ಕೆಎಸ್ಆರ್‌ಟಿಸಿ ನೇಮಕಾತಿ : ಚಾಲಕ, ನಿರ್ವಾಹಕ ಹುದ್ದೆ ಭರ್ತಿ

By Web Desk  |  First Published Jun 20, 2019, 2:55 PM IST

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) 1500 ಚಾಲಕ, ನಿರ್ವಾಹಕ ಹುದ್ದೆಗಳಿಗೆ ಶೀಘ್ರದಲ್ಲೇ ಅರ್ಜಿ ಆಹ್ವಾನಿಸಲಿದೆ. 


ಬೆಂಗಳೂರು, (ಜೂ.20): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ಶೀಘ್ರದಲ್ಲಿಯೇ 1500 ಹುದ್ದೆಗಳನ್ನು ಭರ್ತಿ ಮಾಡಲಿದೆ. 

2019ರ ನೇಮಕಾತಿ ಆದೇಶ ಶೀಘ್ರವೇ ಪ್ರಕಟವಾಗಲಿದ್ದು ಚಾಲಕ, ನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.  ಕೆಎಸ್ಆರ್‌ಟಿಸಿ ವೆಬ್‌ಸೈಟ್ ಮೂಲಕ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 

Tap to resize

Latest Videos

undefined

ಆರ್ಥಿಕ ಇಲಾಖೆ ಒಪ್ಪಿಗೆ ಸಿಕ್ಕ ತಕ್ಷಣ ನೇಮಕಾತಿ ಆದೇಶವನ್ನು ಹೊರಡಿಸಲಾಗುತ್ತದೆ. ಚಾಲಕ ಮತ್ತು ನಿರ್ವಾಹಕ ಹುದ್ದೆಗೆ 11,640 ರಿಂದ 15, 700 ರು. ವರೆಗೆ ವೇತನ ಸಿಗುವ ನಿರೀಕ್ಷೆ ಇದೆ. 

10ನೇ ತರಗತಿ ಉತ್ತೀರ್ಣಗೊಂಡ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.  ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಬೃಹತ್ ವಾಹನ (Heavy License)ಚಲಾಯಿಸುವ ಪರವಾನಗಿ ಕಡ್ಡಾಯವಾಗಿರುತ್ತದೆ.

ಈ ಹುದ್ದೆ ಅರ್ಜಿ ಸಲ್ಲಿಸುವ  ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್‌ನ ಪ್ರಕಟಣೆಗಾಗಿ ನಿರೀಕ್ಷಿಸಿ.

click me!