Eastern Railway Recruitment 2022: ಬರೋಬ್ಬರಿ 1201 ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna News  |  First Published May 12, 2022, 3:08 PM IST

ಪೂರ್ವ ರೈಲ್ವೆಯು   ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು  ಅರ್ಜಿ ಆಹ್ವಾನಿಸಿದೆ.  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 20, 2022 ಕೊನೆಯ ದಿನವಾಗಿದೆ. 
 


ಬೆಂಗಳೂರು (ಮೇ.12): ರೈಲ್ವೆ ಇಲಾಖೆ ಸೇರಲು ಬಯಸುವವರಿಗೆ ಸುವರ್ಣಾವಕಾಶವೊಂದು ಒಲಿದು ಬಂದಿದೆ. ಪೂರ್ವ ರೈಲ್ವೆ  (Eastern Railway ) ಯಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಅರ್ಹ ಅಭ್ಯರ್ಥಿಗಳು apprenticeshipindia.org ನಲ್ಲಿ ಅಪ್ರೆಂಟಿಸ್‌ಶಿಪ್ ಇಂಡಿಯಾದ ಅಧಿಕೃತ ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.   ಒಟ್ಟು  1,201  ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 20, 2022 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ತಾಣ https://er.indianrailways.gov.in/ ಗೆ ಭೇಟಿ ನೀಡಬಹುದು.

ಶೈಕ್ಷಣಿಕ ವಿದ್ಯಾರ್ಹತೆ: ಪೂರ್ವ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮತ್ತು ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.  ಅದರಂತೆ 10 ನೇ ತರಗತಿ, ಕನಿಷ್ಠ ಶೇ.55 ಅಂಕಗಳೊಂದಿಗೆ  ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು. 10ನೇ ತರಗತಿ ಪಾಸ್ ಜತೆಗೆ ಐಟಿಐ ವಿವಿಧ ಟ್ರೇಡ್‌ಗಳಾದ ಫಿಟ್ಟರ್ / ವೆಲ್ಡರ್ / ಮೆಕ್ಯಾನಿಕಲ್ / ಮಷಿನಿಸ್ಟ್‌ / ಕಾರ್ಪೆಂಟರ್ / ಪೇಂಟರ್ / ಲೈನ್‌ಮೆನ್ / ವೈಯರ್‌ಮೆನ್ / ರೆಫ್ರಿಜೆರೇಟರ್ ಮತ್ತು ಎಸಿ ಮೆಕ್ಯಾನಿಕ್ / ಇಲೆಕ್ಟ್ರೀಷಿಯನ್ / ಟೂಲ್ ಮಷಿನಿಸ್ಟ್‌‌ ಯಾವುದೇ ಟ್ರೇಡ್ ಓದಿರುವವರು ಅರ್ಜಿ ಸಲ್ಲಿಸಬಹುದು.

Latest Videos

undefined

NIT Karnataka Recruitment 2022: ಸಂಶೋಧನಾ ಅಭ್ಯರ್ಥಿ ಹುದ್ದೆಗಳಿಗೆ ನೇಮಕಾತಿ

ವಯೋಮಿತಿ: ಪೂರ್ವ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 15 ರಿಂದ 24 ವರ್ಷದ ಒಳಗಿರಬೇಕು. ನಿಯಮಾನುಸಾರ ವಯೋಮಿತಿ ಸಡಿಲಿಕೆ ಇದೆ.

ಆಯ್ಕೆ  ಪ್ರಕ್ರಿಯೆ:  ಪೂರ್ವ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು   ಮೆರಿಟ್ ಆಧಾರದಲ್ಲಿ ಆಯ್ಕೆ ಪಟ್ಟಿ  ಮಾಡಿ ಬಳಿಕ ದಾಖಲಾತಿ ಪರಿಶೀಲನೆ ಮತ್ತು ಕೌಶಲ್ಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:  ಪೂರ್ವ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ₹100 ಅರ್ಜಿ ಶುಲ್ಕ ಪಾವತಿಸಬೇಕು. SC/ST, PWBD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ವೇತನ ವಿವರ:   ಪೂರ್ವ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ₹8,000 ದಿಂದ ₹15,000 ಮಾಸಿಕ ವೇತನ ದೊರೆಯಲಿದೆ.

SSC RECRUITMENT 2022: ಬರೋಬ್ಬರಿ 1920 ಹುದ್ದೆಗಳಿಗೆ ಅರ್ಜಿ ಆಹ್ವಾನ

 ಆಗ್ನೇಯ ಮಧ್ಯ ರೈಲ್ವೆಯಲ್ಲಿ  ವಿವಿಧ ಅಪ್ರೆಂಟಿಸ್ ಹುದ್ದೆ:  ರೈಲ್ವೆ ಇಲಾಖೆ ಸೇರಲು ಬಯಸುವವರಿಗೆ ಸುವರ್ಣಾವಕಾಶವೊಂದು ಒಲಿದು ಬಂದಿದೆ. ಆಗ್ನೇಯ ಮಧ್ಯ ರೈಲ್ವೆ (South East Central Railway -SECR ) ಯಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಅರ್ಹ ಅಭ್ಯರ್ಥಿಗಳು apprenticeshipindia.org ನಲ್ಲಿ ಅಪ್ರೆಂಟಿಸ್‌ಶಿಪ್ ಇಂಡಿಯಾದ ಅಧಿಕೃತ ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.   ಒಟ್ಟು  1,033   ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 24, 2022 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ತಾಣ https://secr.indianrailways.gov.in/ ಗೆ ಭೇಟಿ ನೀಡಬಹುದು.

click me!