ಇಸಿಐಎಲ್ ಖಾಲಿ ಇರುವ ವಿವಿಧ ವಿಭಾಗದ ಕಿರಿಯ ತಂತ್ರಜ್ಞ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಎಪ್ರಿಲ್ 11 ಕೊನೆಯ ದಿನಾಂಕವಾಗಿದೆ.
ಬೆಂಗಳೂರು (ಎ.2): ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (Electronics Corporation of India Limited- ECIL) ಖಾಲಿ ಇರುವ ವಿವಿಧ ವಿಭಾಗದ ಕಿರಿಯ ತಂತ್ರಜ್ಞ (Junior Technician) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 1625 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಲು ಎಪ್ರಿಲ್ 11 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ecil.co.in ಗೆ ಭೇಟಿ ನೀಡಲು ಕೋರಲಾಗಿದೆ.
ಒಟ್ಟು 1625 ಹುದ್ದೆಗಳ ವಿವರ ಇಂತಿದೆ:
ಕಿರಿಯ ತಂತ್ರಜ್ಞ (ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್): 814 ಹುದ್ದೆಗಳು
ಕಿರಿಯ ತಂತ್ರಜ್ಞ (ಎಲೆಕ್ಟ್ರಿಷಿಯನ್): 184 ಹುದ್ದೆಗಳು
ಕಿರಿಯ ತಂತ್ರಜ್ಞ (ಫಿಟ್ಟರ್): 627 ಹುದ್ದೆಗಳು
NIT DELHI RECRUITMENT 2022 ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ನೇಮಕಾತಿ
ಶೈಕ್ಷಣಿಕ ವಿದ್ಯಾರ್ಹತೆ: ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ವಿಭಾಗದ ಕಿರಿಯ ತಂತ್ರಜ್ಞ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಮಾಡಿರಬೇಕು. ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ / ಎಲೆಕ್ಟ್ರಿಷಿಯನ್ / ಫಿಟ್ಟರ್ ಟ್ರೇಡ್‌ಗಳಲ್ಲಿ ITI ಮಾಡಿರಬೇಕು.
ವಯೋಮಿತಿ: ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ವಿಭಾಗದ ಕಿರಿಯ ತಂತ್ರಜ್ಞ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ಆಗಿರಬೇಕು. ವರ್ಗಾನುಸಾರ ವಯೋಮಿತಿ ಸಡಿಲಿಕೆ ಇದೆ.
ವೇತನ ವಿವರ: ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ವಿಭಾಗದ ಕಿರಿಯ ತಂತ್ರಜ್ಞ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ₹20,480 ರಿಂದ ₹24,780 ವೇತನ ದೊರೆಯಲಿದೆ.
CPCL Recruitment 2022 ಚೆನ್ನೈನ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ
ಕುದುರೆಮುಖ ಕಬ್ಬಿಣ ಕಾರ್ಖಾನೆಯಲ್ಲಿ ಎಂಜಿನಿಯರ್ ಪದವೀಧರರ ನೇಮಕಾತಿ: ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (Kudremukh Iron Ore Company Limited -KIOCL) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಸಹಾಯಕ ಸಿವಿಲ್ ಎಂಜಿನಿಯರ್, ಮೆಕ್ಯಾನಿಕಲ್ ಎಂಜಿನಿಯರ್ ಸೇರಿ ಒಟ್ಟು 9 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 11 ಮತ್ತು 12ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಆಸಕ್ತರು ಇಲಾಖೆಯ ಅಧಿಕೃತ ವೆಬ್‌ತಾಣ https://kioclltd.in/ ಗೆ ಭೇಟಿ ನೀಡಲು ಕೋರಲಾಗಿದೆ.
ಒಟ್ಟು 9 ಹುದ್ದೆಗಳ ಮಾಹಿತಿ ಇಂತಿದೆ:
ಮೆಕ್ಯಾನಿಕಲ್ ಇಂಜಿನಿಯರ್: 4 ಹುದ್ದೆಗಳು
ಎಲೆಕ್ಟ್ರಿಕಲ್ ಇಂಜಿನಿಯರ್ : 2 ಹುದ್ದೆಗಳು
ಇನ್ಸ್ಟ್ರುಮೆಂಟೇಶನ್ ಮತ್ತು ಕಂಟ್ರೋಲ್ ಇಂಜಿನಿಯರ್ : 1 ಹುದ್ದೆ
ಸಹಾಯಕ ಸಿವಿಲ್ ಇಂಜಿನಿಯರ್ : 2 ಹುದ್ದೆಗಳು
ಸಂದರ್ಶನ ನಡೆಯುವ ಸ್ಥಳ: ಎಲೆಕ್ಟ್ರಿಕಲ್ ಇಂಜಿನಿಯರ್ ಮತ್ತು ಇನ್ಸ್ಟ್ರುಮೆಂಟೇಶನ್ ಮತ್ತು ಕಂಟ್ರೋಲ್ ಇಂಜಿನಿಯರ್ ಹುದ್ದೆಗೆ ಎಪ್ರಿಲ್ 11 ರಂದು ಸಂದರ್ಶನ ನಡೆಯಲಿದ್ದು, ಮಿಕ್ಕ ಹುದ್ದೆಗೆ ಎಪ್ರಿಲ್ 12 ರಂದು ನಡೆಯಲಿದೆ.
KIOCL Limited, 2nd Block, Koramangala, Bengaluru – 560034, Karnataka