₹8.5 ಕೋಟಿ ಸಂಬಳ ಕೆಲಸ ರಿಜೆಕ್ಟ್ ಮಾಡಿದ ರಿಷಬ್: ಮೆಟಾ ಜನಕ ಜುಕರ್‌ಬರ್ಗ್ ಮಾತನ್ನೇ ವಾಪಸ್ ಹೇಳಿಬಂದ ಭಾರತದ ಪ್ರತಿಭೆ!

Published : Jul 13, 2026, 10:23 PM IST
AI Researcher Rishabh Agrawal

ಸಾರಾಂಶ

ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ನೀಡಿದ ಬೃಹತ್ ಸಂಬಳದ ಆಫರ್ ತಿರಸ್ಕರಿಸಿದ ಐಐಟಿ ಬಾಂಬೆ ಪದವೀಧರ ರಿಷಬ್ ಅಗರ್ವಾಲ್, ಈಗ ಸ್ವಂತ ಎಐ ಸ್ಟಾರ್ಟ್‌ಅಪ್ ಕಟ್ಟುತ್ತಿದ್ದಾರೆ. ಇವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.

ಜಗತ್ತಿನ ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ 'ಮೆಟಾ' (Meta) ತನ್ನ ಕಂಪನಿಗೆ ಸೇರಲು ಕೋಟಿ ಕೋಟಿ ರೂಪಾಯಿ ಆಫರ್ ನೀಡಿದರೆ ಯಾರು ತಾನೇ ಬೇಡ ಎನ್ನುತ್ತಾರೆ? ಆದರೆ, ಐಐಟಿ ಬಾಂಬೆಯ ಪದವೀಧರ ರಿಷಬ್ ಅಗರ್ವಾಲ್ ಮಾತ್ರ ಮಾರ್ಕ್ ಜುಕರ್‌ಬರ್ಗ್ ನೀಡಿದ ಬೃಹತ್ ಆಫರ್ ಅನ್ನು ನಿರಾಯಾಸವಾಗಿ ತಿರಸ್ಕರಿಸಿ, ತಮ್ಮದೇ ಆದ ಹಾದಿಯನ್ನು ಕಂಡುಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

ಯಾರು ಈ ರಿಷಬ್ ಅಗರ್ವಾಲ್?

ಭಾರತದ ಅತ್ಯಂತ ಪ್ರತಿಭಾವಂತ ಎಐ (AI) ಸಂಶೋಧಕರಲ್ಲಿ ಒಬ್ಬರಾದ ರಿಷಬ್ ಅಗರ್ವಾಲ್, ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದವರು. ಜೆಇಇ (JEE) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 33ನೇ ರ್ಯಾಂಕ್ (AIR 33) ಪಡೆದಿದ್ದ ಇವರು, ನಂತರ ಕೆನಡಾದ ಮಾಂಟ್ರಿಯಲ್‌ನಲ್ಲಿ ಕೃತಕ ಬುದ್ಧಿಮತ್ತೆ (AI) ವಿಷಯದಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದರು. ಗೂಗಲ್ ಬ್ರೈನ್ (Google Brain), ಗೂಗಲ್ ಡೀಪ್‌ಮೈಂಡ್ (DeepMind) ಮತ್ತು ವಾಯ್ಮೊ (Waymo) ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಗೂಗಲ್‌ನ ಪ್ರಸಿದ್ಧ 'ಜೆಮಿನಿ' (Gemini) ಎಐ ಮಾಡೆಲ್ ರೂಪಿಸುವಲ್ಲಿಯೂ ಇವರ ಪಾತ್ರ ದೊಡ್ಡದಿದೆ.

ಜುಕರ್‌ಬರ್ಗ್ ಆಫರ್ ತಿರಸ್ಕರಿಸಿದ್ದೇಕೆ?

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮೆಟಾ ಕಂಪನಿಯು ತನ್ನ ಪ್ರಾಬಲ್ಯ ಸಾಧಿಸಲು ಪ್ರಮುಖ ಎಐ ಸಂಶೋಧಕರಿಗೆ ಲಕ್ಷಾಂತರ ಡಾಲರ್ ಸಂಬಳದ ಆಫರ್ ನೀಡುತ್ತಿತ್ತು. ಅದರಂತೆ ರಿಷಬ್ ಅವರಿಗೆ ಸುಮಾರು 1 ಮಿಲಿಯನ್ ಡಾಲರ್ (8.5 ಕೋಟಿ ರೂ.) ಗೂ ಅಧಿಕ ಸಂಬಳದ ಪ್ಯಾಕೇಜ್ ನೀಡಲಾಗಿತ್ತು. ಆದರೆ ರಿಷಬ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿ, 'ಮೆಟಾ ನೀಡಿದ ಆಫರ್ 1 ಮಿಲಿಯನ್ ಡಾಲರ್‌ಗಿಂತಲೂ ಹತ್ತು ಪಟ್ಟು ಹೆಚ್ಚಾಗಿತ್ತು' ಎಂದು ತಿಳಿಸಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ.

ಅಷ್ಟೊಂದು ದೊಡ್ಡ ಮೊತ್ತದ ಸಂಬಳದ ಆಫರ್ ಇದ್ದರೂ, ಮೆಟಾ ಸೂಪರ್ ಇಂಟೆಲಿಜೆನ್ಸ್ ಲ್ಯಾಬ್‌ನಲ್ಲಿ ಕೇವಲ ಐದು ತಿಂಗಳು ಕೆಲಸ ಮಾಡಿ ಅವರು ರಾಜೀನಾಮೆ ನೀಡಿದರು. ಈ ಬಗ್ಗೆ ಮಾತನಾಡುತ್ತಾ ಅವರು 'ವೇಗವಾಗಿ ಬದಲಾಗುತ್ತಿರುವ ಈ ಜಗತ್ತಿನಲ್ಲಿ, ಯಾವುದೇ ರಿಸ್ಕ್ ತೆಗೆದುಕೊಳ್ಳದಿರುವುದೇ ಜೀವನದ ದೊಡ್ಡ ರಿಸ್ಕ್' ಎಂದು ಜುಕರ್‌ಬರ್ಗ್ ಅವರದೇ ಮಾತನ್ನು ಉಲ್ಲೇಖಿಸಿದ್ದಾರೆ.

ಸ್ವಂತ ಎಐ ಸ್ಟಾರ್ಟ್‌ಅಪ್ ಆರಂಭ:

ಹಣ ಮತ್ತು ಪ್ರತಿಷ್ಠಿತ ಕಂಪನಿಯ ಕೆಲಸಕ್ಕಿಂತ ಹೆಚ್ಚಾಗಿ ಅವರಿಗೆ ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಹೀಗಾಗಿ ಅವರು 'ಪಿರಿಯಾಡಿಕ್ ಲ್ಯಾಬ್ಸ್' (Periodic Labs) ಎಂಬ ಎಐ ಸ್ಟಾರ್ಟ್‌ಅಪ್ ಅನ್ನು ಸ್ಥಾಪಿಸಿದ್ದಾರೆ. ಈ ಕಂಪನಿಯು ವಿಜ್ಞಾನದ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳನ್ನು (ಔಷಧಿಗಳು, ಹೊಸ ವಸ್ತುಗಳ ಸಂಶೋಧನೆ) ವೇಗಗೊಳಿಸಲು ಸಹಾಯ ಮಾಡುವ 'ಎಐ ಸೈಂಟಿಸ್ಟ್' ಅನ್ನು ಅಭಿವೃದ್ಧಿಪಡಿಸುತ್ತಿದೆ. ವಿಶೇಷವೆಂದರೆ, ಈ ಸ್ಟಾರ್ಟ್‌ಅಪ್‌ಗೆ ಜಗತ್ತಿನ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಮತ್ತು ಎನ್‌ವಿಡಿಯಾ (Nvidia) ಕಂಪನಿ ಬೆಂಬಲ ನೀಡುತ್ತಿವೆ.

ಕೋಟಿ ಕೋಟಿ ಸಂಬಳದ ಆಸೆಗಿಂತ ತನ್ನ ಕನಸು ಮತ್ತು ಸಂಶೋಧನೆಗೆ ಬೆಲೆ ನೀಡಿದ ರಿಷಬ್ ಅಗರ್ವಾಲ್ ಅವರ ಈ ನಿರ್ಧಾರ ಈಗ ಇಡೀ ಟೆಕ್ ಪ್ರಪಂಚದಲ್ಲಿ ಚರ್ಚೆಯ ವಿಷಯವಾಗಿದೆ.

PREV
Read more Articles on
click me!

Recommended Stories

KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಸ್ಪೆಂಡ್ ಬೆನ್ನಲ್ಲೇ ಡಾ.ಪ್ರಭುದೇವ್‌ಗೆ ಹಂಗಾಮಿ ಜವಾಬ್ದಾರಿ! ಇವರ ಹಿನ್ನೆಲೆ?
ಲಕ್ಷ, ಲಕ್ಷ ಪ್ಯಾಕೇಜ್‌ ಸಿಗುತ್ತೆ, ಇಂಜಿನಿಯರ್‌ ಎಂದು ಬೀಗಬೇಡ; ಮುಂದೆ ಇದೆ ಮಾರಿಹಬ್ಬ ಎಂದ AI