಕಿದರು.

Slush Field Race ಕತ್ನಳ್ಳಿ ಜಾತ್ರೆ ಕೆಸರು ಗದ್ದೆ ಓಟದಲ್ಲಿ ಗೆದ್ದು ಬೀಗಿದ ಮುಸ್ಲಿಂ ಯುವಕ!

ಕೇಂದ್ರ ಸಚಿವ ಗೋಯಲ್ ಅವರು ಒಪ್ಪಂದಕ್ಕೆ ಸಹಿ ಹಾಕಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತಕ್ಕೆ ಇದೊಂದು ಐತಿಹಾಸಿಕ ದಿನವಾಗಿದೆ. ಏಕೆಂದರೆ ಇದು ಒಂದು ದಶಕದಲ್ಲಿ ದೊಡ್ಡ ಅಭಿವೃದ್ಧಿ ಹೊಂದಿದ ದೇಶದೊಂದಿಗೆ ಮಾಡಿಕೊಂಡ ಭಾರತದ ಮೊದಲ ಒಪ್ಪಂದವಾಗಿದೆ. 

ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಭಾರತ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬಹುದು ಎಂದು ಜನ ನಿರೀಕ್ಷಿಸಿರಲಿಲ್ಲ. ಭಾರತೀಯರು ಉತ್ತಮ ಸಂಬಂಧ ಹೊಂದಿರುವ ರಾಷ್ಟ್ರದೊಂದಿಗೆ ಈ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಎರಡೂ ದೇಶಗಳು ವಿವಿಧ ಕ್ಷೇತ್ರದಲ್ಲಿ ಪರಸ್ಪರ ಸಹಾಯ ಮಾಡಲಿವೆ ಎಂದು ಹೇಳಿದರು.

ಮುಂದಿನ 4 ರಿಂದ 5 ವರ್ಷಗಳಲ್ಲಿ ಭಾರತದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಗೋಯಲ್ ಹೇಳಿದರು. ನಾವು ದ್ವಿಪಕ್ಷೀಯ ಸಂಬಂಧಗಳ ವ್ಯಾಪ್ತಿಯನ್ನು ವಿಸ್ತರಿಸಿದ್ದೇವೆ. ಭಾರತವು ಹಲವಾರು ಕ್ಷೇತ್ರಗಳಲ್ಲಿ ಸೇವೆಗಳಿಗೆ ಆಸ್ಟ್ರೇಲಿಯಾ ಪ್ರವೇಶವನ್ನು ನೀಡಿದೆ. 

NIMHANS RECRUITMENT 2022 ಖಾಲಿ ಇರುವ 9 ಹುದ್ದೆಗಳಿಗೆ ನೇಮಕಾತಿ

ಮುಂಬರುವ ವರ್ಷಗಳಲ್ಲಿ ಭಾರತೀಯ ಅಡುಗೆಯವರು ಮತ್ತು ಯೋಗ ಬೋಧಕರಿಗೆ ಅನೇಕ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಆಸ್ಟ್ರೇಲಿಯಾಕ್ಕೆ (Australia) ಭೇಟಿ ನೀಡುವ ನಮ್ಮ ಹುಡುಗರು ಮತ್ತು ಹುಡುಗಿಯರಿಗೆ ಶಿಕ್ಷಣದ ನಂತರದ ಕೆಲಸದ ವೀಸಾಗಳು ಸಹ ಈ ಒಪ್ಪಂದದ ಭಾಗವಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಗೋಯಲ್ ತಿಳಿಸಿದರು.

ಒಂದು ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾದಲ್ಲಿ ವಾಸ ಹಾಗೂ ಅಧ್ಯಯನ ಮಾಡುತ್ತಿದ್ದಾರೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೆಲಸ ಮತ್ತು ರಜೆಯ ವೀಸಾ ವ್ಯವಸ್ಥೆಯ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಭಾರತೀಯ ವಿದ್ಯಾರ್ಥಿಗಳಿಗೆ, ವಿಶೇಷವಾಗಿ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಪದವೀಧರರಿಗೆ, ಎರಡು ಮತ್ತು ನಾಲ್ಕು ವರ್ಷಗಳ ನಡುವಿನ ಅಧ್ಯಯನದ ನಂತರದ ಕೆಲಸದ ವೀಸಾ ಲಭ್ಯವಾಗಲಿದೆ ಎಂದರು.

click me!