Zoom Meetings: ಬೆಸ್ಟ್‌ ಇಂಪ್ರೆಶನ್ ಬರುವಂತೆ ಮಾಡುವುದು ಹೇಗೆ ?

By Suvarna NewsFirst Published Mar 12, 2022, 5:00 PM IST
Highlights

ವರ್ಕ್‌ ಫ್ರಂ ಹೋಂ (Work From Home) ಬಂದ್ಮೇಲೆ ಆನ್‌ಲೈನ್‌ ಮೀಟಿಂಗ್‌ (Online Meeting)ಗಳು ಹೆಚ್ಚು ಫೇಮಸ್ ಆಗುತ್ತಿವೆ. ಆದ್ರೆ ಇಂಥಾ ಮೀಟಿಂಗ್‌ಗಳಲ್ಲಿ ಎಲ್ಲರೂ ಬಂದು ಒಂದೇ ಪರದೆಯಲ್ಲಿ ಸೇರಿರುತ್ತಾರೆ. ಹೀಗಿದ್ದಾಗ ನಿಮ್ಮ ಮೇಲೆ ಬೆಸ್ಟ್ ಇಂಪ್ರೆಶನ್ (Impression) ಬರುವಂತೆ ಮಾಡುವುದು ಹೇಗೆಂದು ನಿಮ್ಗೆ ಗೊತ್ತಾ ? ಇಲ್ಲಿದೆ ಕೆಲವೊಂದು ಟಿಪ್ಸ್‌.

ಕೊರೋನಾ (Corona) ಸೋಂಕು ಹರಡಲು ಆರಂಭವಾದಾಗಿನಿಂದ, ಕರ್ಫ್ಯೂ, ಲಾಕ್‌ಡೌನ್‌ ನಂತರ ಬಹುತೇಕ ಎಲ್ಲಾ ಕಡೆ ವರ್ಕ್‌ ಫ್ರಂ ಹೋಂ (Work From Home) ನಡೆಯುತ್ತಿದೆ. ಹೀಗಾಗಿ ಸಹಜವಾಗಿ ಅಪಾಯಿಂಟ್‌ಮೆಂಟ್‌, ಮೀಟಿಂಗ್‌ಗಳು ಸಹ ಆನ್‌ಲೈನ್‌ನಲ್ಲೇ ನಡೆಯುತ್ತವೆ. ಝೂಮ್‌, ಗೂಗಲ್ ಮೀಟ್‌ಗಳನ್ನು ಹಲವು ಸಂಸ್ಥೆಗಳು ಸಂವಹನಕ್ಕಾಗಿ ಬಳಸಿಕೊಳ್ಳುತ್ತಿವೆ. ಇಂಥಾ ಆನ್‌ಲೈನ್‌ ಮೀಟಿಂಗ್‌ನಲ್ಲಿ ಒಂದಷ್ಟು ಆಡಿಯೋ, ವೀಡಿಯೋ ಸಮಸ್ಯೆ ಕಂಡುಬಂದರೂ ಉಳಿದಂತೆ ಯಾವುದೇ ತೊಂದರೆಯಾಗುತ್ತಿಲ್ಲ.

2020 ನಮಗೆ ಕಲಿಸಿದ ಒಂದು ವಿಷಯವಿದ್ದರೆ, ವ್ಯವಹಾರದ ಆರೋಗ್ಯ ಮತ್ತು ಸುಸ್ಥಿರತೆಗೆ ಪರಿಣಾಮಕಾರಿ ಸಂವಹನವು ಎಷ್ಟು ಮುಖ್ಯವಾಗಿದೆ ಎಂಬುದಾಗಿದೆ. ಪ್ರತಿಯೊಂದು ಉತ್ತಮ ವ್ಯವಹಾರ ಪ್ರಸ್ತುತಿಯು ಉತ್ತಮ ಸಂವಹನದೊಂದಿಗೆ ಪ್ರಾರಂಭವಾಗುತ್ತದೆ. ಈ ವರ್ಷದವರೆಗೆ, ಬಹಳಷ್ಟು ವ್ಯವಹಾರಗಳು ಆನ್‌ಲೈನ್ ಮತ್ತು ಡಿಜಿಟಲ್ ಸಂವಹನದಲ್ಲಿ ತೊಡಗಿಕೊಂಡಿವೆ. ಹೀಗಾಗಿ ಎಲ್ಲಕ್ಕಿಂತ ಮುಖ್ಯವಾಗಿ ಆನ್‌ಲೈನ್ ಮೀಟ್‌ಗಳಲ್ಲಿ ಬೆಸ್ಟ್‌ ಇಂಪ್ರೆಶನ್ (Best Impression) ಬರುವಂತೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

Latest Videos

ನೀವು ಜೂಮ್ ಬಳಕೆದಾರರೇ, ಈಗ ಬಂದಿದೆ ಡಬಲ್ ಪ್ರೊಟೆಕ್ಷನ್..!

ಆನ್‌ಲೈನ್ ಮೀಟ್‌ಗಳಲ್ಲಿ ಬೆಸ್ಟ್‌ ಇಂಪ್ರೆಶನ್ ಬರುವಂತೆ ಮಾಡುವುದು ಹೇಗೆ ?
ಝೂಮ್, ಸ್ಕೈಪ್ ಮತ್ತು ಗೂಗಲ್ ಹ್ಯಾಂಗ್‌ಔಟ್‌ಗಳಂತಹ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳನ್ನುಆರಂಭದಲ್ಲಿ ಬಳಸುವಾಗ ಬಹುತೇಕರು ಮುಜುಗರ ಅನುಭವಿಸಿದ್ದು ನಿಜ. ಕಂಪ್ಯೂಟರ್, ಮೊಬೈಲ್‌ ಪರದೆಯಲ್ಲಿ ಕಂಡು ಬಂದ ಮುಖಗಳನ್ನು ನೋಡಿ ಮಾತನಾಡಲು ಹಿಂಜರಿದದ್ದು ಸಹ ನಿಜ. ನಂತರದ ದಿನಗಳಲ್ಲಿ ಅದು ರೂಢಿಯಾಗಿ ಹೋಯಿತು. ವಾಸ್ತವವಾಗಿ, ಜೂಮ್ 2020ರ ಜನವರಿ ಮತ್ತು ಫೆಬ್ರವರಿಯಲ್ಲಿ 2.22 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಸೇರಿಸಿದೆ ಎಂದು ಅಂದಾಜಿಸಲಾಗಿದೆ, ಇದು ಕಂಪನಿಯು 2019ರಲ್ಲಿ ಸೇರಿಸಿದ 1.99 ಮಿಲಿಯನ್ ಬಳಕೆದಾರರನ್ನು ಮೀರಿದೆ.

ನೀವು ಮೊದಲ ಬಾರಿಗೆ ಯಾರನ್ನಾದರೂ ಭೇಟಿಯಾಗುತ್ತಿದ್ದರೆ, ಅಲ್ಲಿ ಉತ್ತಮವಾದ ಅಭಿಪ್ರಾಯ ಮೂಡುವಂತೆ ಮಾಡುವುದು ಯಾವಾಗಲೂ ಮುಖ್ಯವಾಗಿದೆ. ಫಸ್ಟ್ ಇಂಪ್ರೆಶನ್‌ ಈಸ್ ಬೆಸ್ಟ್ ಇಂಪ್ರೆಶನ್ ಎಂಬಂತೆ ಮೊದಲ ಬಾರಿಗೆ ಮೂಡುವ ಅಭಿಪ್ರಾಯ ಉತ್ತಮವಾಗಿದ್ದರೆ ಚೆನ್ನಾಗಿರುತ್ತದೆ. ಇದಕ್ಕಾಗಿ ಏನು ಮಾಡಬೇಕು.

Zoom ವಿಡಿಯೋ ಮೀಟಿಂಗ್ ಆ್ಯಪ್‌ಗೆ ಪ್ರತಿಸ್ಪರ್ಧಿಯಾಗಿ ಬಂದಿದೆ ಭಾರತದ ನಮಸ್ತೆ ಆ್ಯಪ್!

ಸಂದರ್ಭಕ್ಕೆ ತಕ್ಕಂತೆ ಸರಿಯಾಗಿ ಉಡುಗೆ ಧರಿಸಿ
ಝೂಮ್‌ ಮೀಟಿಂಗ್‌ನಲ್ಲಿ ಹೆಚ್ಚಿನವರು ಮಾಡುವ ತಪ್ಪೆಂದರೆ ಸರಿಯಾಗಿ ಡ್ರೆಸ್ (Dress) ಮಾಡದಿರುವುದು. ಮುಖತಃ ಭೇಟಿಯಾಗುವುದು ಏನೂ ಅಲ್ವಲ್ವ ಜಸ್ಟ್‌ ಝೂಮ್ ಮೀಟಿಂಗ್‌ ತಾನೇ ಎಂದು ಹಲವರು ಡ್ರೆಸ್ ಮಾಡಿಕೊಳ್ಳಲು ಆಸಕ್ತಿ ತೋರಿಸುವುದಿಲ್ಲ. ಮೀಟಿಂಗ್‌ನಲ್ಲಿ ಮುಖ ಮಾತ್ರ ಕಾಣುವ ಕಾರಣ ಹೆಚ್ಚಿನವರು ಮೇಲೆ ಟಾಪ್‌ ಹಾಕಿದರೂ ಕೆಳಗಡೆ ನೈಟ್‌ ಶಾರ್ಟ್ಸ್‌ನಲ್ಲಿ ಇರುತ್ತಾರೆ. ನೀವು ಸಂಪೂರ್ಣವಾಗಿ ಯಾವ ರೀತಿ ಡ್ರೆಸ್ ಮಾಡಿದ್ದೀರಿ ಎಂಬುದು ಅವರಿಗೆ ಕಾಣುದಿಲ್ಲವಾದರೂ ಇದು ನಿಮ್ಮ ಆತ್ಮವಿಶ್ಚಾಸವನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ಝೂಮ್ ಮೀಟಿಂಗ್ ಅಟೆಂಡ್ ಆಗುವಾಗ ಸಂಪೂರ್ಣವಾಗಿ, ಸರಿಯಾಗಿ ರೆಡಿಯಾಗಿ.

ಸೂಕ್ತವಾದ ಹಿನ್ನೆಲೆಯನ್ನು ಆರಿಸಿ
ನೀವು ಕಾನ್ಫರೆನ್ಸ್ ಕೊಠಡಿಯಲ್ಲಿ  ಸಹೋದ್ಯೋಗಿಯನ್ನು ಭೇಟಿಯಾಗುತ್ತಿರುವಾಗ, ನಿಮ್ಮ ಹಿಂದೆ ಗೋಡೆಯ ಮೇಲೆ ಏನಾಗುತ್ತಿದೆ ಎಂಬುದರ ಬಗ್ಗೆ ನೀವು ಹೆಚ್ಚು ಗಮನ ಹರಿಸುವುದಿಲ್ಲ. ಆದರೆ ನೀವು ಜೂಮ್ ಮೂಲಕ ಯಾರೊಂದಿಗಾದರೂ ಭೇಟಿಯಾಗುತ್ತಿರುವಾಗ, ನೀವು ಉತ್ತಮವಾದ ಮೊದಲ ಆಕರ್ಷಣೆಯನ್ನು ಮಾಡಲು ಪ್ರಯತ್ನಿಸುತ್ತಿರುವಾಗ ಬ್ಯಾಕ್‌ಗ್ರೌಂಡ್ (Background) ಕಡೆಗಣಿಸಲಾಗದ ಪ್ರಮುಖ ವಿವರವಾಗಿದೆ.

ಹೆಚ್ಚು ಕಾರ್ಯನಿರತ ಅಥವಾ ಅಸ್ತವ್ಯಸ್ತವಾಗಿರದ ಸ್ಥಳವನ್ನು ಮೀಟಿಂಗ್ ಸಂದರ್ಭದಲ್ಲಿ ಆಯ್ಕೆ ಮಾಡಬೇಡಿ. ನೈಸರ್ಗಿಕ ಬೆಳಕಿನೊಂದಿಗೆ ಸರಿಯಾದ ಬೆಳಕಿರುವ ಸ್ಥಳವನ್ನು ಬ್ಯಾಕ್‌ಗ್ರೌಂಡ್‌ಗೆ ಬಳಸಿ. ಮನೆಯಲ್ಲಿ ಎಲ್ಲಿಯೂ ಅಂಥಾ ಸ್ಥಳ ಇಲ್ಲವೆಂದಾದರೆ ಅಸ್ತವ್ಯಸ್ತಗೊಂಡ ರೂಮನ್ನು ಮರೆಮಾಚಲು ನೀವು ಜೂಮ್‌ನ ಹಿನ್ನೆಲೆಗಳಲ್ಲಿ ಒಂದನ್ನು ಬಳಸಬಹುದು. 

ಲೈಟಿಂಗ್ ನಿರ್ಣಾಯಕವಾಗಿದೆ
ಝೂಮ್ ಮೀಟಿಂಗ್‌ನಲ್ಲಿ ಯಾವಾಗಲೂ ದೊಡ್ಡ ಕಿಟಕಿಗೆ ಎದುರಾಗಿ ಕುಳಿತುಕೊಳ್ಳಿ. ಕೃತಕ ಬೆಳಕಿಗಿಂತ ನೈಸರ್ಗಿಕ ಬೆಳಕು ಯಾವಾಗಲೂ ಉತ್ತಮವಾಗಿರುತ್ತದೆ. ಕೃತಕ ಬೆಳಕು ವಿಭಿನ್ನ ಬಣ್ಣಗಳ ತಾಪಮಾನದಲ್ಲಿ ಬರುತ್ತದೆ, ಅದು ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲ, ಆದರೆ ಕ್ಯಾಮರಾದಲ್ಲಿ ವಿಲಕ್ಷಣವಾಗಿ ಕಾಣುತ್ತದೆ. ಬೆಳಕಿನ ಮೂಲವು ನಿಮ್ಮ ಮುಂದೆ ಇದೆಯೇ ಹೊರತು ನಿಮ್ಮ ಹಿಂದೆ ಅಲ್ಲ ಎಂದು ಖಚಿತಪಡಿಸಿಕೊಳ್ಳಿ, 

ಕ್ಯಾಮರಾ ಆಂಗಲ್ ಸರಿಯಾಗಿರಲಿ: ಹಲವರು ಮಾಡುವ ತಪ್ಪು ಇದೆ. ಕ್ಯಾಮರಾ ಏನೋ ಆನ್ ಮಾಡಿಟ್ಟಿರುತ್ತಾರೆ. ಆದರೆ ಇದರಲ್ಲಿ ಅರ್ಧ ಮುಖ, ಸೈಡ್ ಮುಖ ಹೀಗೆ ಚಿತ್ರವಿಚಿತ್ರವಾಗಿ ಕಾಣುತ್ತದೆ. ಹೀಗಾಗಿ ಮೀಟಿಂಗ್ ಶುರುವಾಗುವ ಮೊದಲೇ ಕ್ಯಾಮರಾ ಆಂಗಲ್ ಸೆಟ್ ಮಾಡಿಟ್ಟುಕೊಳ್ಳಿ. ಸಂಪೂರ್ಣ ಸ್ಕ್ರೀನ್‌ನಲ್ಲಿ ಮುಖ ಸರಿಯಾಗಿ ಕಾಣುವಂತೆ ಕ್ಯಾಮರಾ ಹೊಂದಿಸಿಡಿ.

click me!