KSRTC ನೌಕರರಿಗೆ ಬಂಪರ್ ಆಫರ್

Published : Jun 30, 2019, 08:25 AM ISTUpdated : Jun 30, 2019, 08:26 AM IST
KSRTC ನೌಕರರಿಗೆ ಬಂಪರ್ ಆಫರ್

ಸಾರಾಂಶ

KSRTC ನೌಕರರಿಗೆ ಕರ್ನಾಟಕ ಸರ್ಕಾರ ಬಂಪರ್ ಆಫರ್ ನೀಡಿದೆ. ಫ್ಯಾಮಿಲಿ ಪ್ಲಾನಿಂಗ್ ಗೆ ಒಳಪಟ್ಟರೆ ಸರ್ಕಾರದಿಂದ ಭರ್ಜರಿ ಕೊಡುಗೆ ದೊರೆಯುತ್ತದೆ. 

ಬೆಂಗಳೂರು (ಜೂ.30) : ರಾಜ್ಯ ಸರ್ಕಾರದ ಕುಟುಂಬ ಯೋಜನೆಯನ್ನು ಉತ್ತೇಜಿಸಲು ರಾಜ್ಯ ರಸ್ತೆ ಸಾರಿಗೆ ನಿಗಮವು ನೌಕರರಿಗೆ ‘ವಿಶೇಷ ವೇತನ ಬಡ್ತಿ’ ನೀಡುವುದಕ್ಕೆ ಮುಂದಾಗಿದೆ. 

ಒಂದು ಅಥವಾ ಎರಡು ಮಕ್ಕಳನ್ನು ಹೊಂದಿದ್ದು, ಎರಡು ವರ್ಷದಿಂದ ಈಚೆಗೆ ಸಂತಾಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಸಂಸ್ಥೆಯ ನೌಕರರು (ಪತಿ ಅಥವಾ ಪತ್ನಿ) ಈ ವಿಶೇಷ ವೇತನ ಬಡ್ತಿಗೆ ಅರ್ಹರಾಗಿರುತ್ತಾರೆ. 

ಚಿಕಿತ್ಸೆ ಪಡೆದ ದಿನಾಂಕದಿಂದ  ವಿಶೇಷ ವೇತನ ಬಡ್ತಿ ಅನ್ವಯವಾಗಲಿದೆ. ಅದು ಅವರ ಹುದ್ದೆಯ ವೇತನ ಶ್ರೇಣಿಯ ವಾರ್ಷಿಕ ವೇತನ ಬಡ್ತಿ ಆಧರಿಸಿರಲಿದ್ದು, ತಮ್ಮ ಪೂರ್ಣ ಸೇವಾವಧಿಗೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಲಾಗಿದೆ. ನೌಕರರು ಮಾತ್ರವಲ್ಲದೇ ತರಬೇತಿ ಹಂತದಲ್ಲಿರುವ ಸಿಬ್ಬಂದಿಯೂ ಅರ್ಜಿಸಲ್ಲಿಸಬಹುದಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಆದೇಶದಲ್ಲಿ ತಿಳಿಸಿದ್ದಾರೆ.

PREV
click me!

Recommended Stories

ಬೆಂಗಳೂರು ರೈಲ್ವೆ ಪರೀಕ್ಷೇಲಿ ಕನ್ನಡಕ್ಕೆ ಅಧಿಕಾರಿಗಳ ಕೊಕ್‌
ಕೇಂದ್ರ ಸರ್ಕಾರದ ಉದ್ಯೋಗ ಬಯಸುತ್ತಿರುವವರಿಗೆ ಸಂತಸದ ಸುದ್ದಿ, ಬರೋಬ್ಬರಿ 25,487 ಹುದ್ದೆಗಳಿಗೆ ಅರ್ಜಿ ಆಹ್ವಾನ