ಕರ್ನಾಟಕದ 22,000 ಸೇರಿ ದೇಶದಲ್ಲಿ 5 ಲಕ್ಷ ಪೊಲೀಸ್ ಹುದ್ದೆ ಖಾಲಿ!

By Web DeskFirst Published Jul 8, 2019, 9:13 AM IST
Highlights

ಕರ್ನಾಟಕದ 22,000 ಸೇರಿ ದೇಶದಲ್ಲಿ 5 ಲಕ್ಷ ಪೊಲೀಸ್ ಹುದ್ದೆ ಖಾಲಿ| ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು, 1.29 ಲಕ್ಷ ಹುದ್ದೆಗಳು ಭರ್ತಿ ಆಗದೇ ಉಳಿದಿವೆ

ನವದೆಹಲಿ[ಜು.08]: ಕರ್ನಾಟಕದಲ್ಲಿ 22,000 ಹುದ್ದೆಗಳು ಸೇರಿದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ 5.28 ಲಕ್ಷ ಪೊಲೀಸ್ ಹುದ್ದೆಗಳು ಖಾಲಿ ಉಳಿದಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 1.29 ಲಕ್ಷ ಹುದ್ದೆಗಳು ಭರ್ತಿ ಆಗದೇ ಉಳಿದಿವೆ. ಬಿಹಾರದಲ್ಲಿ 50,000, ಪಶ್ಚಿಮ ಬಂಗಾಳದಲ್ಲಿ 49,000, ತೆಲಂಗಾಣದಲ್ಲಿ 76,000, ಮಹಾರಾಷ್ಟ್ರದಲ್ಲಿ 26,000, ಮಧ್ಯಪ್ರದೇಶದಲ್ಲಿ 22,000, ತಮಿಳುನಾಡಲ್ಲಿ 22,000 ಹುದ್ದೆ ಬಾಕಿ ಉಳಿದಿದೆ. ಆದರೆ ನಾಗಾಲ್ಯಾಂಡ್‌ನಲ್ಲಿ ಅನುಮೋದಿತ 21ಸಾವಿರ ಹುದ್ದೆಗಳಿದ್ದರೆ, ಅಲ್ಲಿ ಹೆಚ್ಚುವರಿಯಾಗಿ 941 ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.

ಒನ್‌ಲೈನ್ ಇತ್ತೀಚೆಗಷ್ಟೇ ತೆಲಂಗಾಣ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸಸಿ ನೆಡುವಾಗ ಟಿಆರ್‌ಎಸ್ ಶಾಸಕನ ಸೋದರನಿಂದ ಹಲ್ಲೆಗೊಳಗಾದ ಮಹಿಳಾ ಅರಣ್ಯಾಧಿಕಾರಿ ಅನಿತಾಗೆ ಸಶಸ್ತ್ರ ಪೊಲೀಸರ ಭದ್ರತೆ

click me!