ಸಾಮಾನ್ಯವಾಗಿ ಕೆಲಸ ಮಾಡೋ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಸಾಕಷ್ಟು ಸವಲತ್ತುಗಳನ್ನು ಒದಗಿಸುತ್ತವೆ. ಆದರೆ ಮೈಕ್ರೋಸಾಫ್ಟ್‌ನಲ್ಲಿರೋ ಕೆಲವೊಂದು ಸವಲತ್ತುಗಳು ಮಾತ್ರ ಎಂಥವರನ್ನೂ ಬೆರಗಾಗಿಸುವಂತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಮೈಕ್ರೋಸಾಫ್ಟ್ ಮತ್ತು ಮೆಟಾದಂತಹ ಬಹುರಾಷ್ಟ್ರೀಯ ದೈತ್ಯ ಕಂಪೆನಿಗಳು ತಮ್ಮ ವ್ಯವಸ್ಥಿತವಾದ ಕಚೇರಿ ಪರಿಸರ ಮತ್ತು ಉದ್ಯೋಗಿಗಳಿಗೆ ನೀಡುವ ಹಲವು ಸವಲತ್ತುಗಳಿಗೆ ಹೆಸರುವಾಸಿಯಾಗಿದೆ. ಇತ್ತೀಚೆಗೆ, ಹೈದರಾಬಾದ್‌ನ ಕೆಲವು ಮೈಕ್ರೋಸಾಫ್ಟ್ ಉದ್ಯೋಗಿಗಳು ತಮ್ಮ ಆಫೀಸಿನಲ್ಲಿರುವ ಸುಸಜ್ಜಿತ ವ್ಯವಸ್ಥೆಯನ್ನು ಟ್ರೆಂಡಿಂಗ್ ವೀಡಿಯೊದಲ್ಲಿ ತೋರಿಸಿದ್ದಾರೆ. ವೈರಲ್ ಕ್ಲಿಪ್ ಫುಡ್ ವಿತರಿಸುವ ಮೆಷಿನ್, ನಿದ್ರೆ ಮಾಡುವ ರೂಮ್, ಶಟಲ್ ಆಡಲು ವ್ಯವಸ್ಥೆ, ಕೆಫೆಟೇರಿಯಾ ಮೊದಲಾದ ವ್ಯವಸ್ಥೆಗಳನ್ನು ತೋರಿಸುತ್ತದೆ. ಉದ್ಯೋಗಿಗಳು ಎಲ್ಲಿಂದಲಾದರೂ ಕೆಲಸ ಮಾಡಬಹುದಾದ ವ್ಯವಸ್ಥೆಯನ್ನು ತೋರಿಸಲಾಗಿದೆ.
ಈ ವೀಡಿಯೊವನ್ನು 54 ಎಕರೆ ವಿಸ್ತಾರವಾದ ಮೈಕ್ರೋಸಾಫ್ಟ್ ಇಂಡಿಯಾ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಚಿತ್ರೀಕರಿಸಲಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದೆ. ಒಂದು ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.
ಟಾಟಾ ಗ್ರೂಪ್ ಬ್ರ್ಯಾಂಡಿಂಗ್ ಬಳಸಲು ಭಾರತದ ಅತಿದೊಡ್ಡ ಐಟಿ ಕಂಪನಿ ನೀಡೋ ಹಣ ಎಷ್ಟು ನೋಡಿ..
ಉದ್ಯೋಗಿಗಳನ್ನು ವಜಾ ಮಾಡ್ತಿರೋ ಬಗ್ಗೆ ಪ್ರಶ್ನಿಸಿದ ನೆಟ್ಟಿಗರು
ವೀಡಿಯೊಗೆ ಪ್ರತಿಕ್ರಿಯಿಸಿದ ಮೈಕ್ರೋಸಾಫ್ಟ್ ಇಂಡಿಯಾ ಡೆವಲಪ್‌ಮೆಂಟ್ ಸೆಂಟರ್‌ನ ಇನ್‌ಸ್ಟಾಗ್ರಾಮ್ ಖಾತೆಯು, 'ಇದು ನಮ್ಮ ಮೈಕ್ರೋಸಾಫ್ಟ್ ಉದ್ಯೋಗಿಗಳ ಪೋಸ್ಟ್, ಖಂಡಿತವಾಗಿಯೂ ಇದು ಆರೋಗ್ಯಕರವಾಗಿರುತ್ತದೆ' ಎಂದು ಹೇಳಿದೆ.. ಕೆಲವು ಬಳಕೆದಾರರು ಉದ್ಯೋಗಿಗಳಿಗೆ ಸಿಗುತ್ತಿರುವ ಸವಲತ್ತಿಗೆ ಅಸೂಯೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಕಾಲೇಜು ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲು ಇಂಥಾ ವೀಡಿಯೊಗಳನ್ನು ಬಳಸಲು ಸಲಹೆ ನೀಡಿದರು.
ಇದೆಲ್ಲದರ ಮಧ್ಯೆ ಮೈಕ್ರೋಸಾಫ್ಟ್ ಇತ್ತೀಚಿಗೆ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬಗ್ಗೆ ಕೆಲವರು ಟೀಕಿಸಿದರು. ಅದ್ದೂರಿ ಸವಲತ್ತುಗಳ ಹೊರತಾಗಿಯೂ ಅನಿಶ್ಚಿತ ಉದ್ಯೋಗದ ಬಗ್ಗೆ ವ್ಯಂಗ್ಯವಾಡಿದರು.
15 ವರ್ಷದಿಂದ ಅನಾರೋಗ್ಯ ರಜೇಲಿದ್ರೂ ಸಂಬಳ ಜಾಸ್ತಿ ಮಾಡಿಲ್ಲ ಅಂತ ಕಂಪನಿ ವಿರುದ್ಧ ಕೇಸ್ ಹಾಕಿದ ಉದ್ಯೋಗಿ!
ಮೈಕ್ರೋಸಾಫ್ಟ್‌ನ ವೆಬ್‌ಸೈಟ್‌ನ ಪ್ರಕಾರ, ಕಂಪೆನಿಯು ಪ್ರಮಾಣೀಕೃತ ಕಟ್ಟಡಗಳನ್ನು ಒಳಗೊಂಡಂತೆ ಶಕ್ತಿ-ಸಮರ್ಥ ಮೂಲಸೌಕರ್ಯವನ್ನು ಹೊಂದಿದೆ. ಕ್ಯಾಂಪಸ್‌ನಲ್ಲಿ ವೈದ್ಯಕೀಯ ಸೇವೆಗಳು, ಹೊರಾಂಗಣ ಆಂಫಿಥಿಯೇಟರ್, ವೈಫೈನೊಂದಿಗೆ ಹವಾನಿಯಂತ್ರಿತ ಬಸ್ ಸೇವೆಗಳು, ಬ್ಯಾಂಕಿಂಗ್ ಸೌಲಭ್ಯಗಳು ಮತ್ತು ಫಿಟ್‌ನೆಸ್ ತರಗತಿಗಳೊಂದಿಗೆ ಸಂಪೂರ್ಣ ಸುಸಜ್ಜಿತ ಜಿಮ್ನಾಷಿಯಂನಂತಹ ಸೌಲಭ್ಯಗಳನ್ನು ಸಹ ಹೊಂದಿದೆ.
2022ರಲ್ಲಿ, ಜಪಾನಿನ ಕಂಪನಿಗಳಾದ ಇಟೊಕಿ ಕಾರ್ಪ್ ಮತ್ತು ಕೊಯೊಜು ಗೊಹಾನ್ ತಮ್ಮ ನವೀನ 'ನ್ಯಾಪ್ ಬಾಕ್ಸ್'ಗಾಗಿ ಕಚೇರಿಯ ನಿದ್ರೆಗಾಗಿ ವಿನ್ಯಾಸಗೊಳಿಸಿದ ಗಮನ ಸೆಳೆದರು. ಮೈಕ್ರೋಸಾಫ್ಟ್, ಆರೋಗ್ಯಕರ ವಿಶ್ರಾಂತಿ ಅಭ್ಯಾಸಗಳನ್ನು ಉತ್ತೇಜಿಸುತ್ತದೆ.